ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ: ಸೌದಿ ದೊರೆ ಬಗ್ಗೆ ಯು-ಟರ್ನ್‌, ಟೀಕೆಗೆ ಗುರಿಯಾದ ಬೈಡನ್ ಆಡಳಿತ

2018 ರಲ್ಲಿ ನಡೆದಿದ್ದ ಅಮೆರಿಕ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಕ್ರೂರ ಹತ್ಯೆಯಲ್ಲಿ ಸರ್ಕಾರದ ಮುಖ್ಯಸ್ಥರಾಗಿರುವಾಗ  ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂಬ ತನ್ನ ನಿಲುವಿನಿಂದಾಗಿ ಜೋ-ಬೈಡನ್ ಆಡಳಿತವು ಟೀಕೆಗೆ ಗುರಿಯಾಗಿದೆ.
ಪತ್ರಕರ್ತ ಜಮಾಲ್ ಖಶೋಗಿ
ಪತ್ರಕರ್ತ ಜಮಾಲ್ ಖಶೋಗಿ

ವಾಷಿಂಗ್ಟನ್: 2018 ರಲ್ಲಿ ನಡೆದಿದ್ದ ಅಮೆರಿಕ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಕ್ರೂರ ಹತ್ಯೆಯಲ್ಲಿ ಸರ್ಕಾರದ ಮುಖ್ಯಸ್ಥರಾಗಿರುವಾಗ  ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂಬ ತನ್ನ ನಿಲುವಿನಿಂದಾಗಿ ಜೋ-ಬೈಡನ್ ಆಡಳಿತವು ಟೀಕೆಗೆ ಗುರಿಯಾಗಿದೆ.

ಎಂಬಿಎಸ್ ಎಂದು ಖ್ಯಾತರಾದ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂಬ ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ನ ಕಾನೂನು ನಿಲುವು ಬರ್ಬರ ಹತ್ಯೆಯಲ್ಲಿ ಎಂಬಿಎಸ್ ಪಾತ್ರದ ಹೊಣೆಗಾರಿಕೆಯನ್ನು ಹುಡುಕುವಲ್ಲಿ ಬೈಡನ್ ಆಡಳಿತ ವಿಫಲವಾಗಿದೆ ಎಂದು  ಹ್ಯೂಮನ್ ರೈಟ್ಸ್ ವಾಚ್ ಹೇಳಿದೆ.

ಖಶೋಗ್ಗಿ ಭೀಕರ ಹತ್ಯೆಗೆ ಕಾರಣರಾದ ಸೌದಿ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಬೈಡನ್ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿಲ್ಲ,  ಸೌದಿ ಸರ್ಕಾರದ ವಿರುದ್ಧ ನಿಜವಾದ ನಿರ್ಬಂಧಗಳಿಲ್ಲದೆ,  ಎಂಬಿಎಸ್ ಅಮೆರಿಕದ ಮಿಲಿಟರಿ, ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲದೊಂದಿಗೆ ಎಂಜಾಯ್ ಮಾಡುತ್ತಾ, ಅಮೆರಿಕದ ನೀತಿಯನ್ನು 'ಹಸಿರು ದೀಪ' ಎಂದು ತಿಳಿದುಕೊಂಡಿದ್ದಾನೆ ಎಂದು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ನವೆಂಬರ್ 21 ರಂದು ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com