ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಗೆ ಭಾರತದಿಂದ 2.5 ಮಿಲಿಯನ್ ಯುಎಸ್ ಡಾಲರ್ ನೆರವು!
ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ.
Published: 01st November 2022 12:31 AM | Last Updated: 01st November 2022 12:31 AM | A+A A-

ಪ್ಯಾಲೆಸ್ತೀನ್ ನಿರಾಶ್ರಿತರು
ವಿಶ್ವಸಂಸ್ಥೆ: ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಭಾರತವು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA)ಗೆ 2.5 ಮಿಲಿಯನ್ ಡಾಲರ್ ನೆರವು ನೀಡಿದೆ.
ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಏಜೆನ್ಸಿಯ ಪ್ರಮುಖ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಇದು ಬೆಂಬಲಿಸುತ್ತದೆ ಎಂದು ರಾಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
UNRWA ಯ ಅಧಿಕೃತ ಹೇಳಿಕೆಯ ಪ್ರಕಾರ, ಭಾರತೀಯ ವಿದೇಶಾಂಗ ಸಚಿವಾಲಯದ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ವಿಭಾಗದ ನಿರ್ದೇಶಕ ಸುನಿಲ್ ಕುಮಾರ್ ಅವರು UNRWA ನ ಸಹಭಾಗಿತ್ವದ ವಿದೇಶಿ ಸಂಬಂಧಗಳ ವಿಭಾಗದ ನಿರ್ದೇಶಕ ಕರೀಮ್ ಅಮೆರ್ ಅವರಿಗೆ ಚೆಕ್ ನೀಡಿದರು.
ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಕರೀಂ ಅಮೇರ್
ಕರೀಮ್ ಅಮೇರ್ ಅವರು ಪ್ಯಾಲೆಸ್ತೀನ್ ನಿರಾಶ್ರಿತರಿಗೆ ನಿರಂತರ ಪ್ರಯತ್ನಗಳಿಗಾಗಿ ಭಾರತಕ್ಕೆ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಯೋಚಿತ ಕೊಡುಗೆಯು ಯುಎನ್‌ಆರ್‌ಡಬ್ಲ್ಯುಎಯ ಕೆಲಸಗಳಿಗೆ ಮತ್ತು ಪ್ಯಾಲೆಸ್ತೀನ್ ನಿರಾಶ್ರಿತರ ಕಲ್ಯಾಣಕ್ಕೆ ಬದ್ಧತೆಗೆ ಭಾರತದ ಅಚಲ ಬೆಂಬಲದ ಬಲವಾದ ಪ್ರದರ್ಶನವಾಗಿದೆ ಎಂದು ಅವರು ಹೇಳಿದರು.
ಭಾರತವು 20 ಮಿಲಿಯನ್ ಯುಎಸ್ ಡಾಲರ್ಗಳನ್ನು ನೀಡಿದೆ
ಭಾರತವು UNRWAಗೆ ಸಮರ್ಪಿತ ದಾನಿಯಾಗಿದೆ. ಇದು 2018 ರಿಂದ ಮಧ್ಯಪ್ರಾಚ್ಯದಲ್ಲಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗೆ ಪ್ರಮುಖ UNRWA ಸೇವೆಗಳಿಗೆ ಬೆಂಬಲವಾಗಿ 20 ಮಿಲಿಯನ್ ಅಮೆರಿಕನ್ ಡಾಲರ್ ನೀಡಿದೆ. 1949ರಲ್ಲಿ ಮಾನವೀಯ ಸಂಸ್ಥೆಯಾಗಿ ಸ್ಥಾಪಿತವಾದ UNRWA ಸಂಪೂರ್ಣವಾಗಿ ಸ್ವಯಂಪ್ರೇರಿತ ಕೊಡುಗೆಗಳು ಮತ್ತು ದಾನಿ ದೇಶಗಳ ಅನುದಾನಗಳ ಮೂಲಕ ಹಣವನ್ನು ನೀಡಲಾಗುತ್ತದೆ.