ಜೀವಕ್ಕೆ ಉರುಳಾಯ್ತು ಕುದುರೆ ಸವಾರಿ: 23ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ಸುಂದರಿ!
ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯದ ರೂಪದರ್ಶಿ ಸಿಯೆನ್ನಾ ವೀರ್ (23) ಜೀವನ್ಮರಣ ಹೋರಾಟ ಮಾಡಿ ಕೊನೆಯುಸಿರೆಳೆದಿದ್ದಾರೆ.
Published: 06th May 2023 02:25 PM | Last Updated: 06th May 2023 03:09 PM | A+A A-

ಸಿಯೆನ್ನಾ ವೀರ್
ಸಿಡ್ನಿ: ಕುದುರೆ ಸವಾರಿ ಮಾಡುವಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯದ ರೂಪದರ್ಶಿ ಸಿಯೆನ್ನಾ ವೀರ್ (23) ಜೀವನ್ಮರಣ ಹೋರಾಟ ಮಾಡಿ ಕೊನೆಯುಸಿರೆಳೆದಿದ್ದಾರೆ.
ಏಪ್ರಿಲ್ 2 ರಂದು ಸಿಯೆನ್ನಾ ವೀರ್ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ತನ್ನ ಮೆಚ್ಚಿನ ಹವ್ಯಾಸದಲ್ಲಿ ಒಂದಾಗಿರುವ ಕುದುರೆ ಸವಾರಿಯನ್ನು ಮಾಡುತ್ತಿದ್ದ ವೇಳೆ ಕುದುರೆ ಕೆಳಕ್ಕೆ ಬಿದ್ದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ವೆಂಟಿಲೇಟರ್ ನಲ್ಲಿ ಇಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇಷ್ಟು ದಿನಗಳಿಂದ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕೃತಕ ಉಸಿರಾಟದ ನೆರವನ್ನು (ಮೇ 4 ರಂದು) ತೆಗೆಯಲು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಕುದುರೆ ಸವಾರಿಯನ್ನು ಮೆಚ್ಚಿನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಅವರು ನಾನು ನನ್ನ ಜೀವನದ ದಿನಗಳನ್ನು ಬಹುಪಾಲು ನಗರದಲ್ಲಿ ವಾಸಿಸುತ್ತಿದ್ದರೂ, ಶೋ ಜಂಪಿಂಗ್ (ಕುದುರೆ ಸವಾರಿ) ಬಗ್ಗೆ ತುಂಬಾ ಪ್ರೀತಿ. ನಾನು 3 ವರ್ಷ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ ಮತ್ತು ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ.
ಪ್ರತಿ ವಾರಾಂತ್ಯದಲ್ಲಿ ನ್ಯೂ ಸೌತ್ ವೇಲ್ಸ್ ಅಥವಾ ವಿಶಾಲವಾದ ಆಸ್ಟ್ರೇಲಿಯಾದಲ್ಲಿ ತರಬೇತಿ ನೀಡಲು ಮತ್ತು ಸ್ಪರ್ಧಿಸಲು ನಾನು ವಾರಕ್ಕೆ 2-3 ಬಾರಿ ಗ್ರಾಮೀಣ ಸಿಡ್ನಿಗೆ ಪ್ರಯಾಣಿಸುತ್ತೇನೆ ಎಂದು ಈ ಹಿಂದೆ ಹೇಳಿ ಕೊಂಡಿದ್ದರು.