ಅಕ್ರಮವಾಗಿ 328 ಮೂತ್ರಪಿಂಡ ಕಸಿ: ಪಾಕಿಸ್ತಾನದ ವೈದ್ಯ, ಮೆಕ್ಯಾನಿಕ್ ಬಂಧನ!
ಅಕ್ರಮವಾಗಿ ಕನಿಷ್ಠ 328 ಮೂತ್ರಪಿಂಡ ಕಸಿ ಮಾಡಿದ್ದ ವೈದ್ಯ ಮತ್ತು ಮೋಟಾರ್ ಮೆಕ್ಯಾನಿಕ್ ನಡೆಸುತ್ತಿದ್ದ ಅಂಗಾಂಗ ಕಳ್ಳಸಾಗಣೆ ಜಾಲವನ್ನು ಪಾಕಿಸ್ತಾನ ಪೊಲೀಸರು ಭೇದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published: 02nd October 2023 06:19 PM | Last Updated: 02nd October 2023 06:19 PM | A+A A-

ಸಾಂದರ್ಭಿಕ ಚಿತ್ರ
ಲಾಹೋರ್: ಅಕ್ರಮವಾಗಿ ಕನಿಷ್ಠ 328 ಮೂತ್ರಪಿಂಡ ಕಸಿ ಮಾಡಿದ್ದ ವೈದ್ಯ ಮತ್ತು ಮೋಟಾರ್ ಮೆಕ್ಯಾನಿಕ್ ನಡೆಸುತ್ತಿದ್ದ ಅಂಗಾಂಗ ಕಳ್ಳಸಾಗಣೆ ಜಾಲವನ್ನು ಪಾಕಿಸ್ತಾನ ಪೊಲೀಸರು ಭೇದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯ ಫವಾದ್ ಮುಖ್ತಾರ್ ಬಂಧಿತ ಆರೋಪಿ.ದುಷ್ಕೃತ್ಯಕ್ಕಾಗಿ ಈಗಾಗಲೇ ಐದು ಬಾರಿ ಈತನನ್ನು ಬಂಧಿಸಲಾಗಿತ್ತು. ಆಸ್ಪತ್ರೆಗಳಿಂದ ಆಮಿಷವೊಡ್ಡಲ್ಪಟ್ಟ ದುರ್ಬಲ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಹಾಯಕ ಮತ್ತು ಅರಿವಳಿಕೆ ತಜ್ಞನಾಗಿ ಮೆಕ್ಯಾನಿಕ್ ನ್ನು ವೈದ್ಯ ಬಳಸಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಖಾಸಗಿ ಮನೆಗಳಲ್ಲಿ ಕಿಡ್ನಿ ಕಸಿ ನಡೆಸಲಾಗುತಿತ್ತು. ಕೆಲವೊಮ್ಮೆ ರೋಗಿಗೆ ತಿಳಿಯದೆ, ಪ್ರತಿ ಮೂತ್ರಪಿಂಡಗಳನ್ನು 10 ಮಿಲಿಯನ್ ರೂಪಾಯಿಗಳಿಗೆ (35,000 ಡಾಲರ್) ಮಾರಾಟ ಮಾಡಲಾಗಿತ್ತು ಎಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಬಂಧಿತ ಎಂಟು ಜನರ ಗ್ಯಾಂಗ್ ಪೂರ್ವ ಪಂಜಾಬ್ ಪ್ರಾಂತ್ಯದಾದ್ಯಂತ ಹಾಗೂ ಪಾಕಿಸ್ತಾನ-ಆಡಳಿತದ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗಿದ್ದು, ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದಾರೆ. ನಮಗೆ ಬಂದಿರುವ ಮಾಹಿತಿಗಳು ಮತ್ತು ಅಂಕಿ ಅಂಶಗಳು ಹೃದಯವನ್ನು ನಡುಗಿಸುತ್ತದೆ ಎಂದು ನಖ್ವಿ ಭಾನುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದಕ್ಕಿಂತ ಹೆಚ್ಚು ಮೂತ್ರಪಿಂಡ ಕಸಿ ಮತ್ತು ಅಕ್ರಮ ಶಸ್ತ್ರಚಿಕಿತ್ಸೆಗಳಾಗಿವೆ. ಇವುಗಳಲ್ಲಿ ಇದನ್ನು ಮಾತ್ರ ನಾವು ದೃಢಪಡಿಸಿದೇವೆ. ಪಾಕಿಸ್ತಾನ 2010 ರಲ್ಲಿ ಮಾನವ ಅಂಗಗಳ ಮಾರಾಟವನ್ನು ಕಾನೂನುಬಾಹಿರಗೊಳಿಸಿತ್ತು. ಅಲ್ಲದೇ 10 ವರ್ಷಗಳ ಜೈಲು ಶಿಕ್ಷೆಯನ್ನು ಜಾರಿಗೊಳಿಸಿರುವುದಾಗಿ ಅವರು ತಿಳಿಸಿದರು.