Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
4 Soldiers Killed In Overnight Encounter In Pulwama: Sources

ಪುಲ್ವಾಮದಲ್ಲಿ ಮತ್ತೆ ಉಗ್ರರ ಅಟ್ಟಹಾಸ, ರಾತ್ರೋರಾತ್ರಿ 4 ಸೈನಿಕರು ಹುತಾತ್ಮ

Amid Indo-Pak tension, ICJ to hold public hearings in Kulbhushan Jadhav case from today

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇಂದಿನಿಂದ ಕುಲಭೂಷಣ್ ಜಾದವ್ ಪ್ರಕರಣದ ವಿಚಾರಣೆ

AnanthKumar Hegde

ಮುಸ್ಲಿಮರ ಬಗ್ಗೆ ಮಾತನಾಡಿದರೆ ಜೀವ ತೆಗೆಯುತ್ತೇವೆ: ಕೇಂದ್ರ ಸಚಿವ ಹೆಗಡೆಗೆ ಜೀವ ಬೆದರಿಕೆ ಕರೆ

Kamal hassan and M.k Stalin

ನಾನು ಹರಿದ ಅಂಗಿ ಧರಿಸಿ ನೌಟಂಕಿ ರಾಜಕಾರಣ ಮಾಡುವುದಿಲ್ಲ: ಸ್ಟಾಲಿನ್ ಗೆ ಕಮಲ್ ಹಾಸನ್ ಟಾಂಗ್

Assam CM Sarbananda Sonowal likens Pulwama incident to

ಭಾರತದ ಮೇಲೆ ಮೊಘಲರ ದಾಳಿ ಇನ್ನೂ ನಿಂತಿಲ್ಲ, ಪುಲ್ವಾಮ ದಾಳಿ ಇದಕ್ಕೊಂದು ಉದಾಹರಣೆ: ಅಸ್ಸಾಂ ಸಿಎಂ

Fact Check: Not CCTV clip of Pulwama Terror Attack, old footage from Iraq being pushed on social media

'ಫೇಕ್ ನ್ಯೂಸ್' ಅಬ್ಬರ: ಪುಲ್ವಾಮ ದಾಳಿ ವಿಡಿಯೋ ಅಲ್ಲ, ಇರಾನ್ ನ ವಿಡಿಯೋ!

M.B patil

'ಭಗವಾನ್, ಪ್ರತಾಪ್ ಸಿಂಹ ಅನಂತ್ ಕುಮಾರ್ ಹೆಗಡೆ' ನಿಮ್ಮ ನಾಲಗೆ ನಿಯಂತ್ರಣದಲ್ಲಿರಲಿ: ಪಾಟೀಲ್ ವಾರ್ನಿಂಗ್

Won

ಅಸ್ಸಾಂ ಮತ್ತೊಂದು ಕಾಶ್ಮೀರವಾಗಲು ಬಿಡುವುದಿಲ್ಲ: ಅಮಿತ್ ಶಾ

Siddaramiah

ಕುಮಾರಸ್ವಾಮಿಯನ್ನು ಸಿಲುಕಿಸಲು ಎಸ್‌ಐಟಿ ತನಿಖೆಗೆ ಸಿದ್ದರಾಮಯ್ಯ ಒತ್ತಾಯ: ಬಿಜೆಪಿ ಆರೋಪಕ್ಕೆ 'ಸಿದ್ದು' ತಿರುಗೇಟು

ChrisGayle

ವಿಶ್ವಕಪ್ ನಂತರ ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರೀಸ್ ಗೇಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ!

Casual Photo

ಪ್ರೇಮಿಗಳ ದಿನ ಬ್ಯಾಗ್ ನಲ್ಲಿದ್ದ ಪ್ರೇಮಪತ್ರ ಶಿಕ್ಷಕರ ಕೈಗೆ ಸಿಕ್ಕಿದ್ದರಿಂದ ವಿದ್ಯಾರ್ಥಿ ಆತ್ಮಹತ್ಯೆ

Jobless growth, rural indebtedness, urban chaos have made aspirational youth restless: Manmohan Singh

ನಿರುದ್ಯೋಗ ಹೆಚ್ಚಳ ಆಶಾವಾದಿ ಯುವಕರನ್ನು ಪ್ರಕ್ಷುಬ್ಧಗೊಳಿಸಿದೆ: ಮನಮೋಹನ್ ಸಿಂಗ್

separatist

ಕಾಶ್ಮೀರಿ ಪ್ರತ್ಯೇಕತಾವಾದಿಗಳ ಭದ್ರತೆ ಹಿಂಪಡೆದ ಕೇಂದ್ರ ಸರ್ಕಾರ

ಮುಖಪುಟ >> ಅಂತಾರಾಷ್ಟ್ರೀಯ

ಕ್ಷಮೆ ಕೇಳುವಂತೆ ಚೀನಾ ಜುಟ್ಟು ಹಿಡಿದು ನಿಂತಿದೆ ಕೇವಲ 12 ಸಾವಿರ ಜನಸಂಖ್ಯೆಯುಳ್ಳ ಈ ದ್ವೀಪ ರಾಷ್ಟ್ರ!

