ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮತ್ತೆ ಉದ್ವಿಗ್ನತೆ; ಪ್ರಯಾಣದ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟ ಅಮೆರಿಕ!

ಯುಎಸ್ ರಾಯಭಾರ ಕಚೇರಿ ಅಥವಾ ದೂತಾವಾಸವು ಹೊರಡಿಸಿದ ಭದ್ರತಾ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಇಲಾಖೆ ಒತ್ತಾಯಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಹೆಚ್ಚಿದ ಉದ್ವಿಗ್ನತೆ ಮತ್ತು ಈ ಪ್ರದೇಶದಲ್ಲಿ ಅಮೆರಿಕ- ಇರಾನಿನ ಎರಡೂ ಕಡೆಯಿಂದ ಮಿಲಿಟರಿ ಕಾರ್ಯಾಚರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣದ ಮುನ್ನೆಚ್ಚರಿಕೆ ವಹಿಸುವಂತೆ ಅಮೆರಿಕ, ವಿಶ್ವದಾದ್ಯಂತ ಇರುವ ತನ್ನ ನಾಗರಿಕರಿಗೆ ಸಲಹೆ ನೀಡಿದೆ.

ಈ ಸಂಬಂಧ ಅಮೆರಿಕದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಪಂಚದಾದ್ಯಂತದ ಅಮೆರಿಕನ್ನರಿಗೆ, ವಿಶೇಷವಾಗಿ ಪಶ್ಚಿಮ ಏಷ್ಯಾದಲ್ಲಿರುವವರಿಗೆ ಹೆಚ್ಚಿನ ಎಚ್ಚರಿಕೆ ವಹಿಸಲು ಮತ್ತು ಹೆಚ್ಚಾಗುತ್ತಿರುವ ಸಂಕೀರ್ಣ ಭದ್ರತಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತೆ ಸಲಹೆ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆಯಿಂದಾಗಿ ಭದ್ರತಾ ವಾತವಾರಣ ಸಂಕೀರ್ಣವಾಗಿದೆ ಎಂದು ಸಲಹೆ ನೀಡಲಾಗಿದೆ.

ಈ ಪ್ರದೇಶದಲ್ಲಿನ ಅಮೆರಿಕ ನಾಗರಿಕರು ಹಠಾತ್ ಬೆಳವಣಿಗೆಗಳ ಕುರಿತು ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಹತ್ತಿರದ ಯುಎಸ್ ರಾಯಭಾರ ಕಚೇರಿ ಅಥವಾ ದೂತಾವಾಸವು ಹೊರಡಿಸಿದ ಭದ್ರತಾ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಇಲಾಖೆ ಒತ್ತಾಯಿಸಿದೆ.

ವಿಮಾನ ರದ್ದತಿ ಮತ್ತು ವಾಯು ಪ್ರದೇಶ ಬಂದ್ ಪ್ರಯಾಣಕ್ಕೆ ಅಡ್ಡಿಯಾಗಬಹುದು. ಏಕೆಂದರೆ ಪ್ರಾದೇಶಿಕ ಉದ್ವಿಗ್ನತೆಗಳು ವಾಯುಯಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿವೆ.

ಇದಲ್ಲದೆ, ಇರಾನ್ ಅನ್ನು ಬೆಂಬಲಿಸುವ ಗುಂಪುಗಳು ವಿದೇಶಗಳಲ್ಲಿ ಅಮೆರಿಕದ ಹಿತಾಸಕ್ತಿಗಳನ್ನು ಗುರಿಯಾಗಿಸಬಹುದು ಎಂದು ಎಚ್ಚರಿಸಿದೆ.

Casual Images
ಸೈನಿಕರ ಸಾವಿಗೆ ಅಮೆರಿಕಾ ಪ್ರತೀಕಾರ: Swiftly punish ಹೆಸರಿನಲ್ಲಿ ಇರಾನ್ ಮೇಲೆ ಭಾರೀ ವೈಮಾನಿಕ ದಾಳಿ!

ಕಳೆದ ತಿಂಗಳು ಸಹಿ ಹಾಕಲಾದ 14 ಅಂಶಗಳ ಒಪ್ಪಂದ ವಿಫಲದ ನಂತರ ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನತೆ ಹೆಚ್ಚಳ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com