ಅಲ್ ಖೈದಾ, ಇಸಿಸ್ ಜೊತೆ ಸಂಬಂಧವಿಲ್ಲ: ಲಾಹೋರ್ ಜೈಲಿನಿಂದಲೇ ಉಗ್ರ ಮಕ್ಕಿ ವಿಡಿಯೊ ಬಿಡುಗಡೆ; ಭಾರತದ ವಿರುದ್ಧ ಕಿಡಿ

ಇತ್ತೀಚೆಗಷ್ಟೇ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಪಟ್ಟಿಗೆ ಸೇರಿದ್ದ ಪಾಕಿಸ್ತಾನ ಮೂಲದ ಉಗ್ರ ಹಾಗೂ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿ ಗುರುವಾರ ಭಾರತದ ವಿರುದ್ಧ ಕಿಡಿಕಾರಿದ್ದು, ಮಾತ್ರವಲ್ಲದೇ ಅಲ್ ಖೈದಾ, ಇಸಿಸ್ ಜೊತೆ ತನಗೆ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ಅಬ್ದುಲ್ ರೆಹಮಾನ್ ಮಕ್ಕಿ
ಅಬ್ದುಲ್ ರೆಹಮಾನ್ ಮಕ್ಕಿ

ಲಾಹೋರ್: ಇತ್ತೀಚೆಗಷ್ಟೇ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರ ಪಟ್ಟಿಗೆ ಸೇರಿದ್ದ ಪಾಕಿಸ್ತಾನ ಮೂಲದ ಉಗ್ರ ಹಾಗೂ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿ ಗುರುವಾರ ಭಾರತದ ವಿರುದ್ಧ ಕಿಡಿಕಾರಿದ್ದು, ಮಾತ್ರವಲ್ಲದೇ ಅಲ್ ಖೈದಾ, ಇಸಿಸ್ ಜೊತೆ ತನಗೆ ಸಂಬಂಧವಿಲ್ಲ ಎಂದು ಹೇಳಿದ್ದಾನೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾ (ಎಲ್‌ಇಟಿ) ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿ ಗುರುವಾರ ಲಾಹೋರ್‌ನ ಕೋಟ್ ಲಖ್‌ಪತ್ ಜೈಲಿನಿಂದ ವಿಡಿಯೊ ಬಿಡುಗಡೆ ಮಾಡಿದ್ದು, ಅಲ್ ಖೈದಾ ಅಥವಾ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಯಾವುದೇ ಸಂಪರ್ಕ ಹೊಂದಿರುವುದನ್ನು ನಿರಾಕರಿಸಿದ್ದಾನೆ.

‘ಭಾರತ ಸರ್ಕಾರ ನನ್ನ ವಿರುದ್ಧ ನೀಡಿರುವತಪ್ಪು ಮಾಹಿತಿ ಆಧಾರದ ಮೇಲೇ ನನ್ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ. ನಾನು ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿದ್ದೇನೆ ಎಂಬ ವರದಿಗಳು ಸುಳ್ಳು’ ಎಂದು ಮಕ್ಕಿ ಹೇಳಿದ್ದಾನೆ.

ಅಲ್ಲದೆ ಅಲ್ ಖೈದಾ ಮತ್ತು ಐಸಿಸ್‌ನ ದೃಷ್ಟಿಕೋನಗಳು, ನಾನು ನಂಬಿರುವ ಸಿದ್ಧಾಂತಗಳಿಗಿಂತ ಸಂಪೂರ್ಣವಾಗಿ ವಿರುದ್ಧ ಎಂದು ನಂಬಿರುವುದಾಗಿ ಮಕ್ಕಿ ಹೇಳಿದ್ದು, ಅಂತಹ ಗುಂಪುಗಳು ನಡೆಸುವ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ನಾನು ಖಂಡಿಸುತ್ತೇನೆ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಪ್ರಮುಖ ನಿಲುವನ್ನು ನಾನು ನಂಬುತ್ತೇನೆ’ ಎಂದು ಮಕ್ಕಿ ಹೇಳಿದ್ದಾನೆ.

ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್ ಉದ್ ದವಾ (ಜೆಯುಡಿ) ಹಫೀಜ್ ಸಯೀದ್ ಸಂಬಂಧಿ ಮಕ್ಕಿ, 166 ಜನರನ್ನು ಹತ್ಯೆಗೈದ 26/11 ಮುಂಬೈ ದಾಳಿಯ ಬಗ್ಗೆ ಪ್ರಸ್ತಾಪಿಸಿಲ್ಲ.

ಭಾರತ ಮತ್ತು ಅಮೆರಿಕದ ಪ್ರಸ್ತಾವನೆ ಒಪ್ಪಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ಜಾಗತಿಕ ಭಯೋತ್ಪಾದಕರ ಪಟ್ಟಿಗೆ 68 ವರ್ಷದ ಮಕ್ಕಿಯನ್ನು ಸೇರಿಸಿತ್ತು. ಇದನ್ವರಯ ಮಕ್ಕಿಯ ಆಸ್ತಿಗಳ ಸ್ಥಗಿತ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧ ಹೇರಲಾಗುತ್ತದೆ. ಹಫೀಜ್ ಸಯೀದ್ ಮತ್ತು ಇತರ ಕೆಲವು ಎಲ್ಇಟಿ ಹಾಗೂ ಜೆಯುಡಿ ಉಗ್ರರೊಂದಿಗೆ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣಗಳಲ್ಲಿ ಮಕ್ಕಿಗೆ ಶಿಕ್ಷೆ ಯಾಗಿದ್ದು, 2019ರಿಂದ ಜೈಲಿನಲ್ಲಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com