ಅಕ್ರಮವಾಗಿ ಅಮೆರಿಕ-ಕೆನಡಾ ಗಡಿ ದಾಟುವ ವೇಳೆ ದುರಂತ; ಭಾರತ ಮೂಲದ ಕುಟುಂಬ ಶವವಾಗಿ ಪತ್ತೆ
ಅಕ್ರಮವಾಗಿ ಅಮೆರಿಕ-ಕೆನಡಾ ಗಡಿ ದಾಟುವ ವೇಳೆ ದುರಂತ ಸಂಭವಿಸಿದ್ದು, ರೊಮೇನಿಯನ್ ಮತ್ತು ಭಾರತ ಮೂಲದ ಎರಡು ಕುಟುಂಬಗಳ ಆರು ಜನರ ಮೃತದೇಹ ಪತ್ತೆಯಾಗಿದೆ.
Published: 01st April 2023 01:01 PM | Last Updated: 01st April 2023 02:30 PM | A+A A-

ಕೆನಡಾ ಅಮೆರಿಕ ಗಡಿಯಲ್ಲಿ ದುರಂತ (ರಾಯಿಟರ್ಸ್ ಚಿತ್ರ)
ಕೆನಡಾ: ಅಕ್ರಮವಾಗಿ ಅಮೆರಿಕ-ಕೆನಡಾ ಗಡಿ ದಾಟುವ ವೇಳೆ ದುರಂತ ಸಂಭವಿಸಿದ್ದು, ರೊಮೇನಿಯನ್ ಮತ್ತು ಭಾರತ ಮೂಲದ ಎರಡು ಕುಟುಂಬಗಳ ಆರು ಜನರ ಮೃತದೇಹ ಪತ್ತೆಯಾಗಿದೆ.
ಎರಡು ಕುಟುಂಬಗಳ ಆರು ಜನರು -- ಕೆನಡಾದ ಪಾಸ್‌ಪೋರ್ಟ್ ಹೊಂದಿರುವ ರೊಮೇನಿಯನ್ ಮೂಲದ ಒಂದು ಕುಟುಂಬ ಮತ್ತು ಭಾರತ ಮೂಲದ ಒಂದು ಕುಟುಂಬ ಅಕ್ರಮವಾಗಿ ಅಮೆರಿಕ ಗಡಿ ದಾಟಲು ಪ್ರಯತ್ನಿಸುವ ವೇಳೆ ದುರಂತ ಸಂಭವಿಸಿ ಕೆನಡಾ-ಯುಎಸ್ ಗಡಿಯ ಬಳಿಯ ಜವುಗು ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ವೆಸಾಸ್ನೆ ಮೊಹಾವ್ಕ್ ಸಮುದಾಯದ ನಾಪತ್ತೆಯಾದ ವ್ಯಕ್ತಿಗೆ ಸೇರಿದ ದೋಣಿಯೊಂದರ ಬಳಿ ಅವರ ಮೃತದೇಹಗಳು ಗುರುವಾರ ತಡರಾತ್ರಿ ಪತ್ತೆಯಾಗಿವೆ ಎಂದು ಸ್ಥಳೀಯ ಉಪ ಪೊಲೀಸ್ ಮುಖ್ಯಸ್ಥ ಲೀ-ಆನ್ ಒ'ಬ್ರೇನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. "ಎರಡು ಕುಟುಂಬಗಳ ಆರು ವ್ಯಕ್ತಿಗಳು ಗಡಿ ದಾಟಲು ಬಂದು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಈ ಎರಡು ಕುಟುಂಬಗಳ ಪೈಕಿ ಒಬ್ಬರು ರೊಮೇನಿಯನ್ ಮೂಲದವರು ಮತ್ತು ಇನ್ನೊಬ್ಬರು ಭಾರತದ ನಾಗರಿಕರು ಎಂದು ನಂಬಲಾಗಿದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಬಲವಂತದ ಮತಾಂತರದ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯದ ಸದಸ್ಯರ ಪ್ರತಿಭಟನೆ
ಮೃತರ ಪೈಕಿ ಐದು ಮಂದಿ ವಯಸ್ಕರಿದ್ದು, ಮೂರು ವರ್ಷದೊಳಗಿನ ಒಂದು ಮಗು ಶವವಾಗಿ ಪತ್ತೆಯಾಗಿದೆ. ಎಲ್ಲರೂ ಕೆನಡಾದಿಂದ ಅಮೆರಿಕಗೆ ಅಕ್ರಮ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದರು ಎಂದು ನಂಬಲಾಗಿದೆ. ಒಂದು ಮೃತದೇಹದಿಂದ ಪಾಸ್‌ಪೋರ್ಟ್ ವಶಪಡಿಸಿಕೊಂಡ ಎರಡನೇ ಶಿಶುವೂ ಕಾಣೆಯಾಗಿದೆ ಮತ್ತು ಪೋಲೀಸ್ ಡೈವ್ ತಂಡಗಳು ಹುಡುಕಾಟವನ್ನು ಮುಂದುವರೆಸುತ್ತಿವೆ ಎಂದು ಓ'ಬ್ರೇನ್ ಮಾಹಿತಿ ನೀಡಿದ್ದಾರೆ.
ಸಾವಿನ ಕಾರಣವನ್ನು ನಿರ್ಧರಿಸಲು ಅಧಿಕಾರಿಗಳು ಶವಪರೀಕ್ಷೆ ಮತ್ತು ವಿಷಶಾಸ್ತ್ರ ಪರೀಕ್ಷೆ ನಡೆಸಿದ್ದು ಅದರ ವರದಿ ಬಂದ ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.