ಚರ್ಮದ ಕ್ಯಾನ್ಸರ್ ಕುರಿತು ಜಾಗೃತಿ: ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಬೆತ್ತಲಾದ ಸಾವಿರಾರು ಜನ
ಸಿಡ್ನಿಯ ಐಕಾನಿಕ್ ಬೋಂಡಿ ಬೀಚ್‌ನಲ್ಲಿ ಶನಿವಾರ ಸಾವಿರಾರು ಜನ ಸಾಮೂಹಿಕವಾಗಿ ಬೆತ್ತಲೆಯಾಗಿ ಚರ್ಮದ ಕ್ಯಾನ್ಸರ್ ಮತ್ತು ಸೂರ್ಯನ ಸುರಕ್ಷತೆಯ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.
Published: 26th November 2022 07:26 PM | Last Updated: 26th November 2022 07:26 PM | A+A A-

ಬೋಂಡಿ ಬೀಚ್ ನಲ್ಲಿ ಬೆತ್ತಲಾದ ಸಾವಿರಾರು ಜನ
ಸಿಡ್ನಿ: ಸಿಡ್ನಿಯ ಐಕಾನಿಕ್ ಬೋಂಡಿ ಬೀಚ್‌ನಲ್ಲಿ ಶನಿವಾರ ಸಾವಿರಾರು ಜನ ಸಾಮೂಹಿಕವಾಗಿ ಬೆತ್ತಲೆಯಾಗಿ ಚರ್ಮದ ಕ್ಯಾನ್ಸರ್ ಮತ್ತು ಸೂರ್ಯನ ಸುರಕ್ಷತೆಯ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.
ಇಂದು ಬೆಳಗ್ಗೆ ಸುಮಾರು 2,500 ಪುರುಷರು ಮತ್ತು ಮಹಿಳೆಯರು ಬೋಂಡಿ ಬೀಚ್ ನಲ್ಲಿ ಬೆತ್ತಲೆಯಾಗಿ, ಬೆತ್ತಲೆ ಫೋಟೋ ತೆಗೆಯುವುದಕ್ಕೆ ಖ್ಯಾತಿ ಗಳಿಸಿರುವ ಕಲಾವಿದ ಸ್ಪೆನ್ಸರ್ ಟ್ಯೂನಿಕ್ ಅವರಿಗೆ ಪೋಸ್ ನೀಡಿದರು.
ಇದನ್ನು ಓದಿ: ಲಂಡನ್ ನಲ್ಲಿ ಕೂಚುಪುಡಿ ನೃತ್ಯ ಮಾಡಿ ಮನಸೆಳೆದ ರಿಷಿ ಸುನಕ್ ಮಗಳು ಅನೌಷ್ಕಗೆ ಭಾರತ ಎಂದರೆ ಬಹಳ ಅಚ್ಚುಮೆಚ್ಚು!
ಸ್ಪೆನ್ಸರ್ ಟ್ಯೂನಿಕ್ ಅವರು 2500 ಜನ ಬಟ್ಟೆ ಕಳಚಿ ಬೆತ್ತಲಾಗಿ ಸಮುದ್ರದ ಕಡೆ ಮುಖ ಮಾಡಿ ನಿಂತಿರುವ ಫೋಟೋ ತೆಗೆದಿದ್ದಾರೆ.
ಚಾರಿಟಿಯ ಸಹಯೋಗದೊಂದಿಗೆ "ಸ್ಟ್ರಿಪ್ ಆಫ್ ಫಾರ್ ಸ್ಕಿನ್ ಕ್ಯಾನ್ಸರ್" ಎಂಬ ದೊಡ್ಡ ಕಾರ್ಯಕ್ರಮವು ಆಸ್ಟ್ರೇಲಿಯನ್ನರನ್ನು ನಿಯಮಿತವಾಗಿ ಚರ್ಮ ತಪಾಸಣೆ ಮಾಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ.
ಆಸ್ಟ್ರೇಲಿಯಾದಲ್ಲಿ ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಈ ವಿಭಿನ್ನ ಪ್ರಯತ್ನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.