An island country of 12,000 stands up to China, demands apology for envoy

ಕ್ಷಮೆ ಕೇಳುವಂತೆ ಚೀನಾ ಜುಟ್ಟು ಹಿಡಿದು ನಿಂತಿದೆ ಕೇವಲ 12 ಸಾವಿರ ಜನಸಂಖ್ಯೆಯುಳ್ಳ ಈ ದ್ವೀಪ ರಾಷ್ಟ್ರ!

"ಚೀನಾ ದೊಡ್ಡ ರಾಷ್ಟ್ರ ಅಂತೇನು ನಾವು ಕೇರ್ ಮಾಡೋದಿಲ್ಲ. ಅದು ನಮ್ಮ ಪಾಲುದಾರ ರಾಷ್ಟ್ರವಷ್ಟೇ, ಹೀಗೆಯೇ ಮಾಡಬೇಕು ಅಂತ ಡಿಕ್ಟೇಟ್ ಮಾಡಿ, ನಮಗೆ ಅಗೌರವ ತೋರಿಸುವಂತಿಲ್ಲ. ವಿಶ್ವಸಂಸ್ಥೆಯಲ್ಲಿ ಚೀನಾಗೆ ತಕ್ಕ ಪಾಠ ಕಲಿಸುತ್ತೇವೆ..." ದಕ್ಷಿಣ ಏಷ್ಯಾದ ಅತಿ ಪವರ್ಫುಲ್ ಎಂದು ಬೀಗುತ್ತಿದ್ದ ರಾಷ್ಟ್ರಕ್ಕೆ 12 ಸಾವಿರ ಜನಸಂಖ್ಯೆಯುಳ್ಳ ನೌರು ದ್ವೀಪ ರಾಷ್ಟ್ರದ ಅಧ್ಯಕ್ಷರು ನೀರಿಳಿಸಿದ ಪರಿ ಇದು. 

ಹೋದಲ್ಲೆಲ್ಲಾ ಹಸ್ತಕ್ಷೇಪ ಮಾಡಿ, ತನ್ನದೇ ನಡೆಯಬೇಕೆಂಬ ದುರಹಂಕಾರದ ವರ್ತನೆ ತೋರುವ ಚಾಳಿ ಹೊಂದಿರುವ ಚೀನಾ, ಮೊನ್ನೆ ನಡೆದ ಪೆಸಿಫಿಕ್ ಐಲ್ಯಾಂಡ್ಸ್ ಫೋರಂ ನಲ್ಲೂ ತನ್ನ ಎಂದಿನ ವರ್ತನೆಯನ್ನು ಜಗಜ್ಜಾಹೀರು ಮಾಡಿತ್ತು. 

ಕೇವಲ 12,000 ನಿವಾಸಿಗಳನ್ನು ಹೊಂದಿರುವ ನೌರು ದ್ವೀಪ ರಾಷ್ಟ್ರ 18 ಪೆಸಿಫಿಕ್ ರಾಷ್ಟ್ರಗಳ ನಾಯಕರು ಹಾಗೂ ಅಮೆರಿಕ, ಚೀನಾ ಸೇರಿದಂತೆ ಸದಸ್ಯರಾಗಿರದೇ ಇರುವ ಕೆಲವು ಪ್ರಮುಖ ರಾಷ್ಟ್ರಗಳ ಪ್ರತಿನಿಧಿಗಳನ್ನು ಪೆಸಿಫಿಕ್ ಐಲ್ಯಾಂಡ್ ಫೋರಂ ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು.

ಚೀನಾ ಕಬಳಿಸಲು ಯತ್ನಿಸುತ್ತಿರುವ ತೈವಾನ್ ನೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ 6 ಪೆಸಿಫಿಕ್ ರಾಷ್ಟ್ರಗಳ ಪೈಕಿ ನೌರು ಹಾಗೂ ಟುವಾಲು ಪ್ರಮುಖ ರಾಷ್ಟ್ರಗಳು. ಸಹಜವಾಗಿಯೇ ಚೀನಾ ಕಾರ್ಯಕ್ರಮದಲ್ಲಿ ಪ್ರಾಬಲ್ಯ ತೋರ್ಪಡಿಸುವ ಉದ್ದೇಶದಿಂದ ಟುವಾಲು ಪ್ರಧಾನಿಗಿಂತ ಮೊದಲು ನಮ್ಮ ರಾಜತಾಂತ್ರಿಕ ಅಧಿಕಾರಿ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಬೇಕು ಪಟ್ಟು ಹಿಡಿದು ಕಿರಿಕಿರಿಯಾಗುವಂತೆ ನಡೆದುಕೊಂಡಿದೆ.  

