ಮೆಲ್ಬೋರ್ನ್: ಖಲಿಸ್ತಾನಿ ಬೆಂಬಲಿಗರಿಂದ ಶ್ರೀ ಶಿವ ವಿಷ್ಣು ದೇವಾಲಯ ಧ್ವಂಸ; ಭಾರತೀಯ ರಾಯಭಾರಿ ಖಂಡನೆ
ಮೆಲ್ಬೋರ್ನ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿರುವುದಕ್ಕೆ ಆಸ್ಟ್ರೇಲಿಯಾದಲ್ಲಿ ಭಾರತೀಯ ರಾಯಭಾರಿ ಮನ್‌ಪ್ರೀತ್ ವೋಹ್ರಾ ಅವರು ಮಂಗಳವಾರ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
Published: 31st January 2023 09:45 AM | Last Updated: 31st January 2023 06:55 PM | A+A A-

ದೇವಾಲಯಕ್ಕೆ ಭೇಟಿ ನೀಡಿರುವ ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಮನ್‌ಪ್ರೀತ್ ವೋಹ್ರಾ.
ಮೆಲ್ಬೋರ್ನ್: ಮೆಲ್ಬೋರ್ನ್‌ನಲ್ಲಿರುವ ಶ್ರೀ ಶಿವ ವಿಷ್ಣು ದೇವಾಲಯವನ್ನು ಖಲಿಸ್ತಾನಿ ಬೆಂಬಲಿಗರು ಧ್ವಂಸಗೊಳಿಸಿರುವುದಕ್ಕೆ ಆಸ್ಟ್ರೇಲಿಯಾದ ಭಾರತೀಯ ರಾಯಭಾರಿ ಮನ್‌ಪ್ರೀತ್ ವೋಹ್ರಾ ಅವರು ಮಂಗಳವಾರ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿದ ಅವರು, ಖಲಿಸ್ತಾನಿಗಳ ದಾಳಿ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ. ಪ್ರಾರ್ಥನೆ ಸಲ್ಲಿಸುವ ಸ್ಥಳವನ್ನು ಯಾವಾಗಲೂ ಎಲ್ಲಾ ಸಮುದಾಯಗಳು ಮತ್ತು ನಂಬಿಕೆಗಳು ಗೌರವಿಸುತ್ತವೆ ಎಂದು ಹೇಳಿದ್ದಾರೆ.
"ಎಲ್ಲಾ ಸಮುದಾಯಗಳು ಮತ್ತು ನಂಬಿಕೆಗಳಿಂದ ಯಾವಾಗಲೂ ಪೂಜಿಸಲ್ಪಡುವ ಆರಾಧನಾ ಸ್ಥಳವಾದ ಮೆಲ್ಬೋರ್ನ್‌ನಲ್ಲಿರುವ ಐತಿಹಾಸಿಕ ಶ್ರೀ ಶಿವ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿದೆ. ದೇವಾಲಯದಲ್ಲಿ ಖಲಿಸ್ತಾನಿ ಪರ ಅಂಶಗಳಿಂದ ಕೂಡಿದ ದ್ವೇಷ ತುಂಬಿದ ಗೀಚುಬರಹಗಳು ಕಂಡು ಬಂದಿದ್ದು, ಇಂದು ಖಂಡನೀಯವಾದದ್ದು. ಅವರ ಈ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೆಲ್ಬರ್ನ್: ರಾಷ್ಟ್ರಧ್ವಜ ಹಿಡಿದಿದ್ದ ಭಾರತೀಯರ ಮೇಲೆ ಖಲಿಸ್ತಾನಿಗಳ ದಾಳಿ, ಐವರಿಗೆ ಗಾಯ
ಕ್ಯಾರಮ್ ಡೌನ್ಸ್‌ನಲ್ಲಿರುವ ಶಿವ ವಿಷ್ಣು ದೇವಾಲಯದ ಮೇಲೆ ಈ ಹಿಂದೆ ಖಲಿಸ್ತಾನಿ ಬೆಂಬಲಿರು ದಾಳಿ ನಡೆಸಿದ್ದರು. ಇದಾದ ಕೆಲ ದಿನಗಳ ಬಳಿಕ ಮೆಲ್ಬೋರ್ನ್‌ನಲ್ಲಿರುವ ಆಲ್ಬರ್ಟ್ ಪಾರ್ಕ್‌ನಲ್ಲಿ ಹಿಂದೂ ದೇವಸ್ಥಾನವನ್ನು ಕೆಡವಿದ್ದರು. ಭಾರತ ವಿರೋಧಿ ಬರಹದೊಂದಿಗೆ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದರು. ಇದು 11 ದಿನಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ 3ನೇ ದಾಳಿಯಾಗಿತ್ತು.
ದೇವಾಲಯಗಳ ದಾಳಿಗಳ ಬಳಿಕ ಖಲಿಸ್ತಾನಿಗಳ ಬೆಂಬಲಿಗರು ಭಾರತೀಯರ ಮೇಲೂ ದಾಳಿ ನಡೆಸಿದ್ದರು, ಖಲಿಸ್ತಾನಿಗಳ ಬೆಂಬಲಿಗರ ಗುಂಪೊಂದು ಭಾನುವಾರ ಭಾರತದ ತ್ರಿವರ್ಣ ಧ್ವಜ ಹಿಡಿದಿದ್ದ ಭಾರತೀಯರ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಐದು ಮಂದಿ ಗಾಯಗೊಂಡಿದ್ದರು.