
ಮಗುವನ್ನು ರಕ್ಷಿಸಿದ ಯುವಕ
ದಕ್ಷಿಣ ಚೀನಾ: ಎರಡನೇ ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಆರು ವರ್ಷದ ಬಾಲಕನೊಬ್ಬನನ್ನು ರಕ್ಷಿಸಿದ ದಕ್ಷಿಣ ಚೀನಾದ ಯುವಕನನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.
ಕಾರಿನ ಬಳಿಯಿದ್ದ ಯುವಕ, ಮಗುವಿನ ಚೀರಾಟದ ಶಬ್ದ ಕೇಳಿ ಮಗು ಬೀಳುವ ಸ್ಥಳದ ಬಳಿ ನಿಂತು ಆರು ವರ್ಷದ ಮಗುವನ್ನು ಕೈಯಿಂದ ಹಿಡಿದು ಬದುಕಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
This heroic man tried to catch a 6-year-old boy who had fallen from the second floor of a building in southern China. pic.twitter.com/nIp2tD8CKi
— South China Morning Post (@SCMPNews) November 8, 2022
ದಕ್ಷಿಣ ಚೀನಾದಲ್ಲಿ ಈ ಘಟನೆ ನಡೆದಿರುವುದಾಗಿ ಮಾರ್ನಿಂಗ್ ಪೋಸ್ಟ್ ಇಂದು ವರದಿ ಮಾಡಿದೆ. ಸಣ್ಣ ಪುಟ್ಟ ಗಾಯವಾಗಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ.