ಭೂಕಂಪದಿಂದ ಪಾರಾಗಿದ್ದ ಐವರು ಸಿರಿಯಾದ ಮಕ್ಕಳು, ಪೋಷಕರು ಬೆಂಕಿ ಅವಘಡದಲ್ಲಿ ಸಾವು

ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಮನೆಗಳು ನಾಶವಾದ ನಂತರ ಬದುಕುಳಿದವರು ಕುಸಿದ ಕಟ್ಟಡಗಳ ಹೊರಗೆ ಆಶ್ರಯ ಪಡೆದಿರುವುದು.
ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಮನೆಗಳು ನಾಶವಾದ ನಂತರ ಬದುಕುಳಿದವರು ಕುಸಿದ ಕಟ್ಟಡಗಳ ಹೊರಗೆ ಆಶ್ರಯ ಪಡೆದಿರುವುದು.

ಇಸ್ತಾನ್‌ಬುಲ್: ಕಳೆದ ವಾರ ಸಂಭವಿಸಿದ ಭೂಕಂಪದಿಂದ ಬದುಕುಳಿದ ನಂತರ ಟರ್ಕಿಯ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಐವರು ಸಿರಿಯಾದ ಮಕ್ಕಳು ಮತ್ತು ಅವರ ಪೋಷಕರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಿರಿಯನ್ ಕುಟುಂಬವು ಫೆಬ್ರುವರಿ 6ರ ಕಂಪನದಿಂದ ತೀವ್ರವಾಗಿ ಹಾನಿಗೊಳಗಾದ ಆಗ್ನೇಯ ಟರ್ಕಿಶ್ ನಗರವಾದ ನೂರ್ಡಗಿಯಿಂದ ಕೊನ್ಯಾದ ಪ್ರದೇಶಕ್ಕೆ ಸ್ಥಳಾಂತರಗೊಂಡಿತ್ತು.

7.8 ತೀವ್ರತೆಯ ಭೂಕಂಪದಿಂದಾಗಿ ಟರ್ಕಿ ಮತ್ತು ಸಿರಿಯಾದಾದ್ಯಂತ ಮೃತಪಟ್ಟವರ ಸಂಖ್ಯೆ 41,000 ಮೀರಿದೆ. ಇದು ಶತಮಾನಗಳಲ್ಲೇ ಈ ಪ್ರದೇಶದ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ.

ಭೂಕಂಪದ ನಂತರ ಸಿರಿಯನ್ ಕುಟುಂಬವು ತಮ್ಮ ಸಂಬಂಧಿಕರೊಂದಿಗೆ ಕೊನ್ಯಾಗೆ ಸ್ಥಳಾಂತರಗೊಂಡಿತ್ತು ಎಂದು ಅನಡೋಲು ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.  ಭೂಕಂಪದಿಂದಾಗಿ ಸ್ಥಳಾಂತರಗೊಂಡ ಲಕ್ಷಾಂತರ ಜನರು ಅನುಸರಿಸಿದ ಮಾರ್ಗವನ್ನೇ ಅವರು ಅನುಸರಿಸಿದ್ದರು.

ಬೆಂಕಿ ಹೊತ್ತಿಕೊಂಡಾಗ ನಾವು ಕಂಡೆವು. ಆದರೆ, ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲ. ಕಿಟಕಿ ಮೂಲಕ ಓರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ಮೃತಪಟ್ಟ ಐದು ಮಕ್ಕಳ ಪೈಕಿ ನಾಲ್ಕರು 13 ವರ್ಷದೊಳಗಿನವರು ಎಂದು ನಿವಾಸಿ ಮುಹ್ಸಿನ್ ಕಾಕೀರ್ ಅನಾಡೋಲು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಬಾಲಕಿ ಅದೇ ಕುಟುಂಬದ ಸದಸ್ಯಳೇ ಎಂಬುದು ಸ್ಪಷ್ಟವಾಗಿಲ್ಲ.

ಟರ್ಕಿಯು ಸುಮಾರು ನಾಲ್ಕು ಮಿಲಿಯನ್ ಸಿರಿಯನ್ನರಿಗೆ ನೆಲೆಯಾಗಿದೆ. ಅವರಲ್ಲಿ ಹಲವರು ಕಳೆದ ವಾರದ ದುರಂತದಿಂದ ಧ್ವಂಸಗೊಂಡ ಆಗ್ನೇಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಭೂಕಂಪದಿಂದಾಗಿ ಟರ್ಕಿಯಲ್ಲಿ 38,000ಕ್ಕೂ ಹೆಚ್ಚು ಮತ್ತು ಸಿರಿಯಾದಲ್ಲಿ ಸುಮಾರು 3,700 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com