ಜಸಿಂಡಾ ಅಡೆರ್ನ್​ ರಾಜೀನಾಮೆ: ಕ್ರಿಸ್ ಹಿಪ್ಪಿನ್ಸ್‌ ನ್ಯೂಜಿಲ್ಯಾಂಡ್‌ ಮುಂದಿನ ಪ್ರಧಾನಿ

ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲೆಂಡ್​ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರು ಆಯ್ಕೆಯಾಗಲಿದ್ದಾರೆ
ಕ್ರಿಸ್​ ಹಿಪ್ಕಿನ್ಸ್
ಕ್ರಿಸ್​ ಹಿಪ್ಕಿನ್ಸ್

ವೆಲ್ಲಿಂಗ್ಟನ್: ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲೆಂಡ್​ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರು ಆಯ್ಕೆಯಾಗಲಿದ್ದಾರೆ. ಸಹ ಸಂಸದರಿಂದ ಏಕೈಕ ನಾಮನಿರ್ದೇಶನವನ್ನು ಸ್ವೀಕರಿಸಿದ ನಂತರ ಆಡಳಿತಾರೂಢ ಲೇಬರ್​ ಪಾರ್ಟಿ ಶನಿವಾರ ತಿಳಿಸಿದೆ.

ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಪಿನ್ಸ್‌ ಅವರನ್ನು ಆಯ್ಕೆ ಎಂದು ಆಡಳಿತಾರೂಢ ಲೇಬರ್‌ ಪಕ್ಷದ ಮೂಲಗಳು ತಿಳಿಸಿವೆ. ದೇಶದ 41ನೇ ಪ್ರಧಾನಯಾಗಿ 44 ವರ್ಷದ ಕ್ರಿಸ್ ಹಿಪ್ಪಿನ್ಸ್‌ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.  42 ವರ್ಷದ ಜಸಿಂಡ ಆರ್ಡರ್ನ್ ಅವರು ದಿಢೀರ್ ರಾಜೀನಾಮೆ ಘೋಷಣೆ ಮಾಡಿದ ಬಳಿಕ, ಲೇಬರ್‌ ಪಕ್ಷ ಹಿಪ್ಪಿನ್ಸ್‌ ಅವರನ್ನು ಆಯ್ಕೆ ಮಾಡಿದೆ.

ಕ್ರಿಸ್ ಹಿಪ್ಪಿನ್ಸ್‌ ಅವರು ಜಸಿಂಡ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಲಾಕ್‌ಡೌನ್‌ ಸಮಯದಲ್ಲಿ ಅವರ ಕಾರ್ಯನಿರ್ವಹಣೆ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಪಕ್ಷವು ಸದ್ಯ ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತರೂಢ ಲೇಬರ್​ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನು ಮೆಟ್ಟಿ ನಿಂತು ಪಕ್ಷವನ್ನು ಕ್ರಿಸ್​ ಮುನ್ನಡೆಸಬೇಕಿದೆ.

ಭಾನುವಾರ ಮಧ್ಯಾಹ್ನ 1 ಗಂಟೆಗೆ ಲೇಬರ್​ ಪಕ್ಷದ ಸಭೆ ನಡೆಯಲಿದ್ದು, ನಾಮನಿರ್ದೇಶನವನ್ನು ಅನುಮೋದಿಸಿ, ಕ್ರಿಸ್ ಹಿಪ್ಕಿನ್ಸ್ ಅವರನ್ನು ಪಕ್ಷದ ನಾಯಕರಾಗಿ ದೃಢೀಕರಿಸಲಿದ್ದಾರೆ ಎಂದು ಲೇಬರ್​ ಪಕ್ಷದ ಹಿರಿಯ ಸದಸ್ಯ ಡಂಕನ್ ವೆಬ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com