ಬ್ರಿಟನ್ ಪ್ರಧಾನಿ ಸುನಕ್ ಗೆ ನಾಯಿಯಿಂದ ಸಂಕಷ್ಟ!

ನಾಯಿಯ ವಿಷಯವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ.
ರಿಷಿ ಸುನಕ್
ರಿಷಿ ಸುನಕ್

ಲಂಡನ್: ನಾಯಿಯ ವಿಷಯವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ.

ಹೈಡ್ ಪಾರ್ಕ್ ನಲ್ಲಿ ಬೆಲ್ಟ್ ಇಲ್ಲದೇ ನಾಯಿಗಳನ್ನು ಸ್ವತಂತ್ರವಾಗಿ ಅಡ್ಡಾಡಲು ಬಿಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಬೆಲ್ಟ್ ಅಥವಾ ಕಡಿವಾಣ ಇಲ್ಲದೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ನಾಯಿಗಳನ್ನು ಹೈಡ್ ಪಾರ್ಕ್ ನಲ್ಲಿ ಅಡ್ಡಾಡಲು ಬಿಟ್ಟಿದ್ದರು. ಈ ವೇಳೆ ಅವರಿಗೆ ಪೊಲೀಸ್ ನಿಯಮಗಳನ್ನು ನೆನಪಿಸಿದ ಘಟನೆ ನಡೆದಿದೆ.

ಟಿಕ್ ಟಾಕ್ ನಲ್ಲಿ ಸುನಕ್ ಅವರ 2 ವರ್ಷದ ಲ್ಯಾಬ್ರಡಾರ್ ರಿಟ್ರೈವರ್ ನೋವಾ ಸರ್ಪೆಂಟೈನ್ ಲೇಕ್ ಬಳಿ ಅಡ್ಡಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಈ ಪ್ರದೇಶದಲ್ಲಿ ಸ್ಥಳೀಯ ವನ್ಯಜೀವಿಗಳಿಗೆ ಅಡಚಣೆಯಾಗದಿರಲೆಂದು ನಾಯಿಗಳನ್ನು ಬೆಲ್ಟ್ ಅಥವಾ ಕಡಿವಾಣ ಇಲ್ಲದೇ ಸ್ವತಂತ್ರವಾಗಿ ಅಡ್ಡಾಡಲು ಬಿಡುವುದಕ್ಕೆ ಅವಕಾಶ ಇಲ್ಲ ಎಂದು ಸೂಚನಾ ಫಲಕ ಸಹ ಇದೆ.

ಹೈಡ್ ಪಾರ್ಕ್ ನಲ್ಲಿನ ಈ ನಿಯಮವನ್ನು ರಿಷಿ ಸುನಕ್ ಅವರ ಕುಟುಂಬ ಮೀರಿದ್ದು, ನಿಯಮಗಳನ್ನು ನೆನಪಿಸಿದ ಪೊಲೀಸ್ ಅಧಿಕಾರಿ ಪ್ರಧಾನಿಯ ನಿಕಟ ರಕ್ಷಣಾ ತಂಡದಲ್ಲಿರುವವರಾಗಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com