
ಚೀನಾ
ಬೀಜಿಂಗ್: ಚೀನಾ ತೈವಾನ್ ಬಳಿಯಲ್ಲಿ ಸೇನಾ ಡ್ರಿಲ್ ಮೂಲಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗೆ ಪ್ರತಿಕ್ರಿಯೆ ರವಾನಿಸಿದೆ.
ತೈವಾನ್ ನ್ನು ಬಲಪ್ರಯೋಗದ ಮೂಲಕ ಆಕ್ರಮಿಸುವ ಚೀನಾದ ಯಾವುದೇ ಪ್ರಯತ್ನಕ್ಕೂ ಅಮೆರಿಕ ಸೇನೆಯ ಮೂಲಕವೇ ಉತ್ತರಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದರು.
ಜೋ ಬೈಡನ್ ಹೇಳಿಕೆಗೆ ಚೀನಾ ಸೇನೆಯ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ತೈವಾನ್ ಬಳಿಯಲ್ಲೇ ಸೇನಾ ಡ್ರಿಲ್ ನಡೆಸಿದೆ. ತೈವಾನ್ ಸ್ವಾಯತ್ತ ದೇಶವಾಗಿದ್ದರೂ ಚೀನಾ ಮಾತ್ರ ತೈವಾನ್ ನ್ನು ತನ್ನದೇ ಪ್ರಾಂತ್ಯ ಎಂದು ಹೇಳುತ್ತಿದೆ.
ಈ ಹಿಂದೆ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅಗತ್ಯ ಎದುರಾದಲ್ಲಿ ದ್ವೀಪವನ್ನು ಪಡೆಯುವ ಬೆದರಿಕೆ ಹಾಕಿದ್ದರು.