'ಒಐಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ': ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಟರ್ಕಿಗೆ ಭಾರತ ತಿರುಗೇಟು

ಒಐಸಿ ಮತ್ತು ವಿಶ್ವಸಂಸ್ಥೆ ಮಾನವಹಕ್ಕುಗಳ ಆಯೋಗದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಟರ್ಕಿಗೆ ತಿರುಗೇಟು ನೀಡಿರುವ ಭಾರತ, ಒಐಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಹೇಳಿದೆ.
ಟರ್ಕಿಗೆ ಭಾರತ ತಿರುಗೇಟು
ಟರ್ಕಿಗೆ ಭಾರತ ತಿರುಗೇಟು

ನವದೆಹಲಿ: ಒಐಸಿ ಮತ್ತು ವಿಶ್ವಸಂಸ್ಥೆ ಮಾನವಹಕ್ಕುಗಳ ಆಯೋಗದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಟರ್ಕಿಗೆ ತಿರುಗೇಟು ನೀಡಿರುವ ಭಾರತ, ಒಐಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಹೇಳಿದೆ.

ಟರ್ಕಿ ನಿಲುವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಈ ಕುರಿತು ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು, 'ಒಐಸಿ ಈಗಾಗಲೇ ಈ ವಿಷಯದ ಕುರಿತು ಚರ್ಚಿಸಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಈ ಮೂಲಕ ಕೋಮುವಾದ, ಪಕ್ಷಪಾತದಂಥ ಕಾರ್ಯ ಎಸಗುತ್ತಿದೆ' ಎಂದಿದ್ದಾರೆ.

ಮಾನವ ಹಕ್ಕುಗಳ ಮಂಡಳಿಯ 52 ನೇ ಅಧಿವೇಶನದ ಉನ್ನತ ಮಟ್ಟದ ಸೆಗ್‌ಮೆಂಟ್‌ನಲ್ಲಿ ತನ್ನ ಪ್ರತ್ಯುತ್ತರ ಹಕ್ಕನ್ನು ಚಲಾಯಿಸುತ್ತಾ, ಜಿನೀವಾದಲ್ಲಿನ ಭಾರತದ ಖಾಯಂ ಮಿಷನ್‌ನ ಮೊದಲ ಕಾರ್ಯದರ್ಶಿ ಸೀಮಾ ಪೂಜಾನಿ ಮಾತನಾಡಿ, 'ಟರ್ಕಿ ಮತ್ತು OIC ಪ್ರತಿನಿಧಿಯ ಹೇಳಿಕೆಯ ಉಲ್ಲೇಖವನ್ನು ತಳ್ಳಿಹಾಕಿದರು.

OIC ಹೇಳಿಕೆಗೆ ಸಂಬಂಧಿಸಿದಂತೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಅನಗತ್ಯವಾದ ಉಲ್ಲೇಖಗಳನ್ನು ನಾವು ತಿರಸ್ಕರಿಸುತ್ತೇವೆ. ಟರ್ಕಿ ನಮ್ಮ ಆಂತರಿಕ ವಿಷಯಗಳ ಬಗ್ಗೆ ಅಪೇಕ್ಷಿಸದ ಹೇಳಿಕೆಗಳನ್ನು ಮಾಡುವುದನ್ನು ತಡೆಯಬೇಕು ಎಂದು ಪೂಜಾನಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ
ಇದೇ ವೇಳೆ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ ನಡೆಸಿದ್ದು, ಅಹ್ಮದೀಯ ಸಮುದಾಯ, ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು ಸೇರಿದಂತೆ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಕಿರುಕುಳವನ್ನು ಭಾರತ ಎತ್ತಿ ತೋರಿಸಿದೆ. ಭಾರತದ ವಕ್ತಾರರಾರದ ಸೀಮಾ ಪೂಜಾನಿ ಪಾಕಿಸ್ತಾನವನ್ನು ಬಲವಂತದ ನಾಪತ್ತೆಗಳ "ಕ್ರೂರ ನೀತಿ" ಗಾಗಿ ಟೀಕಿಸಿದರು. ಇದು ಬಲೂಚಿಸ್ತಾನ್ ಪ್ರಾಂತ್ಯದ ಇತರ ಸ್ಥಳಗಳಲ್ಲಿ ಜನರ ಮೇಲೆ ಪರಿಣಾಮ ಬೀರಿದೆ ಎಂದರು.

ಅಹ್ಮದೀಯ ಸಮುದಾಯದ ದುಃಸ್ಥಿತಿಯನ್ನು ಎತ್ತಿ ಹಿಡಿದ ಅವರು, “ಅಹ್ಮದೀಯ ಸಮುದಾಯವು ತಮ್ಮ ನಂಬಿಕೆಯನ್ನು ಸರಳವಾಗಿ ಆಚರಿಸುವುದಕ್ಕಾಗಿ ಒಂದು ದೇಶದಿಂದ ಕಿರುಕುಳಕ್ಕೆ ಒಳಗಾಗುತ್ತಿದೆ. ಪಾಕಿಸ್ತಾನಿ ಪಾಸ್‌ಪೋರ್ಟ್ ಪಡೆಯಲು ಸಹ, ಸಮುದಾಯವು ಅದರ ಸ್ಥಾಪಕನನ್ನು ಖಂಡಿಸಬೇಕು. ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಸಮುದಾಯದೊಂದಿಗೆ ನಡೆದುಕೊಳ್ಳುತ್ತಿರುವ ರೀತಿ ಅಷ್ಟೇ ಶೋಚನೀಯವಾಗಿದೆ ಎಂದು ಅವರು ಹೇಳಿದರು.

ಇದು ಆಗಾಗ್ಗೆ ಕ್ರೂರ ಧರ್ಮನಿಂದೆಯ ಕಾನೂನುಗಳ ಮೂಲಕ ಗುರಿಯಾಗುತ್ತದೆ. ಸರ್ಕಾರ ಅಧಿಕೃತವಾಗಿ ಕ್ರಿಶ್ಚಿಯನ್ನರಿಗೆ 'ನೈರ್ಮಲ್ಯ' ಉದ್ಯೋಗಗಳನ್ನು ಕಾಯ್ದಿರಿಸುತ್ತವೆ. ಸಮುದಾಯದ ಅಪ್ರಾಪ್ತ ಬಾಲಕಿಯರನ್ನು ಪರಭಕ್ಷಕ ರಾಜ್ಯ ಮತ್ತು ನಿರಾಸಕ್ತಿ ನ್ಯಾಯಾಂಗದ ಪ್ರೇರಣೆಯಿಂದ ಇಸ್ಲಾಂಗೆ ಮತಾಂತರಿಸಲಾಗುತ್ತಿದೆ" ಎಂದು ಅವರು ಭಾರತದ ಹೇಳಿಕೆಯಲ್ಲಿ ಉಲ್ಲೇಖಿಸಿದರು.

ಅಂತೆಯೇ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಭಾರತ ಪದೇ ಪದೇ ಕಟುವಾಗಿ ಟೀಕಿಸುತ್ತಿದೆ. ಪಾಕಿಸ್ತಾನದ ಭದ್ರತಾ ಏಜೆನ್ಸಿಗಳು ದಶಕಗಳಿಂದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರನ್ನು ಪೋಷಿಸಿ ಆಶ್ರಯ ನೀಡಿವೆ ಮತ್ತು ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಪ್ರಧಾನ ಮಿಲಿಟರಿ ಅಕಾಡೆಮಿಯ ಪಕ್ಕದಲ್ಲಿ ವಾಸಿಸುತ್ತಿದ್ದರು ಎಂದು ಪೂಜಾನಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com