ವಿದೇಶಿ ವಿನಿಮಯ ಬಿಕ್ಕಟ್ಟು, ಇಸ್ಲಾಮಾಬಾದ್ ವಿಮಾನ ನಿಲ್ದಾಣವನ್ನು ಹೊರಗುತ್ತಿಗೆ ನೀಡಲು ಪಾಕ್ ಮುಂದು
ಪಾಕಿಸ್ತಾನದ ವಿದೇಶಾಂಗ ವಿನಿಮಯ ನಿರಂತರವಾಗಿ ಕುಸಿಯುತ್ತಿದ್ದು, ಪ್ರಮುಖ ವಿಮಾನ ನಿಲ್ದಾಣಗಳನ್ನು ಹೊರಗುತ್ತಿಗೆಗೆ ನೀಡುವ ಅನಿವಾರ್ಯತೆ ಎದುರಾಗಿದೆ.
Published: 17th July 2023 12:07 AM | Last Updated: 17th July 2023 12:07 AM | A+A A-

ಇಸ್ಲಾಮಾಬಾದ್ ವಿಮಾನ ನಿಲ್ದಾಣ
ಇಸ್ಲಾಬಾಮಾದ್: ಪಾಕಿಸ್ತಾನದ ವಿದೇಶಾಂಗ ವಿನಿಮಯ ನಿರಂತರವಾಗಿ ಕುಸಿಯುತ್ತಿದ್ದು, ಪ್ರಮುಖ ವಿಮಾನ ನಿಲ್ದಾಣಗಳನ್ನು ಹೊರಗುತ್ತಿಗೆಗೆ ನೀಡುವ ಅನಿವಾರ್ಯತೆ ಎದುರಾಗಿದೆ.
ಹೊರಗುತ್ತಿಗೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿದೇಶಿ ನಿರ್ವಾಹಕರೊಂದಿಗೆ ಮಾತುಕತೆ ನಡೆಸಲು ಹಣಕಾಸು ಸಚಿವಾಲಯ ಈಗಾಗಲೇ ರಚಿಸಿರುವ ಸಮಿತಿಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನೂ ನಡೆಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಪ್ರಸ್ತುತ ಸರ್ಕಾರದ ಅವಧಿಯ ಅಂತಿಮ ದಿನವಾದ ಆಗಸ್ಟ್ 12 ರೊಳಗೆ ಇಸ್ಲಾಮಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (IIA) ಕಾರ್ಯಾಚರಣೆಗಳನ್ನು ಹೊರಗುತ್ತಿಗೆ ಮಾಡಲು ಔಪಚಾರಿಕತೆಯನ್ನು ಅಂತಿಮಗೊಳಿಸುವಂತೆ ಹಣಕಾಸು ಸಚಿವ ಇಶಾಕ್ ದಾರ್ ಮಧ್ಯಸ್ಥಗಾರರಿಗೆ ತಿಳಿಸಿದ್ದಾರೆ ಎಂದು ಡಾನ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: ವಿಶ್ವಕಪ್ ಸಂಬಂಧ ಭಾರತಕ್ಕೆ ಬರುವುದಕ್ಕೆ ಮತ್ತೆ ಕ್ಯಾತೆ ತೆಗೆದ ಪಾಕ್: ಕ್ರೀಡಾ ಸಚಿವ ಹೇಳಿದ್ದೇನು?
ಡಾನ್ ಪಾಕಿಸ್ತಾನದ ರಾಷ್ಟ್ರೀಯ ದಿನಪತ್ರಿಕೆಯಾಗಿದ್ದು ಅದು ಪಾಕಿಸ್ತಾನದ ರಾಜಕೀಯ ಮತ್ತು ಪ್ರಸ್ತುತ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತದೆ.
ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಐಎ) ಯ ಕಾರ್ಯಾಚರಣೆಗಳನ್ನು ಹೊರಗುತ್ತಿಗೆ ನೀಡಲು ಪ್ರಕ್ರಿಯೆಯನ್ನು ಆ.12 ರ ಒಳಗೆ ಅಂತಿಮಗೊಳಿಸುವಂತೆ ಸಂಬಂಧಪಟ್ಟವರಿಗೆ ಹಣಕಾಸು ಸಚಿವ ಇಶಾಕ್ ದರ್ ಸೂಚನೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.