ಸಿಯೋಲ್ ಕಾಲ್ತುಳಿತಕ್ಕೆ ನೂರಾರು ಮಂದಿ ಬಲಿ, ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ ಅಧ್ಯಕ್ಷ, ವಿಶ್ವ ನಾಯಕರ ಕಂಬನಿ

ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೆಲ್ ಭಾನುವಾರ ರಾಷ್ಟ್ರೀಯ ಘೋಷಿಸಿದ್ದಾರೆ. ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಮಾರಣಾಂತಿಕ ಸಿಯೋಲ್ ಕಾಲ್ತುಳಿತದಿಂದ 19 ಮಂದಿ ವಿದೇಶಿಯರು ಸೇರಿದಂತೆ ಕನಿಷ್ಠ 151 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೋಲ್

ಸಿಯೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್-ಯೆಲ್ ಭಾನುವಾರ ರಾಷ್ಟ್ರೀಯ ಘೋಷಿಸಿದ್ದಾರೆ. ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಮಾರಣಾಂತಿಕ ಸಿಯೋಲ್ ಕಾಲ್ತುಳಿತದಿಂದ 19 ಮಂದಿ ವಿದೇಶಿಯರು ಸೇರಿದಂತೆ ಕನಿಷ್ಠ 151 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. (Seol stampede during Halloween celebrations)

ರಾಷ್ಟ್ರದ ಧ್ವಜವನ್ನು ಕೆಳಗಿಳಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ನಿನ್ನೆ ಶನಿವಾರ ರಾತ್ರಿ ಸಿಯೋಲ್‌ನ ಇಟಾವೊನ್ ಜಿಲ್ಲೆಯಲ್ಲಿ ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 151 ಜನರು ಮೃತಪಟ್ಟಿದ್ದು ಸುಮಾರು 100 ಮಂದಿ ಗಾಯಗೊಂಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಯೋನ್‌ಹಾಪ್ ಸುದ್ದಿ ಸಂಸ್ಥೆ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಕಾಲ್ತುಳಿತದ ಒಂದು ದಿನದ ನಂತರ, ಅಧ್ಯಕ್ಷೀಯ ಕಚೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ನೇರ ಭಾಷಣ ಮಾಡಿದ ಯೂನ್, "ಇದು ನಿಜವಾಗಿಯೂ ಭಯಾನಕವಾಗಿದೆ, ಈ ದುರಂತ ಎಂದಿಗೂ ಸಂಭವಿಸಬಾರದಿತ್ತು ಎಂದು ಹೇಳಿದ್ದಾರೆ. 

"ಜನರ ಜೀವನ ಮತ್ತು ಸುರಕ್ಷತೆಯ ಹೊಣೆಯನ್ನು ಅಧ್ಯಕ್ಷನಾಗಿ ಹೊತ್ತಿದ್ದು, ನನ್ನ ಹೃದಯ ಭಾರವಾಗಿದೆ. ನನ್ನ ದುಃಖವನ್ನು ನಿಭಾಯಿಸಲು ನಾನು ಹೆಣಗಾಡುತ್ತಿದ್ದೇನೆ ಎಂದಿದ್ದಾರೆ. ಅಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳು ತಮ್ಮ ಧ್ವಜಗಳನ್ನು ಅರ್ಧಕ್ಕೆ ಇಳಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಾವಿಗೆ ಸಂತಾಪ ವ್ಯಕ್ತಪಡಿಸಿದ ಯೂನ್, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಮಾರಣಾಂತಿಕ ಘಟನೆಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯ ಸಿದ್ಧತೆಗಳಿಗೆ ಸರ್ಕಾರ ಸಹಾಯ ಮಾಡುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಸರ್ಕಾರ ಬದ್ಧವಾಗಿದೆ, ಸಹಾಯದ ಅಗತ್ಯವಿರುವವರಿಗೆ ಪ್ರತ್ಯೇಕವಾಗಿ ಸಾರ್ವಜನಿಕ ಸೇವಕರನ್ನು ನಿಯೋಜಿಸಲಾಗುವುದು. 

ಘಟನೆಗೆ ಕಾರಣವನ್ನು ಪತ್ತೆ ಹಚ್ಚುವುದು ಮತ್ತು ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ, ಭವಿಷ್ಯದಲ್ಲಿ ಇಂತಹ ಅಪಘಾತಗಳು ಮತ್ತೆ ಸಂಭವಿಸದಂತೆ ಮೂಲಭೂತ ಸುಧಾರಣೆಗಳನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

ವಿಶ್ವ ನಾಯಕರ ಕಂಬನಿ: ದಕ್ಷಿಣ ಕೊರಿಯಾ ರಾಜಧಾನಿ ಸಿಯೋಲ್​ನಲ್ಲಿ ನಡೆದ ಭೀಕರ ದುರಂತ ಪ್ರಕರಣ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಸಂತಾಪ​ ಸೂಚಿಸಿದ್ದಾರೆ.  ಅಲ್ಲದೆ ದಕ್ಷಿಣ ಕೊರಿಯಾಗೆ ಅಗತ್ಯ ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com