ಚೀನಾ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನೌರು ದ್ವೀಪ ರಾಷ್ಟ್ರದ ಅಧ್ಯಕ್ಷ ಬ್ಯಾರನ್ ವಕಾ, ಠಚೀನಾದ ರಾಯಭಾರಿ ಅಧಿಕಾರಿ ನಿಯಮಗಳನ್ನು ಮೀರಿ, ಸರದಿಗೂ ಮುನ್ನ ಮಾತನಾಡುವ ಮೂಲಕ ಫೋರಂ ಗೆ ಅವಮಾನವಾಗುವಂತೆ, ಪುಂಡ ವರ್ತನೆ ತೋರಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೀನಾದ ರಾಯಭಾರಿ ಅಧಿಕಾರಿಗಳ ವರ್ತನೆ ಬಗ್ಗೆ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿರುವ ನೌರುವಿನ ಅಧ್ಯಕ್ಷರಿಗೆ ಕ್ಷಮೆ ಕೇಳಲು ಚೀನಾವನ್ನು ಆಗ್ರಹಿಸುತ್ತೀರಾ? ಎಂಬ ಪ್ರಶ್ನೆ ಎದುರಾಗಿದೆ. "ಚೀನಾದ ರಾಯಭಾರಿ ನಡೆದುಕೊಂಡ ರೀತಿಗೆ ಮುಲಾಜಿಲ್ಲದೇ ಚೀನಾದಿಂದ ಕ್ಷಮೆ ಕೇಳಿಸುತ್ತೇವೆ, ಅದನ್ನು ಫೋರಂ ನೋಡಿಕೊಳ್ಳುತ್ತದೆ. ಅಲ್ಲಿಗೇ ನಿಲ್ಲಿಸದೇ ನಾವು ಚೀನಾದ ದುರ್ವರ್ತನೆಗೆ  ವಿಶ್ವಸಂಸ್ಥೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ" ಎಂದು ಗುಡುಗಿದ್ದಾರೆ. 

ನಿಯಮಗಳ ಪ್ರಕಾರ ರಾಜತಾಂತ್ರಿಕ ಅಧಿಕಾರಿಗಳಿಗಿಂತ ಮೊದಲು ಸದಸ್ಯ ರಾಷ್ಟ್ರಗಳ ಪ್ರಧಾನಿಗಳು ಹಾಗೂ ಸಚಿವರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ನಮಗೆ ಯಾರೂ ಆದೇಶ ನೀಡುವ ಅವಶ್ಯಕತೆ ಇಲ್ಲ. ಆದರೆ ಚೀನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಫೋರಂ ಗೆ ಅವಮಾನ ಮಾಡಿದೆ. "ಚೀನಾ ದೊಡ್ಡ ರಾಷ್ಟ್ರ ಅಂತೇನು ನಾವು ಕೇರ್ ಮಾಡೋದಿಲ್ಲ. ಅದು ನಮ್ಮ ಪಾಲುದಾರ ರಾಷ್ಟ್ರವಷ್ಟೇ, ಹೀಗೆಯೇ ಮಾಡಬೇಕು ಅಂತ ಡಿಕ್ಟೇಟ್ ಮಾಡಿ, ನಮಗೆ ಅಗೌರವ ತೋರಿಸುವಂತಿಲ್ಲ, ಚೀನಾಗೆ ವಿಶ್ವಸಂಸ್ಥೆಯಲ್ಲಿ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆ.
 
ಇನ್ನು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಪತ್ರಿಕೆ ತನ್ನ ದೇಶದ ರಾಯಭಾರಿ ಅಧಿಕಾರಿಯ ವರ್ತನೆಯನ್ನು ಬಿಟ್ಟು ನೌರು ಹಾಗೂ ತೈವಾನ್ ನಡುವಿನ ರಾಜತಾಂಟ್ರಿಕ ಸಂಬಂಧದ ಬಗ್ಗೆ ಸಂಪಾದಕೀಯ ಪ್ರಕಟಿಸಿದ್ದು, ನೌರುವಿನ ನಡೆಯಿಂದಾಗಿ ಇನ್ನೂ ತನ್ನ ರಾಜತಾಂತ್ರಿಕತೆಗೆ ಅವಕಾಶವಿದೆ ಎಂದು ತೈವಾನ್ ನಂಬಬಾರದು, ಎಲ್ಲೋ ದೂರದಲ್ಲಿರುವ ಪೆಸಿಫಿಕ್ ದ್ವೀಪರಾಷ್ಟ್ರ ತೈವಾನ್ ನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದು ಅಸಂಬದ್ಧ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ. ಈ ಘಟನೆ ಬಗ್ಗೆ ಈ ವರೆಗೆ ಚೀನಾ ವಿದೇಶಾಂಗ ಸಚಿವಾಲಯವಾಗಲೀ ತೈವಾನ್ ನ ವಿದೇಶಾಂಗ ಸಚಿವಾಲಯವಾಗಲೀ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : China, Taiwan, Nauru, Pacific Islands Forum, ಚೀನಾ, ತೈವಾನ್, ನೌರು ದ್ವೀಪ ರಾಷ್ಟ್ರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS