Idaho Air Show: ವಾಯುಪಡೆ ಸಾಹಸ ಪ್ರದರ್ಶನ ವೇಳೆ ಆಗಸದಲ್ಲೇ ಫೈಟರ್‌ ಜೆಟ್‌ಗಳ ನಡುವೆ ಡಿಕ್ಕಿ; ವೀಡಿಯೋ ವೈರಲ್..!

ಇಡಾಹೊದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ ಬಳಿ ನಡೆದ ವಾಯು ಪ್ರದರ್ಶನದ ಸಂದರ್ಭದಲ್ಲಿ ಎರಡು ಮಿಲಿಟರಿ ಜೆಟ್‌ಗಳು ಆಕಾಶದಲ್ಲಿ ಡಿಕ್ಕಿ ಹೊಡೆದಿವೆ.
fighter jets collided mid-air during an air show in Idaho.
ಫೈಟರ್‌ಜೆಟ್‌ಗಳ ನಡುವೆ ಡಿಕ್ಕಿ ಸಂಭವಿಸಿರುವುದು.
Updated on

ಅಮೆರಿಕಾದ ಇಡಾಹೊದಲ್ಲಿ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್‌ನಲ್ಲಿ ಭಾನುವಾರ ನಡೆದ ವಾಯು ಪ್ರದರ್ಶನದ ವೇಳೆ ಅಮೆರಿಕಾದ ಎರಡು ಫೈಟರ್ ಜೆಟ್‌ಗಳು ಮಧ್ಯಾಕಾಶದಲ್ಲೇ ಡಿಕ್ಕಿ ಹೊಡೆದಿದ್ದು, ಘಟನೆ ಬೆನ್ನಲ್ಲೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಪಘಾತಕ್ಕೀಡಾಗಿರುವ ಈ ಎರಡು ಯುದ್ಧ ವಿಮಾನಗಳು ಏರೋಬ್ಯಾಟಿಕ್ ಕುಶಲತೆಯನ್ನು ನಿರ್ವಹಿಸುತ್ತಿದ್ದಾಗ, ಸಮತೋಲನ ಕಳೆದುಕೊಂಡು ಅಥವಾ ಸಮನ್ವಯದ ಕೊರತೆಯಿಂದಾಗಿ, ಡಿಕ್ಕಿ ಹೊಡೆದು ಬೆಂಕಿಯ ಚೆಂಡಿನಂತೆ ಛಿದ್ರಛಿದ್ರವಾಗಿ ನೆಲಕ್ಕಪ್ಪಳಿಸಿದೆ. ಈ ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಭಾನುವಾರ (ಮೇ 17) ಇಡಾಹೊದ ಮೌಂಟೇನ್ ಹೋಮ್ ಏರ್ ಫೋರ್ಸ್ ಬೇಸ್ ಬಳಿ ನಡೆದ ವಾಯು ಪ್ರದರ್ಶನದ ಸಂದರ್ಭದಲ್ಲಿ ಎರಡು ಮಿಲಿಟರಿ ಜೆಟ್‌ಗಳು ಆಕಾಶದಲ್ಲಿ ಡಿಕ್ಕಿ ಹೊಡೆದವು ಎಂದು ಅಮೆರಿಕಾ ನೌಕಾಪಡೆ ತಿಳಿಸಿದೆ.

ವೈಮಾನಿಕ ಪ್ರದರ್ಶನದ ವೇಳೆ, ಇದ್ದಕ್ಕಿದ್ದಂತೆ ಮಧ್ಯ ಆಗಸದಲ್ಲಿ EA-18G ಎಂಬ 2 ಫೈಟರ್‌ ಜೆಟ್‌ಗಳ ನಡುವೆ ಡಿಕ್ಕಿಯಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ ಇದರಿಂದಾಗಿ ವಿಮಾನಗಳು ನಿಯಂತ್ರಣವನ್ನು ಕಳೆದುಕೊಂಡಿದ್ದು, ನೆಲಕ್ಕೆ ಪತನವಾಗಿದೆ.

ಆದಾಗ್ಯೂ, ತಕ್ಷಣವೇ ಎಚ್ಚೆತ್ತ 2 ವಿಮಾನಗಳಲ್ಲಿದ್ದ 4 ಮಂದಿ ಪೈಲಟ್‌ಗಳು ಪ್ಯಾರಾಶೂಟ್‌ಗಳ ಮೂಲಕ ಸುರಕ್ಷಿತವಾಗಿ ಅಪಘಾತದಿಂದ ಪಾರಾಗಿದ್ದಾರೆ.

ನಾಲ್ವರೂ ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಯಾವುದೇ ಪ್ರೇಕ್ಷಕರು ಅಥವಾ ಮಿಲಿಟರಿ ಸಿಬ್ಬಂದಿ ಗಾಯಗೊಂಡಿಲ್ಲ ಎಂದೂ ಮಾಹಿತಿ ನೀಡಿದ್ದಾರೆ.

ಇನ್ನು, ಸುಮಾರು 8 ವರ್ಷಗಳ ಬಳಿಕ ಮೊದಲ ಬಾರಿಗೆ ಈ ವಾರಾಂತ್ಯದಲ್ಲಿ ಗನ್‌ಫೈಟರ್ ಸ್ಕೈಸ್ ಏರ್ ಶೋ ನಡೆಸಲಾಗಿದ್ದು, ಮಿಲಿಟರಿ ವಿಮಾನ ಪ್ರದರ್ಶನಗಳು ಮತ್ತು ವೈಮಾನಿಕ ಪ್ರದರ್ಶನಗಳನ್ನು ವೀಕ್ಷಿಸಲು ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಏರ್ ಶೋ ಆಯೋಜಕರು ಈ ಕಾರ್ಯಕ್ರಮಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ತಯಾರಿ ನಡೆಸಿದ್ದು, ಸುರಕ್ಷತಾ ತಂಡಗಳು ಮತ್ತು ನಿರ್ವಹಣಾ ಸಿಬ್ಬಂದಿಗಳು ಬೇಸ್‌ನಾದ್ಯಂತ ಬೀಡುಬಿಟ್ಟಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಆದರೆ, ಈ ಏರ್‌ ಶೋ ವೇಳೆ ಇಂತಹ ಅಪಘಾತ ಸಂಭವಿಸಿರುವುದು ಯುದ್ಧ ವಿಮಾನಗಳ ಸುರಕ್ಷತೆಯ ಕುರಿತು ಕಳವಳ ವ್ಯಕ್ತವಾಗುವಂತೆ ಮಾಡಿದೆ.

fighter jets collided mid-air during an air show in Idaho.
ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com