ಪಾಕಿಸ್ತಾನದ ಪೇಶಾವರ ಮಸೀದಿಯಲ್ಲಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 83ಕ್ಕೆ ಏರಿಕೆ
ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಂದರಲ್ಲಿ ಸೋಮವಾರ ನಡೆದಿದ್ದ ಪ್ರಬಲ ಆತ್ಮಹತ್ಯಾ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
Published: 31st January 2023 09:55 AM | Last Updated: 31st January 2023 01:59 PM | A+A A-

ಸ್ಫೋಟ ಸಂಭವಿಸಿದ ಮಸೀದಿ.
ಪೇಶಾವರ: ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಂದರಲ್ಲಿ ಸೋಮವಾರ ನಡೆದಿದ್ದ ಪ್ರಬಲ ಆತ್ಮಹತ್ಯಾ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
“ಪೇಶಾವರದ ಮಸೀದಿಯಲ್ಲಿ ನಿನ್ನೆ ಮಧ್ಯಾಹ್ನ 1.40ರ ಸುಮಾರಿಗೆ ವ್ಯಕ್ತಿಯೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ. ಆಗಷ್ಟೇ, ಪ್ರಾರ್ಥನೆ ಮುಗಿಸಿದ್ದರಿಂದ ಮಸೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪರಿಣಾಮ ಸ್ಫೋಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಮಸೀದಿಯಲ್ಲಿ ಸುಮಾರು 260 ಜನ ಇದ್ದರು. ಎಲ್ಲರೂ ಆಗಷ್ಟೇ ಪ್ರಾರ್ಥನೆ ಮುಗಿಸಿದ್ದರು. ಇದೇ ವೇಳೆ ಆತ್ಮಾಹುತಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಗಾಯಗೊಂಡವರಲ್ಲಿ ಮತ್ತಷ್ಟು ಜನರ ಪರಿಸ್ಥಿತಿ ಗಂಭೀರವಾಗಿರುವುದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ದಾಳಿಯ ಕುರಿತು ಇದುವರೆಗೆ ಯಾವುದೇ ಉಗ್ರ ಸಂಘಟನೆಯು ಹೊಣೆ ಹೊತ್ತುಕೊಂಡಿಲ್ಲ.