
ಪತನಗೊಂಡ ವಿಮಾನದ ಅವಶೇಷ
ಪೋಖರಾ: ಹಿಮಾಲಯದಲ್ಲಿ 22 ಮಂದಿಯೊಂದಿಗೆ ನಾಪತ್ತೆಯಾಗಿದ್ದ ಪ್ರಯಾಣಿಕ ವಿಮಾನದ ಅವಶೇಷಗಳಿಂದ 14 ಮೃತದೇಹಗಳನ್ನು ನೇಪಾಳ ಸೇನಾ ಸಿಬ್ಬಂದಿ ಸೋಮವಾರ ಹೊರತೆಗೆದಿದ್ದಾರೆ.
ನಿನ್ನೆ ಭಾನುವಾರ ಬೆಳಗ್ಗೆ ಪಶ್ಚಿಮ ನೇಪಾಳದ ಪೊಖರಾದಿಂದ ಜನಪ್ರಿಯ ಟ್ರೆಕ್ಕಿಂಗ್ ತಾಣವಾದ ಜೋಮ್ಸಮ್ಗೆ ಹೊರಟ ಸ್ವಲ್ಪ ಸಮಯದಲ್ಲಿ ನೇಪಾಳದ ವಾಹಕ ತಾರಾ ಏರ್ ನಿರ್ವಹಿಸುವ ಒಟ್ಟರ್ ವಿಮಾನದೊಂದಿಗೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಳೆದುಕೊಂಡಿತು.
ಮಿಲಿಟರಿ ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಿಸುವ ಹೆಲಿಕಾಪ್ಟರ್ಗಳು ನಿನ್ನೆ ಇಡೀ ದಿನ ದೂರದ ಪರ್ವತ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ತಂಡದ ನೆರವಿನೊಂದಿಗೆ ಹುಡುಕಾಟ ನಡೆಸಿದವು., ಪ್ರತಿಕೂಲ ಹವಾಮಾನದಿಂದಾಗಿ ಸಮುದ್ರ ಮಟ್ಟದಿಂದ ಸುಮಾರು 3,800-4,000 ಮೀಟರ್ (12,500-13,000 ಅಡಿಗಳಷ್ಟು) ಎತ್ತರದಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಇದನ್ನೂ ಓದಿ: ನೇಪಾಳದಲ್ಲಿ ವಿಮಾನ ಅಪಘಾತ: ಅವಶೇಷಗಳನ್ನು ಪತ್ತೆಹಚ್ಚಿದ ಸೇನಾಪಡೆ
ಇಂದು ಮುಂಜಾನೆ ಮತ್ತೆ ಶೋಧಕಾರ್ಯ ಆರಂಭಗೊಂಡಾಗ ನೇಪಾಳ ಸೈನ್ಯವು ಸಾಮಾಜಿಕ ಮಾಧ್ಯಮದಲ್ಲಿ ವಿಮಾನದ ಭಾಗಗಳು ಮತ್ತು ಇತರ ಶಿಲಾಖಂಡರಾಶಿಗಳ ಫೋಟೋವನ್ನು ಹಂಚಿಕೊಂಡಿದೆ, 9N-AET ನೋಂದಣಿ ಸಂಖ್ಯೆಯು ಸ್ಪಷ್ಟವಾಗಿ ಗೋಚರಿಸುವ ರೆಕ್ಕೆ ಸೇರಿದಂತೆ ವಿಮಾನದ ಅವಶೇಷಗಳು ಪರ್ವತದ ಮೇಲೆ ಬಿದ್ದಿದೆ.
ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಇಬ್ಬರು ಜರ್ಮನ್ನರು, ಉಳಿದ ನೇಪಾಳಿಗಳಿದ್ದರು. ಅಪಘಾತದ ಕಾರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಮುಸ್ತಾಂಗ್ ಜಿಲ್ಲೆಯ ಥಾಸಾಂಗ್ ಗ್ರಾಮೀಣ ಪುರಸಭೆಯ ಸಾನೋಸ್ವೇರ್ ಪ್ರದೇಶದಲ್ಲಿ 14,500 ಅಡಿ (4,420 ಮೀಟರ್) ಎತ್ತರದಲ್ಲಿ ವಿಮಾನವು ಅಪಘಾತಕ್ಕೀಡಾಗಿ ಪತನವಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ದೃಢಪಡಿಸಿದೆ.
ಇದನ್ನೂ ಓದಿ: ನೇಪಾಳ: 4 ಭಾರತೀಯರು ಸೇರಿ 22 ಜನರಿದ್ದ ವಿಮಾನ ನಾಪತ್ತೆ, ಅಪಘಾತಕ್ಕೀಡಾಗಿರುವ ಶಂಕೆ
ಇದುವರೆಗೆ 14 ಮಂದಿಯ ಶವಗಳನ್ನು ಹೊರತೆಗೆಯಲಾಗಿದ್ದು ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಹವಾಮಾನ ಪ್ರತಿಕೂಲವಾಗಿದ್ದು ಶೋಧಕಾರ್ಯ ತಂಡವನ್ನು ದುರ್ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಲು ನಮಗೆ ಸಾಧ್ಯವಾಯಿತು. ಬೇರೆ ಯಾವುದೇ ವಿಮಾನಕ್ಕೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ವಿಮಾನಯಾನ ಪ್ರಾಧಿಕಾರದ ವಕ್ತಾರ ಡಿಯೊ ಚಂದ್ರ ಲಾಲ್ ಕರ್ನ್ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.