ಪಾಕಿಸ್ತಾನ: ಶಾಲೆಗೆ ನುಗ್ಗಿ ಏಳು ಶಿಕ್ಷಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಂದೂಕುಧಾರಿ

ತಹಸಿಲ್‌ನ ಪ್ರೌಢಶಾಲೆಯ ಸಿಬ್ಬಂದಿ ಕೊಠಡಿಯಲ್ಲಿ ಅಪರಿಚಿತ ಬಂದೂಕುಧಾರಿ ಏಳು ಶಿಕ್ಷಕರ ಮೇಲೆ ಗುಂಡು ಹಾರಿಸಿದ್ದಾರೆನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕರು ತಮ್ಮ ಪರೀಕ್ಷಾ ಕರ್ತವ್ಯಗಳನ್ನು ನಿರ್ವಹಿಸಲು ಕಟ್ಟಡದಲ್ಲಿದ್ದರು ಎಂದು ದಿ ನ್ಯೂಸ್ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಖೈಬರ್ ಪಖ್ತುಂಖ್ವಾದ ಅಪ್ಪರ್ ಕುರ್ರಂ ತೆಹಸಿಲ್‌ನ ಶಾಲೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಕನಿಷ್ಠ ಏಳು ಶಿಕ್ಷಕರ ಮೇಲೆ ಗುಂಡು ಹಾರಿಸಿರುವ ಘಟನೆ ಗುರುವಾರ ನಡೆದಿದೆ. 

ವಾಯುವ್ಯ ಪ್ರಾಂತ್ಯದಲ್ಲಿ ನಡೆದ ಇತ್ತೀಚಿನ ಹಿಂಸಾಚಾರದ ಘಟನೆಯ ನಂತರ ಆ ಪ್ರದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ಎಂದು ಕಾನೂನು ಪಾಲಕರು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ತಹಸಿಲ್‌ನ ಪ್ರೌಢಶಾಲೆಯ ಸಿಬ್ಬಂದಿ ಕೊಠಡಿಯಲ್ಲಿ ಅಪರಿಚಿತ ಬಂದೂಕುಧಾರಿ ಏಳು ಶಿಕ್ಷಕರ ಮೇಲೆ ಗುಂಡು ಹಾರಿಸಿದ್ದಾರೆನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಶಿಕ್ಷಕರು ತಮ್ಮ ಪರೀಕ್ಷಾ ಕರ್ತವ್ಯಗಳನ್ನು ನಿರ್ವಹಿಸಲು ಕಟ್ಟಡದಲ್ಲಿದ್ದರು ಎಂದು ದಿ ನ್ಯೂಸ್ ವರದಿ ಮಾಡಿದೆ.

ಅದೇ ಪ್ರದೇಶದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಚಲಿಸುವ ವಾಹನದಲ್ಲಿ ಒಬ್ಬ ಶಿಕ್ಷಕನನ್ನು ಕೊಲ್ಲಲಾಗಿತ್ತು. ಇದೀಗ ದಿನವೊಂದರಲ್ಲಿ ಕೊಲ್ಲಲ್ಪಟ್ಟ ಶಿಕ್ಷಕರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. 

ಪೊಲೀಸರು ಹಂತಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಇದುವರೆಗೆ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ದಿ ನ್ಯೂಸ್ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com