Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Nitin Gadkari

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ! ನೆರೆರಾಷ್ಟ್ರಕ್ಕೆ ಹರಿವ ನೀರನ್ನು ಯಮುನೆಯತ್ತ ತಿರುಗಿಸುತ್ತೇವೆ ಎಂದ ಗಡ್ಕರಿ

Mulayam Singh Yadav, Akhilesh, Mayavati (File pic)

ಬಿಎಸ್ ಪಿ-ಎಸ್ ಪಿ ಮೈತ್ರಿಗೆ ಮುಲಾಯಂ ಕಿಡಿ: ರಹಸ್ಯ ಪತ್ರ ಕಳಿಸಲು ಟಿಕೆಟ್ ಆಕಾಂಕ್ಷಿಗಳಿಗೆ ಕರೆ

Pak gifts gold-plated assault rifle to Saudi Crown Prince

ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್

Chris Gayle breaks record for maximum sixes in international cricket

ವೆಸ್ಟ್​ ಇಂಡೀಸ್​ ತಂಡದ ದೈತ್ಯ ದಾಂಡಿಗ ಕ್ರಿಸ್​ ಗೇಲ್​ ನಿಂದ ಒಂದೇ ಪಂದ್ಯದಲ್ಲಿ ಹಲವು ದಾಖಲೆ!

Navjot Singh Sidhu

ಪಾಕ್ ಪರ ಹೇಳಿಕೆ: ನವಜೋತ್ ಸಿಂಗ್ ಸಿಧುಗೆ ಮತ್ತೊಂದು ಹೊಡೆತ!

Government increases provident fund interest rate

ನೌಕರವರ್ಗಕ್ಕೆ ಸಿಹಿಸುದ್ದಿ ಕೊಟ್ಟ ಕೇಂದ್ರ: ಇಪಿಎಫ್ ಬಡ್ಡಿ ದರದಲ್ಲಿ ಹೆಚ್ಚಳ

MLA Kampli Ganesh sent to judicial custody in brutal assault case

ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ: ಶಾಸಕ ಕಂಪ್ಲಿ ಗಣೇಶ್ ಗೆ 14 ದಿನ ನ್ಯಾಯಾಂಗ ಬಂಧನ

KSRTC to provide free travel for exam going PUC students

ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ

Pulwama effect: CRPF, other forces can now take commercial flights to Kashmir Valley, says Centre

ಪುಲ್ವಾಮ ದಾಳಿಯ ಎಫೆಕ್ಟ್: ಸೈನಿಕರಿಗೆ ವಾಣಿಜ್ಯ ವಿಮಾನಗಳಲ್ಲಿ ಸಂಚರಿಸಲು ಅನುಮತಿ

Indian economy fundamentals sound, set to reach $5 trillion: PM Modi

ಭಾರತದ ಆರ್ಥಿಕತೆ ಸದೃಢ, ಶೀಘ್ರವೇ 5 ಟ್ರಿಲಿಯನ್ ಡಾಲರ್ ಗೆ ಏರಿಕೆ: ದಕ್ಷಿಣ ಕೊರಿಯಾದಲ್ಲಿ ಪ್ರಧಾನಿ ಮೋದಿ

Dowry harassment complaints lodged against Agnisakshi serial actor Rajesh Dhruva

ಪತ್ನಿಗೆ ವರದಕ್ಷಿಣೆ ಕಿರುಕುಳ: 'ಅಗ್ನಿಸಾಕ್ಷಿ' ಅಖಿಲ್ ವಿರುದ್ಧ ದೂರು ದಾಖಲು!

Chambal

ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ಹೈಕೋರ್ಟ್ ಸಮ್ಮತಿ

Ravichandran

ಮಗಳ ಮದುವೆ ಸಂಭ್ರಮಕ್ಕೆ ಅಣಿಯಾದ ಕ್ರೇಜಿಸ್ಟಾರ್ ರವಿಚಂದ್ರನ್

ಮುಖಪುಟ >> ಅಂತಾರಾಷ್ಟ್ರೀಯ

ಕಾಬುಲ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಭೀಕರ ಅವಳಿ ಬಾಂಬ್ ದಾಳಿ, ಪತ್ರಕರ್ತರೂ ಸೇರಿದಂತೆ 22 ಸಾವು

