ಟೆಕ್ಸಾಸ್ ಶಾಲೆಯಲ್ಲಿ ಶೂಟೌಟ್: ಮಕ್ಕಳನ್ನು ರಕ್ಷಿಸಲು ಹೋಗಿ ಹತ್ಯೆಯಾದ ಶಿಕ್ಷಕಿಯ ಪತಿ ಹೃದಯಾಘಾತದಿಂದ ಸಾವು!
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ಹತ್ಯಾಕಾಂಡ ಪ್ರಕರಣದ ಬಳಿಕ ಹಲವು ಮನಕಲಕುವ ಘಟನೆಗಳು ಬಯಲಾಗ್ತಿವೆ. ಶಾಲೆಗೆ ನುಗ್ಗಿ ಯುವಕನೊಬ್ಬ ಮಕ್ಕಳ ಹತ್ಯಾಕಾಂಡ ನಡೆಸಿದ ಸಂದರ್ಭದಲ್ಲಿ...
Published: 27th May 2022 07:27 PM | Last Updated: 28th May 2022 12:58 PM | A+A A-

ಶಿಕ್ಷಕಿ ಇರ್ಮಾ ಗಾರ್ಸಿಯಾ - ಪತಿ ಜೋ
ವಾಷಿಂಗ್ಟನ್: ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ಹತ್ಯಾಕಾಂಡ ಪ್ರಕರಣದ ಬಳಿಕ ಹಲವು ಮನಕಲಕುವ ಘಟನೆಗಳು ಬಯಲಾಗ್ತಿವೆ. ಶಾಲೆಗೆ ನುಗ್ಗಿ ಯುವಕನೊಬ್ಬ ಮಕ್ಕಳ ಹತ್ಯಾಕಾಂಡ ನಡೆಸಿದ ಸಂದರ್ಭದಲ್ಲಿ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸುವ ವೇಳೆ ಹತ್ಯೆಯಾದ ನಾಲ್ಕನೇ ತರಗತಿಯ ಶಿಕ್ಷಕಿಯ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ತಾನು ಶಿಕ್ಷಕಿ ಇರ್ಮಾ ಗಾರ್ಸಿಯಾ ಅವರ ಸೋದರಸಂಬಂಧಿ ಎಂದು ಹೇಳಿದ ಡೆಬ್ರಾ ಆಸ್ಟಿನ್ ಸ್ಥಾಪಿಸಿದ ಗೋ ಫಂಡ್ ಮಿ ಪೇಜ್, ಇರ್ಮಾ ಅವರ ಪತಿ ಜೋ ವೈದ್ಯಕೀಯ ತುರ್ತುಸ್ಥಿತಿಯ ಪರಿಣಾಮವಾಗಿ ಇಂದು ಬೆಳಗ್ಗೆ (5/26/2022) ನಿಧನರಾದರು” ಎಂದು ಹೇಳಿದೆ.
ಇದನ್ನು ಓದಿ: ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿಯ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ
“ಜೋ ಹೃದಯಾಘಾತದಿಂದ ಮರಣಹೊಂದಿದರು ಮತ್ತು ಅವರು ಜೀವನದ ಪ್ರೀತಿಯನ್ನು ಕಳೆದುಕೊಂಡಿದ್ದರು ಎಂದು ನಾನು ನಿಜವಾಗಿಯೂ ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.
ತನ್ನನ್ನು ಗಾರ್ಸಿಯಾ ಅವರ ಸೋದರಳಿಯ ಎಂದು ಗುರುತಿಸಿಕೊಂಡಿರುವ ಜಾನ್ ಮಾರ್ಟಿನೆಜ್ ಕೂಡ ಟ್ವೀಟ್ ಮಾಡಿದ್ದಾರೆ: “ಅತ್ಯಂತ ಹೃದಯವಿದ್ರಾವಕ ಮತ್ತು ನನ್ನ ಚಿಕ್ಕಮ್ಮ ಇರ್ಮಾ ಅವರ ಪತಿ ಜೋ ಗಾರ್ಸಿಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಹೇಳಲು ತೀವ್ರ ದುಃಖವಾಗುತ್ತಿದೆ” ಎಂದಿದ್ದಾರೆ.
ರಾಬ್ ಎಲಿಮೆಂಟರಿ ಶಾಲೆಯ ವೆಬ್ಸೈಟ್ ಪ್ರಕಾರ, 24 ವರ್ಷಗಳ ಹಿಂದೆ ವಿವಾಹವಾದ ದಂಪತಿ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.
ಇರ್ಮಾ ಗಾರ್ಸಿಯಾ ಮತ್ತು ಅವರ ಸಹ-ಶಿಕ್ಷಕಿ ಇವಾ ಮಿರೆಲೆಸ್ ಇಬ್ಬರೂ ತರಗತಿಯಲ್ಲಿ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದರು.
ಕಳೆದ ಬುಧವಾರ 18 ವರ್ಷದ ಶೂಟರ್ ಸಾಲ್ವಡಾರ್ ರಾಮೋಸ್, ಪೊಲೀಸರು ಪ್ರವೇಶಿಸುವ ಮೊದಲು ಸುಮಾರು 40 ನಿಮಿಷಗಳ ಕಾಲ ಶಾಲಾ ಕಟ್ಟಡದೊಳಗೆ ಇದ್ದನು ಮತ್ತು ಮಕ್ಕಳು ಹಾಗೂ ಶಿಕ್ಷಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದನು. ಘಟನೆಯಲ್ಲಿ 19 ಶಾಲಾ ಮಕ್ಕಳು ಸಾವನ್ನಪ್ಪಿದ್ದರು.