ಚೀನಾದ ನೆರವು: ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧವೈರಿಗಳಾದ ಇರಾನ್-ಸೌದಿ ಒಪ್ಪಿಗೆ!

ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧ ವೈರಿಗಳಾದ ಇರಾನ್ ಹಾಗೂ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದ್ದು, 7 ವರ್ಷಗಳ ನಂತರ ರಾಯಭಾರ ಕಚೇರಿಗಳನ್ನು ಮತ್ತೆ ತೆರೆಯಲು ಮುಂದಾಗಿವೆ.
ಇರಾನ್-ಸೌದಿ ಅರೇಬಿಯಾ (ಸಂಗ್ರಹ ಚಿತ್ರ)
ಇರಾನ್-ಸೌದಿ ಅರೇಬಿಯಾ (ಸಂಗ್ರಹ ಚಿತ್ರ)

ಬೀಜಿಂಗ್: ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧ ವೈರಿಗಳಾದ ಇರಾನ್ ಹಾಗೂ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದ್ದು, 7 ವರ್ಷಗಳ ನಂತರ ರಾಯಭಾರ ಕಚೇರಿಗಳನ್ನು ಮತ್ತೆ ತೆರೆಯಲು ಮುಂದಾಗಿವೆ.
 
ಚೀನಾ ನೆರವು ಹಾಗೂ ಮಧ್ಯಸ್ಥಿಕೆಯಲ್ಲಿ ಈ ದ್ವಿಪಕ್ಷೀಯ ಸಂಬಂಧ ಮರುಸ್ಥಾಪನೆಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ಉಭಯ ದೇಶಗಳ ನಡುವಿನ ಶಸ್ತ್ರಾಸ್ತ್ರ ಸಂಘರ್ಷದ ಸಾಧ್ಯತೆಯನ್ನು ಚೀನಾ ನೇರವಾಗಿ ಅಥವಾ ಪರೋಕ್ಷವಾಗಿ ಈ ಪ್ರದೇಶದಲ್ಲಿ ಕಡಿಮೆ ಮಾಡುತ್ತದೆ.
 
ಗಲ್ಫ್ ಅರಬ್ ರಾಷ್ಟ್ರಗಳು ಅಮೇರಿಕಾ ಮಧ್ಯಪ್ರಾಚ್ಯದಿಂದ ನಿಧಾನವಾಗಿ ಹಿಂದೆ ಸರಿಯುತ್ತಿರುವುದನ್ನು ಗ್ರಹಿಸಿವೆ. ಇತ್ತ ಚೀನಾದಲ್ಲಿ ಔಪಚಾರಿಕ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನಡುವೆ ಇರಾನ್ ಹಾಗೂ ಸೌದಿ ಅರೇಬಿಯಾ ಸಂಬಂಧ ಸುಧಾರಣೆಗೆ ವೇದಿಕೆ ಸಜ್ಜಾಗಿದ್ದನ್ನು ಚೀನಾ ಪ್ರಮುಖ ರಾಜತಾಂತ್ರಿಕ ಗೆಲುವು ಎಂಬ ದೃಷ್ಟಿಯಿಂದ ನೋಡುತ್ತಿದೆ.

ಇರಾನ್ ಹಾಗೂ ಸೌದಿ ಅರೇಬಿಯಾ ತೊಡಗಿಸಿಕೊಂಡಿರುವ ಹಲವು ವರ್ಷಗಳಿಂದ ಯೆಮೆನ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗಾಣಿಸಲು ರಾಜತಾಂತ್ರಿಕರು ಯತ್ನಿಸುತ್ತಿದ್ದಾರೆ.
 
ಉಭಯ ರಾಷ್ಟ್ರಗಳೂ ಚೀನಾದೊಂದಿಗಿನ ಒಪ್ಪಂದದ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com