ಕೆನಡಾ ವಿವಾದ ಭಾರತದೊಂದಿಗಿನ ವ್ಯಾಪಾರ ಮಾತುಕತೆ ಮೇಲೆ ಪರಿಣಾಮ ಬೀರಲ್ಲ: ಯುಕೆ ಸರ್ಕಾರ ಸ್ಪಷ್ಟನೆ
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಕುರಿತ 'ಗಂಭೀರ ಆರೋಪಗಳು' ಭಾರತದೊಂದಿಗೆ ನಡೆಯುತ್ತಿರುವ ತನ್ನ ದೇಶದ ವ್ಯಾಪಾರ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಮಂಗಳವಾರ ಹೇಳಿದೆ.
Published: 19th September 2023 11:00 PM | Last Updated: 20th September 2023 05:17 PM | A+A A-

ಯುಕೆ ಪ್ರಧಾನಿ ರಿಷಿ ಸುನಕ್, ಪ್ರಧಾನಿ ಮೋದಿ
ಲಂಡನ್: ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಕುರಿತ 'ಗಂಭೀರ ಆರೋಪಗಳು' ಭಾರತದೊಂದಿಗೆ ನಡೆಯುತ್ತಿರುವ ತನ್ನ ದೇಶದ ವ್ಯಾಪಾರ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರ ಮಂಗಳವಾರ ಹೇಳಿದೆ.
ಭಾರತ-ಕೆನಡಾ ರಾಜತಾಂತ್ರಿಕ ಕಲಹವು ಭಾರತ-ಯುಕೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಬೀರಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಿಟನ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ವಕ್ತಾರರು, ಕಳೆದ ವರ್ಷದಿಂದ ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ನಡೆಸುತ್ತಿವೆ. ಅಂದಾಜು ಜಿಬಿಪಿ 36-ಶತಕೋಟಿ ದ್ವಿಪಕ್ಷೀಯ ವ್ಯಾಪಾರ ಪಾಲುದಾರಿಕೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿರುವ ಒಪ್ಪಂದದ ಕಡೆಗೆ 12 ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ. "ವ್ಯಾಪಾರ ಮಾತುಕತೆಗಳ ಕೆಲಸವು ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತವನ್ನು ಪ್ರಚೋದಿಸುವ ಅಥವಾ ಉದ್ವಿಗ್ನತೆ ಹೆಚ್ಚಿಸುವ ಉದ್ದೇಶವಿಲ್ಲ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
ಆರೋಪಗಳನ್ನು ಪರಿಗಣಿಸಿ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವುದು ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ವಕ್ತಾರರು 'ಈ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ಕೆನಡಾದ ಪಾಲುದಾರರು ಮಾಡುತ್ತಿರುವ ಕೆಲಸದಿಂದ ಮುಂದೆ ಹೋಗದಿರುವುದು ಮುಖ್ಯವಾಗಿದೆ. ಭಾರತವು ಈ ಬಗ್ಗೆ ತಮ್ಮದೇ ಆದ ಹೇಳಿಕೆ ನೀಡಿದೆ. ನಾವು ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿರುವ ದೇಶಗಳೊಂದಿಗೆ ಕಳವಳ ಹೊಂದಿದ್ದರೆ ನೇರವಾಗಿ ನಾವು ಅವುಗಳನ್ನು ಪ್ರಶ್ನಿಸುತ್ತೇವೆ. ಈ ವಿಚಾರದಲ್ಲಿ ಕೆನಡಾ ಮತ್ತು ಭಾರತ ನಡುವಿನ ವಿವಾದ ಬೆರೆಸಲು ಯುಕೆ ಎದುರು ನೋಡುವುದಿಲ್ಲ ಎಂದು ವಕ್ತಾರರು ಹೇಳಿಸಿದರು.