ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮೆಕ್ ಮಹೊನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕಾ ಹೇಳಿದೆ.
Published: 15th March 2023 04:34 PM | Last Updated: 15th March 2023 06:46 PM | A+A A-

ಗಡಿ ರೇಖೆ
ವಾಷಿಂಗ್ಟನ್: ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮೆಕ್ ಮಹೊನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕಾ ಹೇಳಿದೆ.
ಅಮೆರಿಕದ ಉಭಯ ಪಕ್ಷೀಯ ಸೆನೆಟ್ ನಲ್ಲಿ ಸೆನೆಟರ್ ಜೆಫ್ ಮರ್ಕ್ಲಿ ಈ ನಿರ್ಣಯವನ್ನು ಪರಿಚಯಿಸಿದ್ದು ಸೆನೆಟರ್ ಜಾನ್ ಕಾರ್ನಿನ್ ನಿರ್ಣಯವನ್ನು ಸಹ ಪ್ರಾಯೋಜಿಸಿದರು. ಈ ವೇಳೆ ಇಂಡೋ-ಪೆಸಿಫಿಕ್‌ಗೆ ಚೀನಾ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಅಂತಹ ಸಮಯದಲ್ಲಿ ನಮ್ಮ ಕಾರ್ಯತಂತ್ರದ ಪಾಲುದಾರ ದೇಶಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಭಾರತದೊಂದಿಗೆ ಒಗ್ಗಟ್ಟಾಗಿ ನಿಲ್ಲುವುದು ನಿರ್ಣಾಯಕವಾಗಿದೆ ಎಂದು ಸೆನೆಟರ್ ಬಿಲ್ ಹ್ಯಾಗರ್ಟಿ ಹೇಳಿದ್ದಾರೆ.
ಭಾರತ-ಅಮೆರಿಕ ವ್ಯೂಹಾತ್ಮಕ ಪಾಲುದಾರಿಕೆ ಹೆಚ್ಚಿಸುವ ಚರ್ಚೆ
ಈ ಉಭಯಪಕ್ಷೀಯ ನಿರ್ಣಯವು ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸಲು ಸೆನೆಟ್‌ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಮಿಲಿಟರಿ ಆಕ್ರಮಣವನ್ನು ಖಂಡಿಸುತ್ತದೆ. ಅಮೆರಿಕಾ-ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಕ್ವಾಡ್ ಫ್ರೀ ಮತ್ತು ಓಪನ್ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸುತ್ತದೆ ಎಂದರು.
6 ವರ್ಷಗಳಲ್ಲಿ ಭಾರತ ಮತ್ತು ಚೀನಾ ನಡುವೆ ನೈಜ ನಿಯಂತ್ರಣ ರೇಖೆಯ ಉದ್ದಕ್ಕೂ ಪೂರ್ವ ವಲಯದಲ್ಲಿ ನಡೆದ ಅತಿದೊಡ್ಡ ಚಕಮಕಿಯ ನಂತರ ಈ ಪ್ರಸ್ತಾಪ ಬಂದಿದೆ. ಚೀನಾ ಮತ್ತು ಭಾರತದ ಅರುಣಾಚಲ ಪ್ರದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯಾಗಿ ಮೆಕ್ ಮಹೊನ್ ರೇಖೆಯನ್ನು ಅಮೆರಿಕಾ ಗುರುತಿಸುತ್ತದೆ ಎಂದು ಇದು ದೃಢಪಡಿಸುತ್ತದೆ. ಈ ನಿರ್ಣಯವು PRC ಯ ಹೆಚ್ಚುತ್ತಿರುವ ಆಕ್ರಮಣಕಾರಿ ಮತ್ತು ವಿಸ್ತರಣಾ ನೀತಿಗಳ ಭಾಗವಾಗಿರುವ ಅರುಣಾಚಲ ಪ್ರದೇಶವು PRC ಪ್ರದೇಶವಾಗಿದೆ ಎಂಬ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC) ದ ಪ್ರತಿಪಾದನೆಗೆ ವಿರುದ್ಧವಾಗಿದೆ.
ಇದನ್ನೂ ಓದಿ: ಭಾರತ-ಪಾಕಿಸ್ತಾನ, ಭಾರತ-ಚೀನಾ ನಡುವೆ ಸಶಸ್ತ್ರ ಸಂಘರ್ಷ; ಯುಎಸ್ ಇಂಟೆಲ್ ಆತಂಕ: ವರದಿ
ಈ ನಿರ್ಣಯವು ಭಾರತದ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಭಾರತದ ಗಣರಾಜ್ಯದ ಭಾಗವಾಗಿ ನೋಡುತ್ತದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅಲ್ಲ ಎಂದು ಈ ನಿರ್ಣಯವು ಸ್ಪಷ್ಟಪಡಿಸುತ್ತದೆ. ಅಲ್ಲದೆ ಭಾರತಕ್ಕೆ ಆಳವಾದ ಬೆಂಬಲ ಮತ್ತು ಸಹಾಯಕ್ಕೆ ಬದ್ಧವಾಗಿದೆ ಅಮೆರಿಕಾ ಬದ್ದವಾಗಿದೆ ಎಂದರು.
ಉಭಯಪಕ್ಷೀಯ ಸೆನೆಟರ್‌ಗಳ ನಿರ್ಣಯವು ಚೀನಾದಿಂದ ಹೆಚ್ಚುವರಿ ಆಕ್ರಮಣಗಳನ್ನು ಖಂಡಿಸುತ್ತದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಮಿಲಿಟರಿ ಬಲವನ್ನು ಬಳಸುವುದು, ವಿವಾದಿತ ಪ್ರದೇಶಗಳಲ್ಲಿ ಹಳ್ಳಿಗಳ ನಿರ್ಮಾಣ, ಭಾರತದ ಅರುಣಾಚಲ ಪ್ರದೇಶದ ನಗರಗಳಿಗೆ ಮ್ಯಾಂಡರಿನ್ ಭಾಷೆಯ ಹೆಸರುಗಳೊಂದಿಗೆ ನಕ್ಷೆಗಳ ಪ್ರಕಟಣೆ ಸರಿಯಲ್ಲ ಎಂದಿದೆ.