ಅಮೇರಿಕಾ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಅಮೇರಿಕನ್ ನೇಮಕ

ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ.
ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆ ರವಿ ಚೌಧರಿ
ಅಮೇರಿಕ ಅಧ್ಯಕ್ಷ ಜೋ ಬೈಡನ್ ಜೊತೆ ರವಿ ಚೌಧರಿ

ವಾಷಿಂಗ್ ಟನ್: ಅಮೇರಿಕಾದ ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ಅಮೇರಿಕನ್ ರವಿ ಚೌಧರಿ ಅವರ ನೇಮಕವನ್ನು ಅಮೇರಿಕಾದ ಸೆನೆಟ್ ದೃಢಪಡಿಸಿದೆ.
 
ವಾಯುಪಡೆಯ ಸಹಾಯಕ ಕಾರ್ಯದರ್ಶಿ ಹುದ್ದೆ ಪೆಂಟಗನ್ ನಲ್ಲಿ ಪ್ರಮುಖ ನಾಯಕತ್ವದ ಹುದ್ದೆಯಾಗಿದೆ. ಈ ವಿಭಾಗದ ಅಧಿಕಾರಿಗಳ ನೇಮಕಕ್ಕೆ ಸೆನೆಟ್ ನಲ್ಲಿ ಮತದಾನ ನಡೆದಿದ್ದು, ಪರವಾಗಿ 65 ಮಂದಿ ವಿರುದ್ಧ29 ಮಂದಿ ಮತ ಚಲಾವಣೆ ಮಾಡಿದ್ದಾರೆ. 

ರವಿ ಚೌಧರಿ ಈ ಹಿಂದೆ ಅಮೇರಿಕಾದ ಸಾರಿಗೆ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸೇವೆ ಸಲ್ಲಿಸಿದ್ದರು ಅಲ್ಲಿ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ, ವಾಣಿಜ್ಯ ಸ್ಥಳದ ಕಚೇರಿಯ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನಲ್ಲಿ ನಿರ್ದೇಶಕರಾಗಿದ್ದರು.

ರವಿ ಚೌಧರಿ, ಎಫ್‌ಎಎಯ ವಾಣಿಜ್ಯ ಬಾಹ್ಯಾಕಾಶ ಸಾರಿಗೆ ಮಿಷನ್‌ಗೆ ಬೆಂಬಲವಾಗಿ ಆಧುನಿಕ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಕ್ರಮಗಳ ಅನುಷ್ಠಾನದ ಹೊಣೆಗಾರಿಗೆ ನಿಭಾಯಿಸಿರುವ ಅನುಭವ ಹೊಂಡಿದ್ದಾರೆ.

ಸಾರಿಗೆ ಇಲಾಖೆಯಲ್ಲಿದ್ದಾಗ, ಅವರು ಪ್ರಾದೇಶಿಕ ಮತ್ತು ಕೇಂದ್ರ ಕಾರ್ಯಾಚರಣೆಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಅಲ್ಲಿ 9 ಪ್ರದೇಶಗಳಲ್ಲಿ ವಾಯುಯಾನ ಕಾರ್ಯಾಚರಣೆಗಳ ಏಕೀಕರಣದ ಉಸ್ತುವಾರಿಯನ್ನೂ ವಹಿಸಿದ್ದರು.

1993 ರಿಂದ 2015 ವರೆಗೂ ಅಮೇರಿಕಾದ ವಾಯುಪಡೆಯಲ್ಲಿನ ಸೇವೆಯಲ್ಲಿ ಚೌಧರಿ, ವಿವಿಧ ಕಾರ್ಯಾಚರಣೆ, ಎಂಜಿನಿಯರಿಂಗ್ ಮತ್ತು ಹಿರಿಯ ಸಿಬ್ಬಂದಿ ಕಾರ್ಯಯೋಜನೆಗಳನ್ನು ನಿಭಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com