ಮೊದಲು ಬಾಂಬ್ ಸ್ಫೋಟಿಸಿಕೊಂಡ ಆತ್ಮಾಹುತಿ ದಾಳಿಕೋರ, ಸ್ಫೋಟದ ಪ್ರದೇಶಕ್ಕೆ ಜನ ದೌಡಾಯಿಸುತ್ತಿದ್ದಂತೆಯೇ ಕಾರ್ ಬಾಂಬ್ ಸ್ಫೋಟ
Afghanistan Journalists among at least 22 killed in twin blasts in Shiite area of Kabul

ಕಾಬುಲ್ ಬಾಂಬ್ ಸ್ಫೋಟ

ಕಾಬುಲ್​: ಆಫ್ಘಾನಿಸ್ತಾನದ ರಾಜಧಾನಿ ಕಾಬುಲ್ ನ ಸ್ಪೋರ್ಟ್ಸ್‌ ಕ್ಲಬ್ ನಲ್ಲಿ ಭೀಕರ ಸಂಭವಿಸಿರುವ ಅವಳಿ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿ, 80ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಕಾಬುಲ್ ನ ದಾತ್-ಇ-ಬರ್ಚಿ ಪ್ರದೇಶದಲ್ಲಿರುವ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲೂ ಉಗ್ರರು ತಮ್ಮ ಮಾನಸಿಕ ಅಸ್ವಸ್ಥತೆಯನ್ನು ಪ್ರದರ್ಶಿಸಿದ್ದಾರೆ. ಮೊದಲು ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ಈ ವೇಳೆ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಸುತ್ತಮುತ್ತಲಿದ್ದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲೇ ಕಾರಿನಲ್ಲಿ ಇಡಲಾಗಿದ್ದ ಮತ್ತೊಂದು ಬಾಂಬ್ ಅನ್ನು ಸ್ಫೋಟಿಸಲಾಗಿದೆ. 

ಹೀಗಾಗಿ ಬಾಂಬ್ ಸ್ಫೋಟದ ತೀವ್ರ ಹೆಚ್ಚಾಗಿದ್ದು, ಘಟನೆಯಲ್ಲಿ ಅಪಾರ ಸಾವು-ನೋವುಗಳಾಗಿವೆ. ಈ ವರೆಗೂ ಯಾವುದೇ ಉಗ್ರ ಸಂಘಟನೆಗಳೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಈ  ಬಗ್ಗೆ ಮಾಹಿತಿ ನೀಡಿರುವ ಆಫ್ಘಾನಿಸ್ತಾನ ಆಂತರಿಕ ಇಲಾಖೆಯ ವಕ್ತಾರ ನಜೀಬ್‌ ಡ್ಯಾನಿಷ್‌ ಅವರು, 'ಮೊದಲ ಬಾರಿಗೆ ಆತ್ಮಾಹುತಿ ಬಾಂಬರ್ ನಿಂದ ಸ್ಫೋಟ ಸಂಭವಿಸಿದ್ದು, ಸ್ವಲ್ಪ ಸಮಯದ ನಂತರ ಕಾರ್‌ ಬಾಂಬ್‌ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ. ಅಂತೆಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಯಲ್ಲಿ ಮಾಧ್ಯಮ ಸಂಸ್ಥೆಯೊಂದರ ಕ್ಯಾಮರಾಮನ್‌ ಮತ್ತು ರಿಪೋರ್ಟರ್‌ ಮೃತಪಟ್ಟಿದ್ದು, ಸ್ಥಳೀಯ ಮಾಧ್ಯಮವೊಂದರ ನಾಲ್ಕು ಜನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟವರಿಗೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ಸಂತಾಪ ಸೂಚಿಸಿದ್ದು, ನಾಗರಿಕರು, ಮಾಧ್ಯಮ ಮಂದಿಯನ್ನು ದೇಶದಲ್ಲಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.
Posted by: SVN | Source: AFP

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Kabul, Afghanistan, Journalists Killed, Suicide Attack, ಕಾಬುಲ್, ಆಫ್ಘಾನಿಸ್ತಾನ, ಪತ್ರಕರ್ತರ ಸಾವು, ಆತ್ಮಾಹುತಿ ದಾಳಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS