ಆರ್​ಆರ್​ಆರ್​​ ಚಿತ್ರದ ಖಡಕ್ ವಿಲನ್ ರೇ ಸ್ಟೀವನ್​ಸನ್​ ನಿಧನ: ಆಘಾತಕರ ಸುದ್ದಿ ಎಂದ ರಾಜಮೌಳಿ

ಆಸ್ಕರ್​ ಗೆಲ್ಲುವ ಮೂಲಕ ವಿಶ್ವದಲ್ಲೇ ಖ್ಯಾತಿಗಳಿಸಿದ, ಎಸ್​.ಎಸ್​.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟಿಷ್​ ಗವರ್ನರ್​ ಸ್ಕಾಟ್ ಬಕ್ಸ್ಟನ್ ಪಾತ್ರವನ್ನು ನಿರ್ವಹಿಸಿದ್ದ ರೇ ಸ್ಟೀವನ್​ಸನ್​ (58) ಮೇ 21ರಂದು ನಿಧನರಾಗಿದ್ದಾರೆ.
ರೇ ಸ್ಟೀವನ್​ಸನ್
ರೇ ಸ್ಟೀವನ್​ಸನ್

ಆಸ್ಕರ್​ ಗೆಲ್ಲುವ ಮೂಲಕ ವಿಶ್ವದಲ್ಲೇ ಖ್ಯಾತಿಗಳಿಸಿದ, ಎಸ್​.ಎಸ್​.ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದಲ್ಲಿ ಬ್ರಿಟಿಷ್​ ಗವರ್ನರ್​ ಸ್ಕಾಟ್ ಬಕ್ಸ್ಟನ್ ಪಾತ್ರವನ್ನು ನಿರ್ವಹಿಸಿದ್ದ ರೇ ಸ್ಟೀವನ್​ಸನ್​ (58) ಮೇ 21ರಂದು ನಿಧನರಾಗಿದ್ದಾರೆ.

ಇವರ ಪೂರ್ತಿ ಹೆಸರು ಜಾರ್ಜ್​ ರೇಮಂಡ್​ ಸ್ಟೀವನ್​ಸನ್ ಎಂದಾಗಿದ್ದು, ಉತ್ತರ ಐರಿಶ್​​ ನಟ. ಮೂಲತಃ ಲಂಡನ್​ನ ಲಿಸ್ಬರ್ನ್​​ನವರಾಗಿದ್ದರು. ರೇ ಸ್ಟೀವನ್​ಸನ್​ ನಿಧನ ಹೊಂದಿದ್ದಾರೆಂಬ ಸುದ್ದಿಯನ್ನು ಆರ್​ಆರ್​ ಆರ್​ ಸಿನಿಮಾದ ಸೋಷಿಯಲ್​ ಮೀಡಿಯಾ ಅಕೌಂಟ್​​ನಲ್ಲಿ ದೃಢಪಡಿಸಲಾಗಿದೆ.

ಮೇ 25, 1964 ರಲ್ಲಿ ಉತ್ತರ ಐರ್ಲೆಂಡ್ ನ ಲಿಸ್ಟ್ ಬರ್ನಲ್ಲಿ ಜನಿಸಿದ್ದ ರೇ ಸ್ಟಿವನ್ ಸನ್ 1990 ರಲ್ಲಿ ದೂರದರ್ಶನ ಮೂಲಕ ಮನರಂಜನ ಕ್ಷೇತ್ರ ಪ್ರವೇಶಿಸಿದ್ದರು. 8ನೇ ವಯಸ್ಸಿಗೆ ಅವರು ಇಂಗ್ಲೆಂಡ್​ಗೆ ಶಿಫ್ಟ್ ಆದರು. ಸಣ್ಣ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ತೊಡಗಿಕೊಂಡರು.

90ನೇ ದಶಕದಲ್ಲಿ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. 1998ರಲ್ಲಿ ರಿಲೀಸ್ ಆದ ‘ದಿ ಥಿಯರಿ ಆಫ್​ ಫ್ಲೈಟ್​’ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದಿಂದ ರೇ ಸ್ಟೀವನ್​ಸನ್ ಅವರ ಯಶಸ್ಸು ಹೆಚ್ಚಿತು. ಅವರ ಪಾತ್ರ ಅನೇಕರಿಗೆ ಇಷ್ಟ ಆಯಿತು. ‘ಪನಿಶರ್​: ವಾರ್ ಜೋನ್​’ ಮೊದಲಾದ ಚಿತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.

ಸಿನಿಮಾ ಚಿತ್ರೀಕರಣದ ವೇಳೆಯಲ್ಲಿ ತೆಗೆಯಲಾದ ಫೋಟೋವೊಂದನ್ನು ಶೇರ್ ಮಾಡಿದ ಆರ್​ಆರ್​ಆರ್​ ನಿರ್ದೇಶಕ ಎಸ್.ಎಸ್.ರಾಜಮೌಳಿ ‘ರೇ ಸ್ಟೀವನ್​ಸನ್​ ಅವರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಶಾಕ್​ ಆಗಿದೆ. ನಮ್ಮ ಚಿತ್ರದ ಚಿತ್ರೀಕರಣಕ್ಕೆ ಬರುವಾಗ ರೇ ಅವರು ಯಾವಾಗಲೂ ದೊಡ್ಡದಾದ ಶಕ್ತಿ ಮತ್ತು ಚೈತನ್ಯವನ್ನು ಹೊತ್ತು ತರುತ್ತಿದ್ದರು. ಅದನ್ನವರು ಎಲ್ಲರಿಗೂ ಹಂಚುತ್ತಿದ್ದರು. ಅವರೊಂದಿಗೆ ಕೆಲಸ ಮಾಡುವುದು ಸಿಕ್ಕಾಪಟೆ ಖುಷಿ ತರುತ್ತಿತ್ತು. ರೇ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com