ತೈಲ ಬೆಲೆ ಏರಿಕೆ ಭಾರತದ ಆರ್ಥಿಕತೆಗೆ ಹಾನಿಕಾರಿ: ವಿದೇಶಾಂಗ ಸಚಿವ ಎಸ್ ಜೈಶಂಕರ್

ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ 2,000 ಅಮೆರಿಕಾ ಡಾಲರ್ ತಲಾ ಆರ್ಥಿಕತೆಯನ್ನು ಹೊಂದಿರುವ ಭಾರತವು ತೈಲ ಬೆಲೆ ಏರಿಕೆಯ ಬಗ್ಗೆ ಚಿಂತಿತವಾಗಿದೆ. ಅದು 'ನಮ್ಮ ಬೆನ್ನು ಮುರಿಯುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಜೈ ಶಂಕರ್
ಜೈ ಶಂಕರ್

ವಾಷಿಂಗ್ಟನ್: ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ 2,000 ಅಮೆರಿಕಾ ಡಾಲರ್ ತಲಾ ಆರ್ಥಿಕತೆಯನ್ನು ಹೊಂದಿರುವ ಭಾರತವು ತೈಲ ಬೆಲೆ ಏರಿಕೆಯ ಬಗ್ಗೆ ಚಿಂತಿತವಾಗಿದೆ. ಅದು 'ನಮ್ಮ ಬೆನ್ನು ಮುರಿಯುತ್ತಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. 

ದ್ವಿಪಕ್ಷೀಯ ಮಾತುಕತೆಯ ನಂತರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಮ್ಮ ಇಂಧನ ಅಗತ್ಯಗಳನ್ನು ಹೇಗೆ ಪೂರೈಸಬೇಕು ಎಂಬ ಬಗ್ಗೆ ಆಳವಾದ ಕಾಳಜಿ ಇದೆ ಎಂದು ಹೇಳಿದರು.

ಉಕ್ರೇನ್ ಯುದ್ಧದ ಬಗ್ಗೆ ಮಾತನಾಡುತ್ತಾ, 'ನಾವು ಖಾಸಗಿಯಾಗಿ, ಸಾರ್ವಜನಿಕವಾಗಿ, ಗೌಪ್ಯವಾಗಿ ಮತ್ತು ಸ್ಥಿರವಾಗಿ ಈ ಸಂಘರ್ಷವು ಯಾರ ಹಿತಾಸಕ್ತಿಯಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದೇವೆ'. ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಮರಳುವುದು ಉತ್ತಮ ಮಾರ್ಗವಾಗಿದೆ ಎಂದು ಜೈಶಂಕರ್ ಹೇಳಿದರು.

ರಷ್ಯಾದ ತೈಲದ ಮಿತಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, 'ನಾವು ಹಿಂದೆ ಏನಾದರೂ ಕೊಡುಗೆ ನೀಡಲು ಸಾಧ್ಯವಾದಾಗಲೆಲ್ಲಾ, ನಾವು ಅದಕ್ಕೆ ಮುಕ್ತರಾಗಿದ್ದೇವು'. ಆದರೆ ಇದೀಗ ಕೆಲವು ಸಮಸ್ಯೆಗಳಿವೆ ಎಂದು ಅವರು ಹೇಳಿದರು.

ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳು ರಷ್ಯಾದ ಮೇಲೆ ಕಡಿಮೆ ಪರಿಣಾಮ ಬೀರುವುದರಿಂದ, G-7 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವು ಕ್ರೆಮ್ಲಿನ್ ಆದಾಯವನ್ನು ಮಿತಿಗೊಳಿಸಲು ರಷ್ಯಾದ ಕಚ್ಚಾ ಮತ್ತು ಸಂಸ್ಕರಿಸಿದ ಉತ್ಪನ್ನಗಳ ಮೇಲೆ ತೈಲ ಬೆಲೆ ಮಿತಿಗಳನ್ನು ವಿಧಿಸಿದೆ.

ಈ ತಿಂಗಳ ಆರಂಭದಲ್ಲಿ, G-7 ಹಣಕಾಸು ಮಂತ್ರಿಗಳು ನೀಡಿದ ಹೇಳಿಕೆಯು ಬೆಲೆಯ ಮಿತಿಯನ್ನು ನಿರ್ದಿಷ್ಟವಾಗಿ ರಷ್ಯಾದ ಆದಾಯವನ್ನು ಕಡಿಮೆ ಮಾಡಲು ಮತ್ತು ಯುದ್ಧಕ್ಕೆ ಹಣವನ್ನು ನೀಡುವ ಉಕ್ರೇನ್ ಸಾಮರ್ಥ್ಯವನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ರಷ್ಯಾದ ತೈಲ ಬೆಲೆಗಳನ್ನು ಮಿತಿಗೊಳಿಸಲು ಮೈತ್ರಿಕೂಟಕ್ಕೆ ಸೇರಲು ಭಾರತವನ್ನು ಅಮೆರಿಕಾ ಕೇಳಿದೆ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಪ್ರಸ್ತಾವನೆಯನ್ನು 'ಎಚ್ಚರಿಕೆಯಿಂದ ಪರಿಶೀಲಿಸುವುದಾಗಿ' ನವದೆಹಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com