
ಟ್ವಿಟರ್ ಮಾಜಿ ಸಿಇಒ ಪರಾಗ್ ಅಗರ್ವಾಲ್
ನವದೆಹಲಿ: ಟ್ವಿಟರ್ ಮಾಲೀಕ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಪರಾಗ್ ಅಗರ್ವಾಲ್ ಸೇರಿದಂತೆ ಸಂಸ್ಥೆಯ 3 ಮಾಜಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಪರಾಗ್ ಅಗರ್ವಾಲ್ ಸೇರಿದಂತೆ ಟ್ವಿಟರ್‌ನ ಮಾಜಿ ಪ್ರಮುಖ ಮೂರು ಅಧಿಕಾರಿಗಳು ಎಲೋನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ್ದು, ಅವರ ಹಿಂದಿನ ಉದ್ಯೋಗಗಳಿಗೆ ಸಂಬಂಧಿಸಿದ ದಾವೆ, ತನಿಖೆಗಳು ಮತ್ತು ವಿಚಾರಣೆಗಳ ವೆಚ್ಚವನ್ನು ಮರುಪಾವತಿಸುವಂತೆ ಎಲಾನ್ ಮಸ್ಕ್ ರನ್ನು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಟ್ವಿಟರ್ ನ ಲೋಗೋ ಬದಲಾವಣೆಗೆ ಕಾರಣವೇನು?: ಮಸ್ಕ್ ಹಳೆಯ ಟ್ವೀಟ್ ಬಿಚ್ಚಿಡುತ್ತಿರುವ ಮಾಹಿತಿ ಇಂತಿದೆ...
ಈ ದಾವೆಯಲ್ಲಿ ಮಾಜಿ ಸಿಇಒ ಪರಾಗ್ ಅಗರ್ವಾಲ್ ಮತ್ತು ಕಂಪನಿಯ ಮಾಜಿ ಕಾನೂನು ಮುಖ್ಯಸ್ಥ ಮತ್ತು ಟ್ವಿಟರ್ ನ ಹಣಕಾಸು ಅಧಿಕಾರಿಯಿಂದ $1 ಮಿಲಿಯನ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ಕೋರಿದೆ. ಟ್ವಿಟರ್ ಈ ಮೊತ್ತವನ್ನು ಪಾವತಿಸಲು ಕಾನೂನುಬದ್ಧವಾಗಿ ಬದ್ಧವಾಗಿದೆ ಎಂದು ದಾವೆಯಲ್ಲಿ ಉಲ್ಲೇಖಿಸಲಾಗಿದೆ. US ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಮತ್ತು ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DOJ) ನಿಂದ ತನಿಖೆಗಳಿಗೆ ಸಂಬಂಧಿಸಿದ ಹಲವಾರು ವೆಚ್ಚಗಳನ್ನು ನ್ಯಾಯಾಲಯದ ಈ ದಾಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ತನಿಖೆಯ ಸ್ವರೂಪ ಅಥವಾ ತನಿಖೆ ನಡೆಯುತ್ತಿದೆಯೇ ಎಂಬುದನ್ನು ದಾವೆಯಲ್ಲಿ ತಿಳಿಸಿಲ್ಲ ಎಂದು ತಿಳಿದುಬಂದಿದೆ.
ತನಿಖಾ ಸಂಸ್ಥೆಗಳಿಗೆ ಪರಾಗ್ ಅಗರ್ವಾಲ್ ಸಹಕಾರ
ಇನ್ನು ಪರಾಗ್ ಅಗರ್ವಾಲ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಅವರ ಕಾರ್ಯದರ್ಶಿಗಳ ಹೇಳಿಕೆ ಪ್ರಕಾರ, ಅವರು ತಮ್ಮ ತನಿಖೆಯಲ್ಲಿ ಫೆಡರಲ್ ಏಜೆನ್ಸಿಗಳೊಂದಿಗೆ ಸಹಕರಿಸುವುದನ್ನು ಮುಂದುವರೆಸುತ್ತಿದ್ದಾರೆ. ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವಾಗ ಮಸ್ಕ್ ಎಲ್ಲಾ ನಿಯಮಗಳನ್ನು ಅನುಸರಿಸಿದ್ದಾರೆಯೇ ಎಂದು SEC ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಎಲಾನ್ ಮಸ್ಕ್ ತೆಕ್ಕೆಗೆ ಬಿದ್ದ ಟ್ವಿಟರ್ ನ ಮೌಲ್ಯ ಅರ್ಧದಷ್ಟು ಕುಸಿತ!
ಉನ್ನತ ಅಧಿಕಾರಿಗಳ ವಜಾ
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಅನ್ನು $ 44 ಶತಕೋಟಿಗೆ ಸ್ವಾಧೀನಪಡಿಸಿಕೊಂಡ ನಂತರ, ಕಂಪನಿಯ ಉನ್ನತ ಕಾರ್ಯನಿರ್ವಾಹಕರಾದ ಪರಾಗ್ ಅಗರ್ವಾಲ್, ಗಾಡ್ಗೆ ಮತ್ತು ಸೆಹಗಲ್ ಅವರನ್ನು ಮಸ್ಕ್ ವಜಾಗೊಳಿಸಿದ್ದರು. ಅಲ್ಲದೆ, ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಮಸ್ಕ್ ಸುಮಾರು 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೂಡ ವಜಾಗೊಳಿಸಿದ್ದರು.
ಇದಾದ ಬಳಿಕ ಮಸ್ಕ್ ಟ್ವಿಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಟ್ವಿಟರ್‌ನ ನೀಲಿ ಟಿಕ್ ಅನ್ನು ಪಾವತಿ ಸೇವೆಯನ್ನಾಗಿ ಪರಿವರ್ತಿಸಲಾಗಿದೆ. $14.99 ಪಾವತಿಸುವ ಮೂಲಕ ಯಾರಾದರೂ ಬ್ಲೂ ಟಿಕ್ ಅನ್ನು ಪಡೆಯಬಹುದು. ಇದರ ಬೆನ್ನಲ್ಲೇ ಟ್ವಿಟರ್ ನ ಲೋಗು ನೀಲಿ ಹಕ್ಕಿಯ ಚಿತ್ರವನ್ನು ಮಸ್ಕ್ ನಾಯಿಗೆ ಬದಲಾಯಿಸಿದ್ದರು.