
ಲಂಡನ್: ಈ ಹಿಂದೆ ಚಾಕು ಇರಿತ ದಾಳಿಗೆ ತುತ್ತಾಗಿದ್ದ ಖ್ಯಾತ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ನೂತನ ಪುಸ್ತಕ ಬಿಡುಗಡೆಯಾಗಿದೆ.
ಹೌದು.. ಚಾಕು ದಾಳಿಯಾದ 6 ತಿಂಗಳ ಬಳಿಕ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಮಂಗಳವಾರ ತಮ್ಮ ಹೊಸ ಕಾದಂಬರಿ "ವಿಕ್ಟರಿ ಸಿಟಿ" ಅನ್ನು ಪ್ರಕಟಿಸಿದ್ದಾರೆ. ಇದು 14 ನೇ ಶತಮಾನದ ಮಹಿಳೆಯ ಕುರಿತಾದ ಕಾವ್ಯವಾಗಿದ್ದು, ಒಂದು ನಗರವನ್ನು ಆಳಲು ಪಿತೃಪ್ರಭುತ್ವದ ಜಗತ್ತನ್ನು ಧಿಕ್ಕರಿಸುವ ಕಥಾಹಂದರವನ್ನು ಹೊಂದಿದೆ.
ಭಾರತ ಮೂಲದ ಲೇಖಕ ರಶ್ಜಿ ಚಾಕು ದಾಳಿಗೂ ಮೊದಲು ಬರೆಯಲಾದ ಈ ಕಾದಂಬರಿಯು ಮೂಲತಃ ಸಂಸ್ಕೃತದಲ್ಲಿ ಬರೆದ ಐತಿಹಾಸಿಕ ಮಹಾಕಾವ್ಯದ ಅನುವಾದವಾಗಿದೆ ಎಂದು ಹೇಳಲಾಗಿದೆ. ಬಹು ನಿರೀಕ್ಷಿತ ಕೃತಿಯು ಯುವ ಅನಾಥ ಹುಡುಗಿ ಪಂಪಾ ಕಂಪನಳ ಕಥೆಯನ್ನು ಹೇಳುತ್ತದೆ, ಅವಳು ಮಾಂತ್ರಿಕ ಶಕ್ತಿಗಳನ್ನು ಹೊಂದಿರುವ ದೇವತೆಯಿಂದ ದಯಪಾಲಿಸಲ್ಪಟ್ಟಿದ್ದಾಳೆ ಮತ್ತು ಆಧುನಿಕ ಭಾರತದಲ್ಲಿ ಬಿಸ್ನಾಗ ನಗರವನ್ನು ಸ್ಥಾಪಿಸಿದಳು, ಇದನ್ನು ಇತಿಹಾಸದಲ್ಲಿ ವಿಜಯ ನಗರ ಎಂದು ಅನುವಾದಿಸಲಾಗಿದೆ.
ಇದನ್ನೂ ಓದಿ: ರಶ್ದಿಯನ್ನು ಟಾರ್ಗೆಟ್ ಮಾಡಲು ಬಹುಮಾನ ಘೋಷಿಸಿದ್ದ ಇರಾನ್ ಸಂಘಟನೆಗೆ ಅಮೇರಿಕ ಆರ್ಥಿಕ ನಿರ್ಬಂಧ
75 ವರ್ಷದ ರಶ್ದಿ ಅವರು ತಮ್ಮ ದೈಹಿಕ ಸ್ಥಿತಿಯ ಕಾರಣದಿಂದ ಅವರ 15 ನೇ ಕಾದಂಬರಿ ಕುರಿತು ಹೆಚ್ಚು ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಕಳೆದ ಆಗಸ್ಟ್ 12 ರಂದು ಅಪ್‌ಸ್ಟೇಟ್ ನ್ಯೂಯಾರ್ಕ್‌ನ ಚೌಟೌಕ್ವಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಲು ಮುಂದಾದಾಗ ಅವರ ಮೇಲೆ ಆಗಂತುಕ ಚಾಕು ದಾಳಿ ನಡೆಸಿದ್ದ.
ಇದನ್ನೂ ಓದಿ: ಮಾರಣಾಂತಿಕ ದಾಳಿ: ಒಂದು ಕಣ್ಣಿನ ದೃಷ್ಟಿ, ಕೈ ಸ್ವಾಧೀನ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ
ಇರಾನ್‌ನ ಮೊದಲ ಸರ್ವೋಚ್ಚ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರನ್ನು ರಶ್ದಿ ತಮ್ಮ "ದಿ ಸೈಟಾನಿಕ್ ವರ್ಸಸ್" ಪುಸ್ತಕದಲ್ಲಿ ನಿಂದಿಸಿದ್ದರು ಎಂದು ಆರೋಪಿಸಿ ರಶ್ದಿ ಹತ್ಯೆಗೆ ಆದೇಶಿಸಲಾಗಿತ್ತು. ಈ ಘಚನೆ ಬಳಿಕ ಲೇಖಕ ರಶ್ಜಿ ಸುಮಾರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು.