ಸಿರಿಯಾ: ಹೆತ್ತವರನ್ನು ಕಳೆದುಕೊಂಡು, ಅವಶೇಷಗಳಡಿಯಲ್ಲಿ ಪತ್ತೆಯಾಗಿದ್ದ ಮಗು ಸೋದರ ಸಂಬಂಧಿಗಳ ವಶಕ್ಕೆ

ಸಿರಿಯಾದಲ್ಲಿ ಭೂಕಂಪದಲ್ಲಿ ತನ್ನವರನ್ನು ಕಳೆದುಕೊಂಡ ನವಜಾತ ಶಿಶುವನ್ನು ಆಕೆಯ ಸೋದರ ಮಾವ ದತ್ತು ಪಡೆದಿದ್ದು ಕುಟುಂಬವನ್ನು ಸೇರಿದ್ದಾಳೆ. 
ಅವಶೇಷಗಳಡಿಯಲ್ಲಿ ಪತ್ತೆಯಾಗಿದ್ದ ಮಗು ಅಫ್ರಾ
ಅವಶೇಷಗಳಡಿಯಲ್ಲಿ ಪತ್ತೆಯಾಗಿದ್ದ ಮಗು ಅಫ್ರಾ

ಜಿಂದರಿಸ್ (ಸಿರಿಯಾ): ಸಿರಿಯಾದಲ್ಲಿ ಭೂಕಂಪದಲ್ಲಿ ತನ್ನವರನ್ನು ಕಳೆದುಕೊಂಡ ನವಜಾತ ಶಿಶುವನ್ನು ಆಕೆಯ ಸೋದರ ಮಾವ ದತ್ತು ಪಡೆದಿದ್ದು ಕುಟುಂಬವನ್ನು ಸೇರಿದ್ದಾಳೆ. 

ಭೂಕಂಪದಲ್ಲಿ ನವಜಾತ ಶಿಶುವಿನ ಮನೆ ಕುಸಿದುಬಿದ್ದು ಆಕೆಯ ತಾಯಿ ಹಾಗೂ ತಂದೆ, ಸಹೋದರ/ ಸಹೋದರಿಯರು ಸಾವನ್ನಪ್ಪಿದ್ದರು.

ಫೆ.06 ರಂದು ಸಂಭವಿಸಿದ ಭೂಕಂಪದ ಬಳಿಕ ನವಜಾತ ಶಿಶು ಆಸ್ಪತ್ರೆಯಲ್ಲಿದ್ದು, ಶನಿವಾರ ಆ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು, ಆ ಮಗುವಿಗೆ ಆಫ್ರಾ ಎಂದು ನಾಮಕರಣ ಮಾಡಲಾಗಿದೆ.

ಆಫ್ರಾ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಆಸ್ಪತ್ರೆಯ ಅಧಿಕಾರಿಗಳು ಆಕೆಗೆ ಅಯಾ- ದೇವರ ಚಿಹ್ನೆ ಎಂಬ ಅರ್ಥದ ಹೆಸರನ್ನು ನಾಮಕರಣ ಮಾಡಿದ್ದಾರೆ. 

ವರದಿಗಳಲ್ಲಿ ಅಫ್ರಾಳ ಕಥೆ ವ್ಯಾಪಕವಾಗಿ ಹರಡಿದ್ದು, ಜಗತ್ತಿನಾದ್ಯಂತ ಆಕೆಗೆ ಸಹಾಯ ಹಸ್ತ ಆಕೆಯ ನೆರವಿಗೆ ಬಂದಿದ್ದವು, ಅಷ್ಟೇ ಅಲ್ಲದೇ ಕೆಲವು ಮಂದಿ ಆಕೆಯನ್ನು ದತ್ತು ಸ್ವೀಕರಿಸುವುದಕ್ಕೂ ಮುಂದಾಗಿದ್ದರು. ಆದರೆ ಮಗುವಿನ ಸಂಬಂಧಿಕರು ಮಗುವಿನ ಆರೈಕೆ ಮಾಡುತ್ತಿದ್ದು, ಪರಿಸ್ಥಿತಿ ಏನೇ ಇದ್ದರೂ ಮಗುವಿಗೆ ಕುಟುಂಬ ಸದಸ್ಯರಿರುವ ಪ್ರದೇಶವೇ ಅತ್ಯುತ್ತಮವಾದದ್ದು ಎಂದು ಹೇಳಿದ್ದಾರೆ.

ಭೂಕಂಪದಲ್ಲಿ ಮಗುವಿನ ಸೋದರ ಮಾವ ಖಲೀಲ್ ಅಲ್-ಸವಾಡಿ ಮನೆಯೂ ನೆಲಸಮವಾಗಿದ್ದು, ಈಗ ಉತ್ತರ ಸಿರಿಯಾದ ಜೈಂಡರಿಸ್ ನಲ್ಲಿ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಅಫ್ರಾ ಆರೈಕೆಯನ್ನೂ ನೋಡಿಕೊಳ್ಳುತ್ತಿದ್ದಾರೆ. ಅಲ್ ಸವಾದಿ ದಂಪತಿಗೆ ನಾಲ್ವರು ಪುತ್ರಿಯರು ಇಬ್ಬರು ಪುತ್ರರಿದ್ದು ಈಗ ಅಫ್ರಾ ಸಹ ಅವರ ಕುಟುಂಬದ ಭಾಗವಾಗಿದ್ದಾಳೆ.

ಆಫ್ರಾ ನನ್ನ ಮಕ್ಕಳ ಪೈಕಿ ಒಬ್ಬಳು. ಆಕೆ ಹಾಗೂ ನನ್ನ ಮಕ್ಕಳ ನಡುವೆ ನಾನು ಭೇದ ಮಾಡುವುದಿಲ್ಲ ಎಂದು ಅಲ್ ಸವಾದಿ ಹೇಳಿದ್ದಾರೆ. ಅಫ್ರಾ ಹುಟ್ಟಿದ ಕೆಲವೇ ದಿನಗಳಲ್ಲಿ ನನ್ನ ಪತ್ನಿ ಹೆಣ್ಣುಮಗು ಆಟ್ಟಾ ಗೆ ಜನ್ಮ ನೀಡಿದ್ದಾರೆ.

ಅಫ್ರಾ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದ್ದಂತೆ ಹಲವು ಮಂದಿ ಆಸ್ಪತ್ರೆಗೆ ಬಂದು ಆ ಮಗುವಿನ ಸಂಬಂಧಿಕರೆಂದು ಹೇಳಿಕೊಂಡಿದ್ದರು. ಆದರೆ ಅವರೆಲ್ಲರೂ ಆಫ್ರಾ ಹಾಗೂ ಆಕೆಯ ತಾಯಿಯ ಕುಟುಂಬದ ಹೆಸರಿಗಿಂತಲೂ ಭಿನ್ನವಾದ ಹೆಸರುಗಳನ್ನು ಹೊಂದಿದ್ದರು ಈ ಹಿನ್ನೆಲೆಯಲ್ಲಿ ಅಫ್ರಿನ್ ನಲ್ಲಿ ನ್ಯಾಯಾಂಗ ಅಧಿಕಾರಿಗಳು ಈ ಪ್ರಕರಣವನ್ನು ನಿಭಾಯಿಸುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗ ಆಫ್ರಾಳನ್ನು ಯಾರಾದರೂ ಅಪಹರಣ ಮಾಡಬಹುದೆಂಬ ಆತಂಕದಲ್ಲಿದ್ದ ಅಲ್ ಸವಾದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಅಂತಿಮವಾಗಿ ಡಿಎನ್ಎ ಪರೀಕ್ಷೆಗಳ ಬಳಿಕ ಸವಾದಿ ಕುಟುಂಬದಬರು ಹಾಗೂ ಆ ಮಗು ಇಬ್ಬರೂ ಜೈವಿಕವಾಗಿ ಸಂಬಂಧಿಗಳೆಂಬುದು ದೃಢಪಟ್ಟ ಬಳಿಕ ಆಫ್ರಾಳನ್ನು ಸವಾದಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. 

ಅಫ್ರಾಳನ್ನು ಆಸ್ಪತ್ರೆಯಿಂದ ಕರೆದೊಯ್ಯುವಾಗ ಹಲವು ನರ್ಸ್ ಗಳು ಕಣ್ಣೀರಿಟ್ಟಿದ್ದನ್ನು ಡಾ. ಹನಿ ಮಾರೂಫ್ ನೆನಪಿಸಿಕೊಳ್ಳುತ್ತಾರೆ. 

ಅಫ್ರಾ ಪೋಷಕರು ಜೀವಿಸುತ್ತಿದ್ದ ಅಪಾರ್ಟ್ ಮೆಂಟ್ ನೆಲಸಮವಾಗಿದ್ದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಭೂಕಂಪವಾದ 10 ಗಂಟೆಗಳ ಬಳಿಕ ಅವಶೇಷಗಳ ಅಡಿಯಲ್ಲಿ ಆಫ್ರಾ ಪತ್ತೆಯಾಗಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com