ಅಮೆರಿಕ: ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಬಂಧನ

ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟುಪೆಲೋದಲ್ಲಿ ಉದ್ದೇಶಪೂರ್ವಕವಾಗಿ ವಾಲ್‌ಮಾರ್ಟ್‌ಗೆ ವಿಮಾನ ಅಪ್ಪಳಿಸಿ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು,...
ವಿಮಾನ
ವಿಮಾನ

ಟ್ಯುಪೆಲೊ: ಅಮೆರಿಕದ ಈಶಾನ್ಯ ಮಿಸ್ಸಿಸ್ಸಿಪ್ಪಿ ನಗರದ ಟುಪೆಲೋದಲ್ಲಿ ಉದ್ದೇಶಪೂರ್ವಕವಾಗಿ ವಾಲ್‌ಮಾರ್ಟ್‌ಗೆ ವಿಮಾನ ಅಪ್ಪಳಿಸಿ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಪೈಲಟ್ ಅನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪೈಲಟ್ ನನ್ನು  ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಮಿಸಿಸಿಪ್ಪಿ ಗವರ್ನರ್ ಟೇಟ್ ರೀವ್ಸ್ ಶನಿವಾರ ತಿಳಿಸಿದ್ದಾರೆ.

ಪೊಲೀಸರು ಪೈಲಟ್‌ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಪೈಲಟ್‌ನ ಗುರುತು ಅಥವಾ ಉದ್ದೇಶದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

"ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಯಾರೂ ಗಾಯಗೊಂಡಿಲ್ಲ" ಎಂದು ಗವರ್ನರ್ ರೀವ್ಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಉತ್ತರ ಎಂಎಸ್ ಮೇಲಿನ ವಿಮಾನವು ಕೆಳಗಿಳಿದಿದೆ. ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಯಾರೂ ಗಾಯಗೊಂಡಿಲ್ಲ. ಈ ಪರಿಸ್ಥಿತಿಯನ್ನು ತೀವ್ರ ವೃತ್ತಿಪರತೆಯಿಂದ ನಿರ್ವಹಿಸಿದ ಸ್ಥಳೀಯ, ರಾಜ್ಯ ಮತ್ತು ಫೆಡರಲ್ ಕಾನೂನು ಜಾರಿ ಸಂಸ್ಥೆಗಳಿಗೆ ಧನ್ಯವಾದಗಳು" ಎಂದು ರೀವ್ಸ್ ಟ್ವೀಟ್‌ ಮಾಡಿದ್ದಾರೆ.

ಟುಪೆಲೋ ಮೇಲೆ ಹಾರುತ್ತಿದ್ದ ವಿಮಾನವೊಂದರ ಪೈಲಟ್ ಮಿಸ್ಸಿಸ್ಸಿಪ್ಪಿಯಲ್ಲಿರುವ ವಾಲ್‌ಮಾರ್ಟ್ ಅಂಗಡಿಗೆ ಅಪ್ಪಳಿಸುವುದಾಗಿ ಬೆದರಿಕೆ ಹಾಕಿದ್ದರು. ಬೆದರಿಕೆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿದ್ದ ವಾಲ್‌ಮಾರ್ಟ್ ಮತ್ತು ಇತರ ಅಂಗಡಿಗಳಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ಪೈಲಟ್ ಜೊತೆ ನೇರವಾಗಿ ಮಾತನಾಡಲು ಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com