ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ: ರಷ್ಯಾ ಹೇಳಿಕೆ ತಳ್ಳಿ ಹಾಕಿದ ಉಕ್ರೇನ್

ರಷ್ಯಾ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷರು ತಳ್ಳಿಹಾಕಿದ್ದು, ನಾವು ಫುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ. 
ಕ್ರೆಮ್ಲಿನ್ ನ ಸಾಂದರ್ಭಿಕ ಚಿತ್ರ
ಕ್ರೆಮ್ಲಿನ್ ನ ಸಾಂದರ್ಭಿಕ ಚಿತ್ರ

ಕೀವ್: ಅಧ್ಯಕ್ಷ ವ್ಲಾಡಿಮಿರ್ ಫುಟಿನ್ ಅವರ ಹತ್ಯೆಗೈಯಲು ಉದ್ದೇಶಿಸಿದ್ದ ಉಕ್ರೇನ್ ನ ಎರಡು ಡ್ರೋನ್ ದಾಳಿಯನ್ನು ವಿಫಲಗೊಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಇದು ಫುಟಿನ್ ಹತ್ಯೆಯ ವಿಫಲ ಯತ್ನ ಎಂದು ಕರೆದಿದ್ದು, ಈ  ಭಯೋತ್ಪಾದನಾ ಕೃತ್ಯದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದೆ. ಆದರೆ ರಷ್ಯಾ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷರು ತಳ್ಳಿಹಾಕಿದ್ದು, ನಾವು ಫುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ. 

ಡ್ರೋನ್ ದಾಳಿಯನ್ನು  ರಷ್ಯಾದ ಮಿಲಿಟರಿ ಮತ್ತು ಭದ್ರತಾ ಪಡೆಗಳು ತಪ್ಪಿಸಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ದಾಳಿಯಲ್ಲಿ ತಮ್ಮ ರಾಷ್ಟ್ರದ ಪಾತ್ರವನ್ನು ನಿರಾಕರಿಸಿದರು. ನಾವು ಪುಟಿನ್ ಅಥವಾ ಮಾಸ್ಕೋ ಮೇಲೆ ದಾಳಿ ಮಾಡುವುದಿಲ್ಲ. ನಮ್ಮ ಭೂಪ್ರದೇಶದಲ್ಲಿ ಹೋರಾಡುತ್ತೇವೆ. ನಮ್ಮ ಹಳ್ಳಿಗಳು ಮತ್ತು ನಗರಗಳನ್ನು ರಕ್ಷಿಸುತ್ತಿದ್ದೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಂಬರುವ ದಿನಗಳಲ್ಲಿ "ಉಕ್ರೇನಿಯನ್ ನಗರಗಳು, ನಾಗರಿಕರು, ಮೂಲಸೌಕರ್ಯ ಸೌಲಭ್ಯಗಳ ಮೇಲೆ ಆಗುವ ಬೃಹತ್ ದಾಳಿಯನ್ನು ಸಮರ್ಥಿಸಿಕೊಳ್ಳಲು ರಷ್ಯಾ ಇಂತಹ ನೆಪದ ಹೇಳಿಕೆ ನೀಡುತ್ತಿದೆ ಎಂದು ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ. ರಷ್ಯಾದ ದಾಳಿ ಆರೋಪ ಕುರಿತು  ಪೆಂಟಗನ್ ಪರಿಶೀಲಿಸುತ್ತಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com