''ಬೆದರಿಕೆಯ ಯುಗ ಮುಗಿಯಿತು''; ಯಾವುದೇ ದುಷ್ಟತನ ಎದುರಿಸಲು ಸಿದ್ಧ: ಡೊನಾಲ್ಡ್ ಟ್ರಂಪ್ ಗೆ ಇರಾನ್ ನಾಯಕರ ತಿರುಗೇಟು!

ಕೆಲವು ವಾರಗಳ ಹಿಂದೆ ಇರಾನ್ ನಾಯಕರ ಬಗ್ಗೆ ಮೃದು ನಿಲುವನ್ನು ಕಾಯ್ದುಕೊಂಡಿದ್ದ ಅಧ್ಯಕ್ಷ ಟ್ರಂಪ್, ಸಂಘರ್ಷದ ಮಾತುಗಳನ್ನೇ ಆಡುತ್ತಿದ್ದರು. ಇರಾನ್ ಮೇಲಿನ ಇತ್ತೀಚಿನ ದಾಳಿ ನಂತರ ಕದನ ವಿರಾಮ ಕೊನೆಗೊಂಡಿದೆ ಎಂದು ಹೇಳಿದ್ದರು
Donald Trump
ಡೊನಾಲ್ಡ್ ಟ್ರಂಪ್
Updated on

ಟೆಹ್ರಾನ್: ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಹ್ರಾನ್ ಅನ್ನು "ಕ್ಯಾನ್ಸರ್" ಎಂದು ಕರೆದಿದ್ದಾರೆ.ಇದಕ್ಕೆ ಇರಾನ್ ನಾಯಕರು ತಿರುಗೇಟು ನೀಡಿದ್ದಾರೆ.

ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ವಕ್ತಾರ ಇಬ್ರಾಹಿಂ ರೆಝಾಯಿ, ಇರಾನ್ ಅಮೆರಿಕ ಅಧ್ಯಕ್ಷರ ಬೆದರಿಕೆಗಳಿಂದ ಹೆದರಿಲ್ಲ. ಯಾವುದೇ ದುಷ್ಟತನ"ವನ್ನು ಎದುರಿಸಲು ಸಿದ್ಧವಾಗಿದೆ ಎಂದು ಬುಧವಾರ ಹೇಳಿದ್ದಾರೆ.

ಕೆಲವು ವಾರಗಳ ಹಿಂದೆ ಇರಾನ್ ನಾಯಕರ ಬಗ್ಗೆ ಮೃದು ನಿಲುವನ್ನು ಕಾಯ್ದುಕೊಂಡಿದ್ದ ಅಧ್ಯಕ್ಷ ಟ್ರಂಪ್, ಸಂಘರ್ಷದ ಮಾತುಗಳನ್ನೇ ಆಡುತ್ತಿದ್ದರು. ಇರಾನ್ ಮೇಲಿನ ಇತ್ತೀಚಿನ ದಾಳಿ ನಂತರ ಕದನ ವಿರಾಮ ಕೊನೆಗೊಂಡಿದೆ ಎಂದು ಹೇಳಿದ್ದರು. ಆದರೆ ರಾಜತಾಂತ್ರಿಕ ಮಾತುಕತೆಗಳು ಮುಂದುವರೆಯಬಹುದು ಎಂಬ ಸುಳಿವನ್ನು ನೀಡಿದ್ದರು.

ಇಂದು ಯುಎಸ್ ಸೆಂಟ್ರಲ್ ಕಮಾಂಡ್ 80 ಇರಾನಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡ ನಂತರ ಇರಾನ್ ನಾಯಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕದ 85 ನೆಲೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ. ದಕ್ಷಿಣ ಇರಾನ್ ಮೇಲಿನ ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಬಹ್ರೇನ್‌ನ ಶೇಖ್ ಇಸಾ ವಾಯುನೆಲೆಯಲ್ಲಿ ನೆಲೆಗೊಂಡಿರುವ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಸೇನೆಯೂ ಹೇಳಿಕೊಂಡಿದೆ.

ಒಪ್ಪಂದದ ಹೊರತಾಗಿಯೂ ಇರಾನ್ ಮೇಲಿನ ದಾಳಿಗಳು ಅಮೆರಿಕದ ನಿರಂತರ ಒತ್ತಡ ನೀತಿಯನ್ನು ಪ್ರತಿಬಿಂಬಿಸುತ್ತವೆ. ಅಮೆರಿಕವು 14 ಅಂಶಗಳ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಎಂದು ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಬೆದರಿಕೆ ಮತ್ತು ಸುಲಿಗೆಯ ಯುಗ ಮುಗಿದಿದೆ. ಅದರಿಂದ ಏನೂ ಆಗಲ್ಲ. ಅದಕ್ಕೆ ನಾವು ಮಣಿಯುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.

Donald Trump
ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ 'ಮುಗಿದಿದೆ'; ನೀಚರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ: ಡೊನಾಲ್ಡ್ ಟ್ರಂಪ್

ಹಾರ್ಮುಜ್ ಜಲಸಂಧಿಯಲ್ಲಿನ ನಿಯಮಗಳನ್ನು ನಿರ್ಲಕ್ಷಿಸಿ, ಮಿಲಿಟರಿ ಕ್ರಮ, ಬೆದರಿಕೆ ಹಾಕಿ, ತೈಲ ನಿರ್ಬಂಧಗಳನ್ನು ಮರು ಹೇರಿ, ದಕ್ಷಿಣ ಇರಾನ್ ಮೇಲೆ ದಾಳಿಗಳನ್ನು ಪ್ರಾರಂಭಿಸುವ ಮೂಲಕ ಮತ್ತು ಲೆಬನಾನ್ ಮೇಲೆ ಇಸ್ರೇಲಿ ದಾಳಿಗಳನ್ನು ಮುಂದುವರಿಸಲು ಅವಕಾಶ ನೀಡುವ ಮೂಲಕ ಅಮೆರಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com