ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳ ಮೇಲೆ ಕಿಡಿಗೇಡಿಗಳ ದಾಳಿ, ವಿಗ್ರಹ ಧ್ವಂಸ

ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಯುವ್ಯ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಶನಿವಾರ ರಾತ್ರಿ ನಡೆಸಿದ ಸಂಘಟಿತ ಸರಣಿ ದಾಳಿ ಇದಾಗಿದೆ .
ಹಿಂದೂ ದೇವಾಲಯಗಳ ಧ್ವಂಸ
ಹಿಂದೂ ದೇವಾಲಯಗಳ ಧ್ವಂಸ

ಢಾಕಾ: ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಯುವ್ಯ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಶನಿವಾರ ರಾತ್ರಿ ನಡೆಸಿದ ಸಂಘಟಿತ ಸರಣಿ ದಾಳಿ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ 14 ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆದಿದ್ದು, ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. ಘಟನೆಯ ನಂತರ, ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು ತಮ್ಮ ಜೀವ ಮತ್ತು ಆಸ್ತಿಯ ಬಗ್ಗೆ ಭಯಭೀತರಾಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಹಿಂದೂಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ವರದಿಯ ಪ್ರಕಾರ, ದೇವಾಲಯಗಳಲ್ಲಿ (ಬಾಂಗ್ಲಾದೇಶಿ ಹಿಂದೂ ದೇವಾಲಯ) ವಿಧ್ವಂಸಕ ಘಟನೆಯು ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಠಾಕೂರ್ಗಾಂವ್‌ನ ಬಲಿಯಾದಂಗಿಯಲ್ಲಿ ನಡೆದಿದೆ. ಗ್ರಾಮದಲ್ಲಿ ವಾಸಿಸುವ ಹಿಂದೂ ಸಮುದಾಯದ ಮುಖಂಡ ಬಿದ್ಯನಾಥ್ ಬರ್ಮನ್ ಪ್ರಕಾರ, ಶನಿವಾರ ರಾತ್ರಿ ಮತ್ತು ಭಾನುವಾರದ ಮುಂಜಾನೆ ಅಪರಿಚಿತರು ಕತ್ತಲೆಯ ಲಾಭವನ್ನು ಪಡೆದುಕೊಂಡು ದೇವಾಲಯಗಳ ಮೇಲೆ ಯೋಜಿತ ರೀತಿಯಲ್ಲಿ ದಾಳಿ ಮಾಡಲು ಪ್ರಾರಂಭಿಸಿದರು.

ಕೋಲು ಮತ್ತಿತರ ಆಯುಧಗಳೊಂದಿಗೆ ಬಂದ ದುಷ್ಕರ್ಮಿಗಳು 14 ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಂದರ್ಭದಲ್ಲಿ, ಅನೇಕ ವಿಗ್ರಹಗಳು ತುಂಡುಗಳಾಗಿ ಮುರಿದು ಕೊಳಕ್ಕೆ ಎಸೆದಿದ್ದಾರೆ. ದೇವಾಲಯಗಳ (ಬಾಂಗ್ಲಾದೇಶಿ ಹಿಂದೂ ದೇವಾಲಯ) ಮೇಲೆ ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಬರ್ಮನ್ ಹೇಳಿದ್ದಾರೆ.

ಕತ್ತಲೆಯಿಂದಾಗಿ ಯಾರೂ ಅವರನ್ನು ನೋಡಲಿಲ್ಲ. ಘಟನೆ ಬೆಳಕಿಗೆ ಬಂದಿದ್ದರಿಂದ ಈ ಪ್ರದೇಶದಲ್ಲಿ ವಾಸಿಸುವ ಹಿಂದೂಗಳು ತಮ್ಮ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ಮುಸ್ಲಿಂ ಬಾಂಧವರೊಂದಿಗೆ ಯಾವುದೇ ಭಿನ್ನಭಿಪ್ರಾಯ ಇರಲಿಲ್ಲ. ಅಪರಾಧಿಗಳು ಯಾರೂ ಎಂದು ತಿಳಿಯುತ್ತಿಲ್ಲ ಎಂದು ಮತ್ತೊಬ್ಬ ಹಿಂದೂ ಸಮುದಾಯದ ನಾಯಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com