NATO ಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನ ಕೈಬಿಟ್ಟ ಅಮೆರಿಕ!
ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ.
Published: 24th September 2022 03:20 PM | Last Updated: 24th September 2022 03:58 PM | A+A A-

ಸಂಗ್ರಹ ಚಿತ್ರ
ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರಕ್ಕೆ ಶಾಕ್ ನೀಡಿರುವ ಅಮೆರಿಕ ಸರ್ಕಾರ, NATOಯೇತರ ಮಿತ್ರ ರಾಷ್ಟ್ರ ಪಟ್ಟಿಯಿಂದ ಅಫ್ಘಾನಿಸ್ತಾನವನ್ನು ಕೈ ಬಿಟ್ಟಿದೆ.
ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಒಂದು ವರ್ಷದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದ ಪ್ರಮುಖ NATO ಅಲ್ಲದ ಮಿತ್ರರಾಷ್ಟ್ರ ಎಂಬ ಸ್ಥಾನವನ್ನು ಕೊನೆಗೊಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ನಾಚಿಕೆಯಿಲ್ಲದೆ ಉಕ್ರೇನ್ ನಲ್ಲಿ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ: ಬೈಡೆನ್
2012 ರಲ್ಲಿ, ಅಮೆರಿಕ ಅಫ್ಘಾನಿಸ್ತಾನವನ್ನು ಪ್ರಮುಖ NATO ಅಲ್ಲದ (MNNA) ಮಿತ್ರ ಎಂದು ಹೆಸರಿಸಿತ್ತು. ಇದು ರಕ್ಷಣಾ ಮತ್ತು ಆರ್ಥಿಕ ಸಂಬಂಧವನ್ನು ಕಾಪಾಡಿಕೊಳ್ಳಲು ಉಭಯ ದೇಶಗಳಿಗೆ ಮಾರ್ಗವನ್ನು ಸೃಷ್ಟಿಸಿತು. ಈ ಸ್ಥಾನವು ಅಫ್ಘಾನಿಸ್ತಾನಕ್ಕೆ ರಕ್ಷಣೆ ಮತ್ತು ಭದ್ರತೆ-ಸಂಬಂಧಿತ ನೆರವು ಮತ್ತು ಸಲಕರಣೆಗಳ ವಿಷಯದಲ್ಲಿ ಹಲವಾರು ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡಲು ನೆರವಾಗಿತ್ತು.
"1961ರ ವಿದೇಶಿ ಸಹಾಯ ಕಾಯಿದೆಯ ಸೆಕ್ಷನ್ 517 ಸೇರಿದಂತೆ, ಅಮೇರಿಕ ಸಂವಿಧಾನ ಮತ್ತು ಕಾನೂನುಗಳಿಂದ ನನಗಿರುವ ಅಧ್ಯಕ್ಷರ ಅಧಿಕಾರದ ಮೂಲಕ... ನಾನು ಅಫ್ಘಾನಿಸ್ತಾನವನ್ನು ಪ್ರಮುಖ NATO ಅಲ್ಲದ ಮಿತ್ರ ರಾಷ್ಟ್ರ ಸ್ಥಾನಮಾನವನ್ನು ಈ ಮೂಲಕ ಕೊನೆಗೊಳಿಸುತ್ತೇನೆ ಎಂದು ಬೈಡನ್ ಹೇಳಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನವಾಜ್ ಷರೀಫ್ ವಿರುದ್ಧ ವಾಗ್ದಾಳಿ
non-NATO allyಯನ್ನು ಮೊದಲ ಬಾರಿಗೆ 1987 ರಲ್ಲಿ ರಚಿಸಲಾಯಿತು. ಅಂದಿನಿಂದ ಇಲ್ಲಿವಯವರೆಗೂ ಈ ಪಟ್ಟಿಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬಹ್ರೇನ್, ಬ್ರೆಜಿಲ್, ಕೊಲಂಬಿಯಾ, ಈಜಿಪ್ಟ್, ಇಸ್ರೇಲ್, ಜಪಾನ್, ಜೋರ್ಡಾನ್, ಕುವೈತ್, ಮೊರಾಕೊ, ನ್ಯೂಜಿಲೆಂಡ್, ಪಾಕಿಸ್ತಾನ, ಫಿಲಿಪೈನ್ಸ್, ಕತಾರ್, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಟುನೀಶಿಯಾ ಸೇರಿದಂತೆ ಒಟ್ಟು 19 ರಾಷ್ಟ್ರಗಳಿದ್ದವು. ಇದೀಗ ಈ ಪಟ್ಟಿಯಿಂದ ಆಫ್ಘಾನಿಸ್ತಾನವನ್ನು ಕೈ ಬಿಡಲಾಗಿತ್ತು ಇದರೊಂದಿಗೆ ಈ ಪಟ್ಟಿಯಲ್ಲಿನ ರಾಷ್ಟ್ರಗಳ ಸಂಖ್ಯೆ 18ಕ್ಕೆ ಕುಸಿದಿದೆ.