ಸಲಿಂಗ ವಿವಾಹ ನೋಂದಣಿ ಮಾಡುವಂತೆ ಸರ್ಕಾರಕ್ಕೆ ನೇಪಾಳದ ಸುಪ್ರೀಂ ಕೋರ್ಟ್ ಆದೇಶ

ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಣಿ ಮಾಡುವಂತೆ ನೇಪಾಳ ಸರ್ಕಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಠ್ಮಂಡು: ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಣಿ ಮಾಡುವಂತೆ ನೇಪಾಳ ಸರ್ಕಾರಕ್ಕೆ ನೇಪಾಳ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಟಿಲ್ ಪ್ರಸಾದ್ ಶ್ರೇಷ್ಠ ಅವರ ಏಕ ಸದಸ್ಯ ಪೀಠ, ಲೈಂಗಿಕ ಮತ್ತು ಲಿಂಗ ಅಲ್ಪಸಂಖ್ಯಾತ ದಂಪತಿಗಳ ವಿವಾಹ ನೋಂದಾಯಿಸಲು ಅವರು ಬಯಸಿದರೆ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಎಲ್‌ಜಿಬಿಟಿಐ ಹಕ್ಕುಗಳ ಸಂಘಟನೆಯಾದ ಬ್ಲೂ ಡೈಮಂಡ್ ಸೊಸೈಟಿ(ಬಿಡಿಎಸ್) ಪರವಾಗಿ ಕಾರ್ಯಕರ್ತೆ ಪಿಂಕಿ ಗುರುಂಗ್ ಸೇರಿದಂತೆ ಏಳು ಜನ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನೇಪಾಳ ಸುಪ್ರೀಂ ಕೋರ್ಟ್, ಈ ಸಂಬಂಧ 15 ದಿನಗಳಲ್ಲಿ ಲಿಖಿತ ಉತ್ತರ ನೀಡುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ.

15 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹೊರತಾಗಿಯೂ ನೇಪಾಳದ ಕಾನೂನು ಸಲಿಂಗ ವಿವಾಹಕ್ಕೆ ಅಡ್ಡಿಯಾಗಿರುವುದರಿಂದ ತಾವು ರಿಟ್ ಸಲ್ಲಿಸಿದ್ದೇವೆ ಎಂದು ಅರ್ಜಿದಾರರು ಹೇಳಿದ್ದಾರೆ.

ರಾಷ್ಟ್ರೀಯ ನಾಗರಿಕ ಸಂಹಿತೆ 2017 ರ ಷರತ್ತು 69(1) ನೇಪಾಳದ ಸಂವಿಧಾನದ 2015ರ ಕಲಂ 18(1) ರ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೆ ಮದುವೆಯಾಗುವ ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸುತ್ತದೆ. ಅದರಂತೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com