ವಾಷಿಂಗ್ಟನ್: ಆರ್ಥಿಕ ಹಿಂಜರಿತದ ಭೀತಿ ನಡುವೆಯೇ ಗೂಗಲ್, ಅಮೇಜಾನ್ ಬಳಿಕ ಇದೀಗ ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಕೂಡ ಸಿಬ್ಬಂದಿಗಳ ವಜಾ ಕ್ರಮಕ್ಕೆ ಮುಂದಾಗಿದೆ.
ಮೂಲಗಳ ಪ್ರಕಾರ ಅಮೆರಿಕದ ಹೆಸರಾಂತ ಮಾಹಿತಿ ತಂತ್ರಜ್ಞಾನ ಸಂಸ್ಥೆ ಐಬಿಎಂ ಆಸ್ತಿ ವಿನಿಯೋಗದ ಭಾಗವಾಗಿ 3,900 ನೌಕರರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಗುರುವಾರ ಘೋಷಣೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಬಿಎಂ ಸಂಸ್ಥೆ ಆರ್ಥಿಕ ಪರಿಸ್ಥಿತಿಯು ಸವಾಲಿನಿಂದ ಕೂಡಿರುವ ಕಾರಣ, ಕಂಪನಿಗೆ ಹೊಸ ರೂಪ ಕೊಡುವ ಪ್ರಕ್ರಿಯೆಯ ಭಾಗವಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಕಂಪನಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಐಬಿಎಂ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಗ್ ಅವರು ನಿರ್ದಿಷ್ಟ ಪ್ರದೇಶಗಳಲ್ಲಿ ಹೊಸ ನೌಕರರನ್ನು ನೇಮಕ ಮಾಡಿಕೊಳ್ಳುವುದನ್ನು ಮುಂದುವರಿಸಲಾಗುವುದು. ಕಳೆದ ಎರಡೂವರೆ ವರ್ಷದಿಂದ ಸಾವಿರಾರು ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಇತರರಿಗಿಂತ ಭಿನ್ನವಾಗಿದ್ದೇವೆ. ನಾವು ದಕ್ಷತೆ ಹೆಚ್ಚಿಸುವ ಡಿಜಿಟಲೀಕರಣ, ಆಟೊಮೇಷನ್ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜತೆಗೆ, ಕ್ಲೈಂಟ್-ಫೇಸಿಂಗ್ ಸಂಶೋಧನೆಗಾಗಿ ನೌಕರರನ್ನು ನೇಮಕ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
Advertisement