ಉಕ್ರೇನ್‌ನ ಐದು ಅಂತಸ್ತಿನ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಮೂವರು ಸಾವು, ಆರು ಮಂದಿಗೆ ಗಾಯ

ಆಗ್ನೇಯ ಉಕ್ರೇನ್‌ನ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಗುರುವಾರ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದರಿಂದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಎರಡನೇ ವರ್ಷಕ್ಕೆ ವಿಸ್ತರಿಸಿದೆ.
ಉಕ್ರೇನ್‌ನ ಜಪೋರಿಝಿಯಾದಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ಉಕ್ರೇನ್‌ನ ರಾಜ್ಯ ತುರ್ತು ಸೇವೆ ಪಡೆ ಹಾನಿಗೊಳಗಾದ ಕಟ್ಟಡವನ್ನು ಪರಿಶೀಲಿಸಿದರು.
ಉಕ್ರೇನ್‌ನ ಜಪೋರಿಝಿಯಾದಲ್ಲಿ ರಷ್ಯಾದ ಶೆಲ್ ದಾಳಿಯ ನಂತರ ಉಕ್ರೇನ್‌ನ ರಾಜ್ಯ ತುರ್ತು ಸೇವೆ ಪಡೆ ಹಾನಿಗೊಳಗಾದ ಕಟ್ಟಡವನ್ನು ಪರಿಶೀಲಿಸಿದರು.

ಕೀವ್: ಆಗ್ನೇಯ ಉಕ್ರೇನ್‌ನ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಗುರುವಾರ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದರಿಂದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಎರಡನೇ ವರ್ಷಕ್ಕೆ ವಿಸ್ತರಿಸಿದೆ.

ದಾಳಿಯಲ್ಲಿ ಕಟ್ಟಡದ ಹಲವಾರು ಮಹಡಿಗಳು ನಾಶವಾಗಿವೆ. ಇನ್ನೂ ಕತ್ತಲೆಯಾಗಿರುವಾಗಲೇ ಕ್ಷಿಪಣಿ ಅಪ್ಪಳಿಸಿದೆ  ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. 

ಇದುವರೆಗೆ 11 ಜನರನ್ನು ರಕ್ಷಿಸಲಾಗಿದೆ ಎಂದು ಆನ್‌ಲೈನ್ ಹೇಳಿಕೆಯಲ್ಲಿ ರಾಜ್ಯ ತುರ್ತು ಸೇವೆಯು ತಿಳಿಸಿದೆ.

ದೊಡ್ಡ ನಗರವಾಗಿರುವ ಜಪೋರಿಝಿಯಾ, 700,000 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿತ್ತು. ಇದು ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರಕ್ಕೆ ನೆಲೆಯಾಗಿದೆ. ಒಂದು ವರ್ಷದ ನಗರದ ನೆರೆಹೊರೆಯ ಮೇಲೆ ರಷ್ಯಾ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿತ್ತು.

ರಷ್ಯಾದ ಫಿರಂಗಿಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ದೇಶದ ದಕ್ಷಿಣ ಮತ್ತು ಪೂರ್ವದಲ್ಲಿ ಉಕ್ರೇನ್ ಹಿಡಿತದಲ್ಲಿರುವ ಪ್ರದೇಶಗಳನ್ನು ತಿಂಗಳುಗಟ್ಟಲೆ ಗುರಿಯಾಗಿಸಿಕೊಂಡಿದ್ದವು.

ರಷ್ಯಾ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂಬುದನ್ನು ನಿರಾಕರಿಸಿದೆ. ಆದರೆ, ಅದರ ವಿವೇಚನಾರಹಿತ ಶೆಲ್ ದಾಳಿಯು ನಗರದಲ್ಲಿ ವ್ಯಾಪಕ ವಿನಾಶವನ್ನು ಉಂಟುಮಾಡಿದೆ. 

'ರಷ್ಯಾ ನಮ್ಮ ಜನರಿಗೆ ಪ್ರತಿದಿನ ಭಯೋತ್ಪಾದನೆಯ ದಿನವನ್ನಾಗಿ ಮಾಡಲು ಬಯಸುತ್ತದೆ. ಆದರೆ, ಆದರೆ ನಮ್ಮ ದೇಶದಲ್ಲಿ ದುಷ್ಟತನವನ್ನು ಆಳಲು ಬಿಡುವುದಿಲ್ಲ. ಈಮಧ್ಯೆ, ಬಖ್ಮುತ್ ನಗರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಭೀಕರ ಯುದ್ಧ ಮುಂದುವರೆದಿದೆ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಜನರಲ್ ಸ್ಟಾಫ್ ನವೀಕರಣದ ಪ್ರಕಾರ, ರಷ್ಯಾದ ಶೆಲ್ ದಾಳಿಗೆ ಒಳಗಾದ ಡೊನೆಟ್ಸ್ಕ್ ಪ್ರದೇಶದ ನಗರಗಳು ಮತ್ತು ಹಳ್ಳಿಗಳಲ್ಲಿ ಬಖ್ಮುತ್ ಸೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com