ಇಂಡೋನೇಷ್ಯಾದ ಜಿ20 ಘೋಷಣೆಯ ಮಾತುಕತೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ: ಅಮೆರಿಕ
ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾಡಿದ್ದ ಘೋಷಣೆಗಳ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಮೆರಿಕದ ಶ್ವೇತಭವನ ಹೇಳಿದೆ.
Published: 19th November 2022 09:04 AM | Last Updated: 19th November 2022 02:35 PM | A+A A-

ಮೋದಿ-ಜೋ ಬೈಡನ್ ಮಾತುಕತೆ
ವಾಷಿಂಗ್ಟನ್: ಇಂಡೋನೇಷ್ಯಾದ ಬಾಲಿಯಲ್ಲಿ ಮುಕ್ತಾಯಗೊಂಡ ಜಿ20 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾಡಿದ್ದ ಘೋಷಣೆಗಳ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಮೆರಿಕದ ಶ್ವೇತಭವನ ಹೇಳಿದೆ. ನಿನ್ನೆ ಹೇಳಿಕೆ ಬಿಡುಗಡೆ ಮಾಡಿರುವ ಶ್ವೇತಭವನ ಇಂದಿನ ಯುಗ ಯುದ್ಧದಿಂದ ಕೂಡಿರಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು, ಉಕ್ರೇನ್-ರಷ್ಯಾ ಯುದ್ಧ ಸಂಬಂಧ ಮೋದಿಯವರ ಹೇಳಿಕೆ ಬಗ್ಗೆ ಶ್ಲಾಘಿಸಿದೆ.
ಶೃಂಗಸಭೆಯ ಘೋಷಣೆಯ ಮಾತುಕತೆಗೆ ಭಾರತ ಪ್ರಮುಖ ಪಾತ್ರ ವಹಿಸಿದೆ. ಇಂದಿನ ಯುಗವು ಯುದ್ಧದಿಂದ ಕೂಡಿರಬಾರದು ಎಂದು ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ನಿನ್ನೆ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಸುದ್ದಿಗಾರರಿಗೆ ಹೇಳಿದರು.
ಜಾಗತಿಕ ಆರ್ಥಿಕತೆಯನ್ನು ನಿರ್ಮಿಸುವ ನಮ್ಮ ಪ್ರಯತ್ನಗಳನ್ನು ಮುಂದುವರಿಸುವಾಗ ಪ್ರಸ್ತುತ ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳನ್ನು ಎದುರಿಸಲು ನಮ್ಮ ಹಾದಿ ಮುಂದುವರಿಯಬೇಕಿದೆ ಎಂದು ನಾವು ಶೃಂಗಸಭೆಯಲ್ಲಿ ಆದ್ಯತೆ ನೀಡಿದ್ದೇವೆ ಎಂದರು.
ಇದನ್ನೂ ಓದಿ: 2023ರ ಜಿ20 ಶೃಂಗಸಭೆಯ ಅಧ್ಯಕ್ಷತೆ ಆತಿಥ್ಯ ಹೊಣೆ ಸ್ವೀಕರಿಸಿದ ಭಾರತ: ಬಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?
ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂಡೋನೇಷ್ಯಾದಿಂದ ಮೊನ್ನೆ ಗುರುವಾರ ವಾಪಸ್ಸಾಗಿದ್ದರು. ಮುಂದಿನ ವರ್ಷ 2023ರ ಡಿಸೆಂಬರ್ ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಆತಿಥ್ಯವನ್ನು ಭಾರತ ವಹಿಸಲಿದೆ. ಪ್ರಧಾನಿ ಮೋದಿಯವರ ಸಂಬಂಧವು ಇಂಡೋನೇಷ್ಯಾದ ಶೃಂಗಸಭೆ, ಮುಂದಿನ ವರ್ಷ ಬಾಲಿಯಲ್ಲಿ ನಡೆಯಲಿರುವ ಸಭೆಗೆ ನಿರ್ಣಾಯಕವಾಗಿದೆ. ಮುಂದಿನ ವರ್ಷ ಭಾರತದ G-20 ಅಧ್ಯಕ್ಷ ಸ್ಥಾನವನ್ನು ಬೆಂಬಲಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಜೀನ್-ಪಿಯರ್ ಹೇಳಿದರು.
ಶೃಂಗಸಭೆಯ ಬದಿಯಲ್ಲಿ ಮೊನ್ನೆ ಬೈಡನ್ ಮತ್ತು ಮೋದಿ, ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿದ್ದರು.