ಕಿಂಗ್ ಫಿಶರ್ ನಷ್ಟದ ಕುರಿತು ಐಡಿಬಿಐ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿತ್ತು: ಮಲ್ಯ ವಕೀಲ

Published: 12 Sep 2018 06:27 PM IST
ವಿಜಯ್ ಮಲ್ಯ
ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದಲ್ಲಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ಋಣಭಾರದದಿಂದ ನಷ್ಟದಲ್ಲಿದೆ ಎನ್ನುವುದನ್ನು ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಚೆನ್ನಾಗಿ ತಿಳಿದಿದ್ದರು ಎಂದು ಮಲ್ಯ ಪರ ವಕೀಲರು ಹೇಳಿದ್ದಾರೆ.

"ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆ ನಷ್ಟದಲ್ಲಿದೆ ಎಂದು ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಚೆನ್ನಾಗಿ ತಿಳಿದಿದ್ದರು. ಮಲ್ಯ ತಮ್ಮ ಸಂಸ್ಥೆಯ ನಷ್ಟವನ್ನು ಮರೆಮಾಚಲು ಯತ್ನಿಸಿದ್ದರೆನ್ನುವ ಸರ್ಕಾರದ ಆರೋಪ ನಿರಾಧಾರ ಎನ್ನುವುದಕ್ಕೆ ಐಡಿಬಿಐ ಅಧಿಕಾರಿಗಳಿಂದ ಬಂದ ಈ ಮೇಲ್ ಗಳೇ ಸಾಕ್ಷಿ" ಮಲ್ಯ ಪರ ವಕೀಲರು ಲಂಡನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಲ್ಯ ಆಗಲಿ, ಕಿಂಗ್ ಫಿಶರ್ ಸಂಸ್ಥೆಯಾಗಲಿ ಕೆಟ್ಟ ಉದ್ದೇಶಗಳಿಂದ ಬ್ಯಾಂಕ್ ಸಾಲಕ್ಕಾಗಿ ಅರ್ಜಿ ಹಾಕಿದ್ದರೆಂದು ಹೇಳಲು ಯಾವುದೇ ಪುರಾವೆ ಇಲ್ಲ ಎಂದು ವಕೀಲರು ಹೇಳಿದ್ದಾರೆ.

ಮಲ್ಯ ಹಸ್ತಾಂತರ ಕುರಿತಂತೆ ಲಂಡನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಮಲ್ಯ "ಸಮಗ್ರ ಪರಿಹಾರ ಪ್ರಸ್ತಾಪ" ಕ್ಕೆ ಬದ್ದವಾಗಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ವಿಚಾರಣೆ ಸೆಪ್ಟೆಂಬರ್ 18 ರಂದು ನಡೆಯಲಿದೆ.

ಆರ್ಥಿಕ ಅಪರಾಧಿ ಎಂದು ಗುರುತಿಸಲಾಗಿರುವ ಮಲ್ಯ ಅವರ ವಿರುದ್ಧ ಭಾರತದಲ್ಲಿ ಬ್ಯಾಂಕ್ ವಂಚನೆ ಮತ್ತು ಹಣದ  ಅಕ್ರಮ ವರ್ಗಾವಣೆ ಆರೋಪ ಹೊರಿಸಲಾಗಿದೆ..
Posted by: RHN | Source: ANI

ಈ ವಿಭಾಗದ ಇತರ ಸುದ್ದಿ