ರಷ್ಯಾದಿಂದ ತೈಲ ಖರೀದಿ: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆಗೆ 60 ಯುಎಸ್ ಸೆನೆಟರ್‌ಗಳ ಬೆಂಬಲ!

ಪ್ರಸ್ತಾವಿತ ಕಾಯ್ದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ಐದು ದೊಡ್ಡ ರಾಷ್ಟ್ರಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
PM Modi and Donald Trump
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರCasual Images
Updated on

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುವ ಭಾರತ ಮತ್ತಿತರ ನಾಲ್ಕು ದೇಶಗಳ ಮೇಲೆ ಶೇ. 100 ರಷ್ಟು ಸುಂಕ ವಿಧಿಸುವ ಹೊಸ ಮಸೂದೆಯನ್ನು ಸುಮಾರು 60 ಯುಎಸ್ ಸೆನೆಟರ್‌ಗಳು ಬೆಂಬಲಿಸಿದ್ದಾರೆ. 2026 ರ ರಷ್ಯಾ ನಿರ್ಬಂಧ ಕಾಯ್ದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲವಿದೆ. ಆಗಸ್ಟ್ ಗೂ ಮುನ್ನ ಈ ಕಾಯ್ದೆ ಜಾರಿಯಾಗಬಹುದು ಎನ್ನಲಾಗಿದೆ.

ಪ್ರಸ್ತಾವಿತ ಕಾಯ್ದೆಯು ರಷ್ಯಾದ ತೈಲ ಅಥವಾ ನೈಸರ್ಗಿಕ ಅನಿಲದ ಐದು ದೊಡ್ಡ ರಾಷ್ಟ್ರಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಅಮೆರಿಕದ ಸೆನೆಟ್‌ನಲ್ಲಿ ರಿಪಬ್ಲಿಕನ್ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಸ್ತಾವಿತ ಕಾಯ್ದೆಯು ರಷ್ಯಾದಿಂದ ತೈಲ ಖರೀದಿಸುವ ಚೀನಾ, ಭಾರತ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ರಾಷ್ಟ್ರಗಳನ್ನು ಗುರಿಯಾಗಿಸಿದೆ ಎಂದು ಈ ವಾರದ ಆರಂಭದಲ್ಲಿ ಯುಎಸ್ ಸೆನೆಟರ್‌ಗಳು ಸ್ಪಷ್ಟಪಡಿಸಿದ್ದರು.

PM Modi and Donald Trump
ಭಾರತ, ಚೀನಾಗೆ ನಿರಾಳ: ರಷ್ಯಾ ತೈಲ ಆಮದು ಸುಂಕ ಶೇ.100ಕ್ಕೆ ಇಳಿಸಿದ ಅಮೆರಿಕ!

ನಿಖರವಾದ ಸುಂಕ ದರವನ್ನು US ವ್ಯಾಪಾರ ಪ್ರತಿನಿಧಿಗಳು (USTR) ನಿರ್ಧರಿಸುತ್ತಾರೆ.ರಷ್ಯಾದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸುವ ಯುರೋಪಿಯನ್ ಮಿತ್ರರಾಷ್ಟ್ರಗಳಿಗೆ ವಿನಾಯಿತಿಗಳನ್ನು ಸಹ ಮಸೂದೆ ಒಳಗೊಂಡಿದೆ.

ಈ ಕ್ರಮವನ್ನು ಬೆಂಬಲಿಸುವ ಸೆನೆಟರ್‌ಗಳು ಹೇಳಿಕೆ ಬಿಡುಗಡೆ ಮಾಡಿದ್ದು,"ರಷ್ಯಾದ ಒಟ್ಟು ನೈಸರ್ಗಿಕ ಅನಿಲ ರಫ್ತಿನಲ್ಲಿ ಶೇಕಡಾ 15 ಕ್ಕಿಂತ ಕಡಿಮೆ ಇರುವ ರಷ್ಯಾದ ನೈಸರ್ಗಿಕ ಅನಿಲ ಆಮದು ಹೊಂದಿರುವ ದೇಶಗಳು ಮತ್ತು ಆ ಆಮದುಗಳನ್ನು ಕಡಿಮೆ ಮಾಡಲು ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ದೇಶಗಳಿಗೆ ಮಸೂದೆ ವಿನಾಯಿತಿ ನೀಡುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com