ಮೆಸಾಚುಸೆಟ್ಸ್ ನಲ್ಲಿ ರಸ್ತೆ ಅಪಘಾತ: ಮೂವರು ಭಾರತೀಯ ವಿದ್ಯಾರ್ಥಿಗಳು ಸಾವು
ಭಾರತದ ಮೂವರು ವಿದ್ಯಾರ್ಥಿಗಳು ಈ ವಾರ ಪಶ್ಚಿಮ ಮ್ಯಾಸಚೂಸೆಟ್ಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Published: 28th October 2022 09:45 AM | Last Updated: 28th October 2022 09:45 AM | A+A A-

ಸಾಂದರ್ಭಿಕ ಚಿತ್ರ
ಮೆಸಾಚುಸೆಟ್ಸ್: ಭಾರತದ ಮೂವರು ವಿದ್ಯಾರ್ಥಿಗಳು ಈ ವಾರ ಪಶ್ಚಿಮ ಮ್ಯಾಸಚೂಸೆಟ್ಸ್‌ನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಶೆಫೀಲ್ಡ್‌ನಲ್ಲಿ ಮಂಗಳವಾರ ಬೆಳಿಗ್ಗೆ 5:30 ರ ಸುಮಾರಿಗೆ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡ ಇತರ ಐದು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ರ್ಕ್‌ಷೈರ್ ಜಿಲ್ಲೆಯ ಅಟಾರ್ನಿ ಕಚೇರಿ ಹೇಳಿಕೆ ತಿಳಿಸಿದೆ.
ಏಳು ಜನರಿದ್ದ ಮಿನಿವ್ಯಾನ್ ಕೇವಲ ಚಾಲಕನಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಮಿನಿವ್ಯಾನ್‌ನಲ್ಲಿದ್ದ ಆರು ಜನರು ನ್ಯೂ ಹೆವನ್ ವಿಶ್ವವಿದ್ಯಾನಿಲಯಕ್ಕೆ ಮತ್ತು ಒಬ್ಬರು ಫೇರ್‌ಫೀಲ್ಡ್‌ನಲ್ಲಿರುವ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾನಿಲಯದಲ್ಲಿ ಹಾಜರಾಗಿದ್ದರು ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.
ಮೃತ ಮೂವರನ್ನು ಪ್ರೇಮ್ ಕುಮಾರ್ ರೆಡ್ಡಿ ಗೋಡಾ, ಪಾವನಿ ಗುಲ್ಲಪಲ್ಲಿ ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ ಎಂದು ಗುರುತಿಸಲಾಗಿದೆ. ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವ್ಯಾನ್ ನಲ್ಲಿದ್ದ ಇತರ ನಾಲ್ವರು ಬದುಕುಳಿದಿದ್ದಾರೆ.
ಗೋಡಾ ಸೇಕ್ರೆಡ್ ಹಾರ್ಟ್‌ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಓದುತ್ತಿದ್ದ ಎಂದು ವಿಶ್ವವಿದ್ಯಾಲಯ ದೃಢಪಡಿಸಿದೆ. "ಪ್ರೇಮ್ ಅವರ ಕುಟುಂಬಕ್ಕೆ ಸಂತಾಪವನ್ನು ವಿಶ್ವವಿದ್ಯಾನಿಲಯ ತಿಳಿಸಿದೆ. ಟ್ರಕ್ ಚಾಲಕ 46 ವರ್ಷದ ಸ್ಥಳೀಯ ವ್ಯಕ್ತಿಯಾಗಿದ್ದು, ಅಪಘಾತದ ಕಾರಣ ಕುರಿತು ತನಿಖೆಯ ಹಂತದಲ್ಲಿದೆ.