ಬೋರಿಸ್ ನಿಷ್ಠರಾದ ಪ್ರೀತಿ ಪಟೇಲ್ ಬೆಂಬಲ, ಸುನಕ್ ಬಹುತೇಕ ಯುಕೆ ಬ್ರಿಟನ್ ನಿಶ್ಚಿತ

ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿ ರೇಸ್ ನಿಂದ ಹೊರಗುಳಿದ ನಂತರ ಅವರ ನಿಷ್ಠರಾದ ಪ್ರೀತಿ ಪಟೇಲ್ , ಭಾರತೀಯ ಸಂಜಾತ ರಿಷಿ ಸುನಕ್  ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರು ಯುಕೆ ಪ್ರಧಾನಿಯಾಗುವುದು ಬಹುತೇಕ ನಿಶ್ಚಿತವಾಗಿದೆ.
ಪ್ರೀತಿ ಪಟೇಲ್, ರಿಷಿ ಸುನಕ್
ಪ್ರೀತಿ ಪಟೇಲ್, ರಿಷಿ ಸುನಕ್

ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಪ್ರಧಾನಿ ರೇಸ್ ನಿಂದ ಹೊರಗುಳಿದ ನಂತರ ಅವರ ನಿಷ್ಠರಾದ ಪ್ರೀತಿ ಪಟೇಲ್ , ಭಾರತೀಯ ಸಂಜಾತ ರಿಷಿ ಸುನಕ್  ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರು ಯುಕೆ ಪ್ರಧಾನಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಕಳೆದ ತಿಂಗಳು ಲಿಜ್ ಟ್ರಸ್ ಪ್ರಧಾನಿಯಾಗಿ ಆಯ್ಕೆಯಾದಾಗ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ ಭಾರತೀಯ ಮೂಲದ ಮಾಜಿ ಗೃಹ ಕಾರ್ಯದರ್ಶಿ,  ಹೊಸ ನಾಯಕನಾಗಿ ಯಶಸ್ವಿಯಾಗಲು ಸುನಕ್‌ಗೆ ಉತ್ತಮ ಅವಕಾಶ ನೀಡಲು ಸಂಸದರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಎಂದು ಹೇಳಿದ್ದಾರೆ. 

ಸುನಕ್ ಬ್ರಿಟನ್ ಪ್ರಧಾನಿಯಾಗಿ ಹೊಸ ಇತಿಹಾಸ ನಿರ್ಮಿಸಲು ಮುಂಚೂಣಿಯಲ್ಲಿರುವಂತೆಯೇ, ಅವರ ಬೆಂಬಲಕ್ಕೆ ಧಾವಿಸಿರುವ ಪ್ರೀತಿ ಪಟೇಲ್,   ಈ ಕಷ್ಟದ ಸಮಯದಲ್ಲಿ ನಾವು ಸಾರ್ವಜನಿಕ ಸೇವೆಗೆ ಆದ್ಯತೆ ನೀಡುವ ಮೂಲಕ ಒಂದಾಗಬೇಕು ಮತ್ತು ಒಟ್ಟಾಗಿ ಕೆಲಸ ಮಾಡಬೇಕು ಎಂದು  ಟ್ವೀಟ್ ಮಾಡಿದ್ದಾರೆ.

ಹಿಂದೂ ಹಬ್ಬ ದೀಪಾವಳಿ ಸಂತೋಷದಾಯಕ ಹಬ್ಬವಾಗಿದೆ. ಇದು ಆತ್ಮಾವಲೋಕನ, ಕುಟುಂಬ, ಸ್ನೇಹಿತರು ಮತ್ತು ಇತರರಿಗೆ ಸೇವೆ ಮಾಡುವ ಸಮಯ. ಸಂತೋಷದ ದೀಪಾವಳಿ ಆಚರಿಸಲು  ಬಯಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ತವರು ರಾಷ್ಟ್ರ ಹಾಗೂ ವಿದೇಶದಲ್ಲಿ ಸಾರ್ವಜನಿಕ ಸೇವೆಯಲ್ಲಿ ತನ್ನ ಕೊಡುಗೆಯನ್ನು ಮುಂದುವರೆಸುವ ವಿಶ್ವಾಸವಿದೆ ಎಂದು ಸುನಕ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com