
ವಿಶ್ವಸಂಸ್ಥೆ ನಾಯಕರೊಂದಿಗೆ ಪ್ರಧಾನಿ ಮೋದಿ
ಹಿರೋಶಿಮ: ಪ್ರಸ್ತುತ ಜಗತ್ತಿನ ವಾಸ್ತವಾಂಸಗಳನ್ನು ಪ್ರತಿಧ್ವನಿಸದೇ ಇದ್ದಲ್ಲಿ ವಿಶ್ವಸಂಸ್ಥೆ ಹಾಗೂ ಭದ್ರತಾ ಮಂಡಳಿ ಕೇವಲ ಮಾತಿನ ಸಂತೆಯಾಗಾಗಿಯೇ ಉಳಿಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸುಧಾರಣೆಗೆ ಕರೆ ನೀಡಿದ್ದಾರೆ. ಹಿರೋಶಿಮಾದಲ್ಲಿ ನಡೆದ ಜಿ7 ಸೆಷನ್ ನಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ, ಶಾಂತಿ ಹಾಗೂ ಸ್ಥಿರತೆಯ ವಿಷಯಗಳಿಗೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸುವುದಕ್ಕೆ ವಿಶ್ವಸಂಸ್ಥೆಯನ್ನು ರಚನೆ ಮಾಡಿರುವಾಗ ವಿವಿಧ ವೇದಿಕೆಗಳಲ್ಲಿ ಏಕೆ ಅವುಗಳ ಬಗ್ಗೆ ಅವಲೋಕನ ನಡೆಯಬೇಕು? ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.
ಇದು ವಿಶ್ಲೇಷಣೆಗೆ ಸಂಬಂಧಿಸಿದ್ದಾಗಿದೆ. ನಾವು ಬೇರೆ ಬೇರೆ ವೇದಿಕೆಗಳಲ್ಲಿ ಶಾಂತಿ ಹಾಗೂ ಸ್ಥಿರತೆ ಬಗ್ಗೆ ಏಕೆ ಮಾತನಾಡಬೇಕು? ಶಾಂತಿ ಸ್ಥಾಪನೆಯ ಚಿಂತನೆಯೊಂದಿಗೆ ಆರಂಭವಾದ ವಿಶ್ವಸಂಸ್ಥೆ ಇಂದು ಸಂಘರ್ಷಗಳನ್ನು ತಡೆಯುವಲ್ಲಿ ಏಕೆ ಯಶಸ್ವಿಯಾಗುತ್ತಿಲ್ಲ?’’ ಎಂದು ಮೋದಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಇಂಡೋ-ಪೆಸಿಫಿಕ್ ಯಶಸ್ಸು, ಭದ್ರತೆ ಇಡೀ ಜಗತ್ತಿಗೆ ಪ್ರಮುಖವಾಗಿದೆ: ಕ್ವಾಡ್ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ
ಭಯೋತ್ಪಾದನೆಯ ವ್ಯಾಖ್ಯಾನವನ್ನೂ ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಲು ಸಾಧ್ಯವಾಗುತ್ತಿಲ್ಲವೇಕೆ? ಆತ್ಮಾವಲೋಕನ ಮಾಡಿಕೊಂಡರೆ ಒಂದು ವಿಷಯ ಸ್ಪಷ್ಟವಾಗುತ್ತದೆ, ಅದೇನೆಂದರೆ ಕಳೆದ ಶತಮಾನದಲ್ಲಿ ಸೃಷ್ಟಿಯಾದ ಸಂಸ್ಥೆಗಳು ಇಪ್ಪತ್ತೊಂದನೇ ಶತಮಾನದ ವ್ಯವಸ್ಥೆಗೆ ಹೊಂದಿಕೆಯಾಗುತ್ತಿಲ್ಲ,’’ ಎಂದು ಮೋದಿ ಹೇಳಿದ್ದಾರೆ.
ವಿಶ್ವಸಂಸ್ಥೆ ಈಗ ವಿಶ್ವದ ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ. ಅದು ವರ್ತಮಾನದ ನೈಜತೆಯನ್ನು ಪ್ರತಿಬಿಂಬಿಸುವುದಿಲ್ಲ. ಅದಕ್ಕಾಗಿಯೇ ವಿಶ್ವಸಂಸ್ಥೆಯಂತಹ ದೊಡ್ಡ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರುವುದು ಅವಶ್ಯಕ" ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.