ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ

ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸುಯೆಲ್ಲಾ ಬ್ರಾವರ್‌ಮನ್
ಸುಯೆಲ್ಲಾ ಬ್ರಾವರ್‌ಮನ್

ಲಂಡನ್: ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ಬ್ರಿಟನ್ ನ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಭಾರತೀಯ ಮೂಲದ ಸಹ ಸಹೋದ್ಯೋಗಿ ಪ್ರೀತಿ ಪಟೇಲ್ ಅವರ ಬದಲಾಗಿ ಸುಯೆಲ್ಲಾ ಅವರಿಗೆ ಈ ಸ್ಥಾನ ನೀಡಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನ ಹೊಸ ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರು ಸುಯೆಲ್ಲಾ ಬ್ರಾವರ್‌ಮನ್ ಅವರನ್ನು ತಮ್ಮ ಗೃಹ ಕಾರ್ಯದರ್ಶಿಯಾಗಿ ನೇಮಿಸಿದ್ದರು.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಸುಯೆಲ್ಲಾ ಅವರು, 'ನಾವು ನಮ್ಮ ಕೆಲಸವನ್ನು ಪ್ರಾರಂಭಿಸಿದಾಗ ತಂಡವನ್ನು ಭೇಟಿ ಮಾಡಲು ಈ ಸಂಜೆ ಬ್ರಿಟನ್ ಗೃಹಕಚೇರಿಯಲ್ಲಿರಲು ಉತ್ತಮವಾಗಿದೆ. ನಮ್ಮ ಬೀದಿಗಳನ್ನು ಸುರಕ್ಷಿತಗೊಳಿಸುವುದು, ನಮ್ಮ ಭದ್ರತಾ ಸೇವೆಗಳನ್ನು ಬೆಂಬಲಿಸುವುದು ಮತ್ತು ವಲಸೆಯನ್ನು ನಿಯಂತ್ರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ನೀವು ಅತ್ಯುತ್ತಮ ಮತ್ತು ಸಮರ್ಪಿತ ತಂಡ ಮತ್ತು ನೀವು ಹೆಮ್ಮೆಪಡುವಂತಹ ದೊಡ್ಡ ಮೊತ್ತವನ್ನು ಸಾಧಿಸಿದ್ದೀರಿ ಎಂದು ಟ್ರಸ್ ಅವರ ಕುರಿತು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ 2020-2022 ರ ನಡುವೆ ಸುಯೆಲ್ಲಾ ಬ್ರಾವರ್‌ಮನ್ ಅವರು ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು, ಅವರು ಜನವರಿಯಿಂದ ನವೆಂಬರ್ 2018 ರವರೆಗೆ ಯುರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಲು ಡಿಪಾರ್ಟ್‌ಮೆಂಟ್‌ನಲ್ಲಿ ಪಾರ್ಲಿಮೆಂಟರಿ ಅಂಡರ್ ಸೆಕ್ರೆಟರಿ ಆಫ್ ಸ್ಟೇಟ್ (ಕಾರ್ಯದರ್ಶಿ) ಆಗಿದ್ದರು. ಸುಯೆಲ್ಲಾ ಮೇ 2015 ರಲ್ಲಿ ಫೇರ್‌ಹ್ಯಾಮ್‌ಗೆ ಕನ್ಸರ್ವೇಟಿವ್ ಸಂಸದರಾಗಿ ಆಯ್ಕೆಯಾದರು.

ರಾಣಿಯಿಂದ ಹೊಸ ಪ್ರಧಾನಿ ನೇಮಕ
ಇನ್ನು ರಾಣಿ ಎಲಿಜಬೆತ್ II ಮಂಗಳವಾರ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್ ಅವರನ್ನು ಯುನೈಟೆಡ್ ಕಿಂಗ್‌ಡಂನ ಹೊಸ ಪ್ರಧಾನ ಮಂತ್ರಿಯಾಗಿ ನೇಮಿಸಿದರು. "ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಲಿಜ್ ಟ್ರಸ್ ರನ್ನು ರಾಣಿ ಆಹ್ವಾನಿಸಿದರು. ಅಂತೆಯೇ ಹೊಸ ಆಡಳಿತವನ್ನು ರಚಿಸುವಂತೆ ಅವರನ್ನು ಕೇಳಿದರು. ಟ್ರಸ್ ಅವರು ರಾಣಿ ಅವರ ಪ್ರಸ್ತಾಪವನ್ನು ಸ್ವೀಕರಿಸಿದರು ಮತ್ತು ಪ್ರಧಾನ ಮಂತ್ರಿ ಮತ್ತು ಖಜಾನೆಯ ಮೊದಲ ಲಾರ್ಡ್ ಆಗಿ ನೇಮಕಗೊಂಡರು ಎಂದು ರಾಜಮನೆತನವು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com