ವಿದೇಶ ಪ್ರವಾಸದಲ್ಲಿ ಪ್ರಧಾನಿ: ದಕ್ಷಿಣ ಆಫ್ರಿಕಾದಿಂದಲೇ ವರ್ಚುವಲ್ ಆಗಿ ಚಂದ್ರಯಾನ-3 ವೀಕ್ಷಣೆ
ಭಾರತದ ಚಂದ್ರಯಾನ-3 ಬಹುತೇಕ ಯಶಸ್ವಿಯಾಗಿodog, ಇದೀಗ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಲ್ಯಾಂಡ್ ಮಾಡಲು ಇಸ್ರೋ ಸಕಲ ಸಿದ್ಧತೆಗಳ ನಡೆಸಿದೆ. ಈ ವಿಶೇಷ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ ವಿಶ್ವವೇ ಕಾಯುತ್ತಿದೆ.
Published: 23rd August 2023 08:42 AM | Last Updated: 23rd August 2023 01:01 PM | A+A A-

ಪ್ರಧಾನಿ ಮೋದಿ
ಜೋಹಾನ್ಸ್‌ಬರ್ಗ್: ಭಾರತದ ಚಂದ್ರಯಾನ-3 ಬಹುತೇಕ ಯಶಸ್ವಿಯಾಗಿodog, ಇದೀಗ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಲ್ಯಾಂಡ್ ಮಾಡಲು ಇಸ್ರೋ ಸಕಲ ಸಿದ್ಧತೆಗಳ ನಡೆಸಿದೆ. ಈ ವಿಶೇಷ ಕ್ಷಣಕ್ಕಾಗಿ ಭಾರತ ಮಾತ್ರವಲ್ಲ ವಿಶ್ವವೇ ಕಾಯುತ್ತಿದೆ.
ಆಗಸ್ಟ್ 23ರ ಸಂಜೆ 6.04 ಗಂಟೆಗೆ ವಿಕ್ರಮ ಲ್ಯಾಂಡರ್ ಇಳಿಸಲು ಇಸ್ರೋ ತಯಾರಿ ನಡೆಸಿದೆ. ಇಸ್ರೋ ಕಾರ್ಯಾಚರಣೆಯ ನೇರ ಪ್ರಸಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದಿಂದ ಪಾಲ್ಗೊಳ್ಳಲಿದ್ದಾರೆ.
15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾದಿಂದಲೇ ಮೋದಿ ವರ್ಚುವಲ್ ಆಗಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3: ಇತಿಹಾಸ ಸೃಷ್ಟಿಗೆ ಕ್ಷಣಗಣನೆ; ಚಂದ್ರನ ಅಂಗಳದಲ್ಲಿಂದು ತ್ರಿವಿಕ್ರಮನ ಪಾದಸ್ಪರ್ಶ, ಇಡೀ ವಿಶ್ವದ ಕಣ್ಣು ಭಾರತದತ್ತ
ಚಂದ್ರನ ದಕ್ಷಿಣ ಧ್ರುವದಲ್ಲಿ ಬುಧವಾರ ಸಂಜೆ ಇಳಿಯಲಿರುವ ಚಂದ್ರಯಾನ-3 ನೌಕೆಯನ್ನು ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ಟ್ರಾಕ್ ಕೇಂದ್ರದ ವಿಜ್ಞಾನಿಗಳು ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆ ನೌಕೆ ನಿಗದಿಯಂತೆ ಸುಗಮವಾಗಿ ಚಲಿಸುತ್ತಿರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.
ಚಂದ್ರಯಾನ-3 ನೌಕೆಯನ್ನು ಪೀಣ್ಯದ ಇಸ್ಟ್ರಾಕ್ ಕೇಂದ್ರದ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ ನಿಗಾ ವಹಿಸಲಾಗುತ್ತಿದೆ. ಬುಧವಾರ ನೌಕೆ ಲ್ಯಾಂಡ್ ಆಗಲಿರುವ ಹಿನ್ನೆಲೆಯಲ್ಲಿ ಇಸ್ಟ್ರಾಕ್ ಕೇಂದ್ರದಲ್ಲಿ ಅತ್ಯುತ್ಸಾಹ ಹಾಗೂ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿವೆ.
ಈ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಬುಧವಾರ ಸಂಜೆ 5.20ರಿಂದ ಟೀವಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸಂಜೆ 6.04ಕ್ಕೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿಯಲಿದೆ.