ಮೆಕ್ಸಿಕೋ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ದುರಂತ: 37 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!

ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡರು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೆಕ್ಸಿಕೋ: ಅಮೆರಿಕಾ ಮತ್ತು ಮೆಕ್ಸಿಕನ್ ಗಡಿಯಲ್ಲಿರುವ ಸಿಯುಡಾಡ್ ಜುವಾರೆಜ್‌ನ ವಲಸಿಗರ ಕೇಂದ್ರದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು ಸುಮಾರು 100 ಮಂದಿ ಗಾಯಗೊಂಡರು. 

ಮೆಕ್ಸಿಕೊ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಸ್ಟಾಂಟನ್-ಲೆಡ್ರೆ ಸೇತುವೆಯ ಬಳಿ ಇರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಮೈಗ್ರೇಷನ್ (INM) ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ.

ಕಳೆದ ತಡರಾತ್ರಿ ಸುಮಾರು 71 ವಲಸಿಗರನ್ನು ಕೇಂದ್ರಕ್ಕೆ ಕರೆತಂದ ಸ್ವಲ್ಪ ಸಮಯದ ಬಳಿಕ ಈ ಘಟನೆ ಸಂಭವಿಸಿದೆ. ಬೆಂಕಿಗೆ ಕಾರಣ ಅಥವಾ ಮೃತರ ರಾಷ್ಟ್ರೀಯತೆ ಇನ್ನೂ ತಿಳಿದುಬಂದಿಲ್ಲ.

ಎಲ್ ಪಾಸೊ ಟೆಕ್ಸಾಸ್‌ನಿಂದ ರಿಯೊ ಗ್ರಾಂಡೆ ನದಿಗೆ ಅಡ್ಡಲಾಗಿರುವ ಮೆಕ್ಸಿಕನ್ ನಗರವಾದ ಸಿಯುಡಾಡ್ ಜುರೆಜ್ ಇತ್ತೀಚಿನ ವಾರಗಳಲ್ಲಿ ಜನರ ಒಳಹರಿವನ್ನು ಕಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com